CM Post : ಡಿ.ಕೆ. ಶಿವಕುಮಾರ್ ಬರ್ತಡೆಗೆ ಹೈಕಮಾಂಡ್ ಕೊಡುತ್ತಾ ಬಂಪರ್ ಗಿಫ್ಟ್! ಸಿಗುತ್ತಾ ಕರುನಾಡ ಕುರ್ಚಿ?
ಬೆಂಗಳೂರು, ಮೇ 14: ಕರುನಾಡ ಗೆದ್ದ ಕಾಂಗ್ರೆಸ್ ನಲ್ಲಿ ಸದ್ಯ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಚಾರ ಚರ್ಚೆಯಾಗತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಸಾಮೂಹಿಕ ನಾಯಕತ್ವ ಗೆಲುವು ತಂದಿದೆ ಎಂದು ವಿಶ್ಲೇಷಿಸುತ್ತಿದ್ದು, ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣವಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಹುಟ್ಟ ಹಬ್ಬದಂದು ಕಾಂಗ್ರೆಸ್ ಹೈಕಮಾಂಡ್ ಬಂಪರ್ ಗಿಫ್ಟ್ ನೀಡಲಿದ್ದಾರೆ.
ಹೌದು, ಮೇ 15 ರಂದು ಡಿ ಕೆ ಶಿವಕುಮಾರ್ ಜನ್ಮದಿನ ಹಿನ್ನಲೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಉಡುಗೊರೆಯನ್ನ ನೀಡಲಿದ್ದು, ಕಾಂಗ್ರೆಸ್ ಹೈಕಮಾಂಡ್ ಗೆಲುವಿನ ಉಡುಗೊರೆಯಾಗಿ ಮುಖ್ಯಮಂತ್ರಿ ಕುರ್ಚಿ ನೀಡುತ್ತಾ ಎಂಬುದು ಪ್ರಶ್ನೆಯಾಗಿದೆ.

ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಸೋನಿಯಾ ಗಾಂಧಿಗೆ ಉಡುಗೊರೆ ಕೊಡ್ತಿನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಡಿದ ಶಪಥ ಮಾಡಿದ್ದರು. ಈಗ ಕಾಂಗ್ರೆಸ್ ಗೆದ್ದಾಯ್ತು. ಹೀಗಾಗಿ ಶಾಸಕಾಂಗ ಸಭೆಯ ಬಳಿಕ ದೆಹಲಿಗೆ ತೆರಳಲಿರುವ ಡಿ ಕೆ ಶಿವಕುಮಾರ್ ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡಿ ಉಡುಗೊರೆ ನೀಡಲಿದ್ದಾರೆ. ಅಲ್ಲದೇ ನನಗೆ ಉಡುಗೊರೆಯಾಗಿ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂಬುವ ನಿರೀಕ್ಷೆಯಲ್ಲಿ ಡಿ ಕೆ ಶಿವಕುಮಾರ್ ಇದ್ದಾರೆ.
ಈಗಾಗಲೇ 62 ನೇ ವಯಸ್ಸಿನಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ರಾಜಯೋಗ ಶುರುವಾಗುತ್ತದೆ ಎಂದು ಭವಿಷ್ಯ ಹೇಳಿದ್ದು, ಮೇ 15 ರಂದು 61 ವರ್ಷಗಳನ್ನ ಪೂರೈಸುತ್ತಿರುವ ಡಿ ಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಪದವಿ ಸಿಗುವ ಮೂಲಕ ರಾಜಯೋಗ ಆರಂಭವಾಗಲಿದ್ಯಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇನ್ನೂ ಕಾಂಗ್ರೆಸ್ ನಲ್ಲಿ ಹಿಂದಿನಿಂದಲೂ ಒಂದು ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆದವರು ಕಾಂಗ್ರೆಸ್ ಬಹುಮತ ಬಂದಾಗ ಮುಖ್ಯಮಂತ್ರಿ ಆಗುವುದು ಸಂಪ್ರದಾಯವಾಗಿದೆ. ಆದರೆ, 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ್ ಅವರು ಕೊರಟಗೆರೆ ಕ್ಷೇತ್ರದಲ್ಲಿ ಸೋತಿದ್ದರಿಂದ ಅವರನ್ನು ಮುಖ್ಯಮಂತ್ರಿ ಮಾಡದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು.
ಇದೀಗ ಕಾಂಗ್ರೆಸ್ 136 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಸಿಎಂ ಪಟ್ಟ ಕೊಡುವರೋ ಅಥವಾ ಸಂಪ್ರದಾಯ ಮುರಿದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುತ್ತಾರಾ ಎಂದು ಕಾದು ನೋಡ್ಬೇಕಾಗಿದೆ.












Click it and Unblock the Notifications