Operation Hasta: ಕಾಂಗ್ರೆಸ್ ನಿಂದ ಆಪರೇಷನ್ ಗಾಳ: ಬೈರತಿ ಬಸವರಾಜ್ ಹೇಳಿದ್ದೇನು?

ಬೆಂಗಳೂರು,ಆಗಸ್ಟ್ 25: ಲೋಕಸಮರಕ್ಕೆ ಸಜ್ಜಾಗಿರುವ ಕಾಂಗ್ರೆಸ್‌ ಆಪರೇಷನ್‌ ಹಸ್ತದ ಮೂಲಕ ಬೆಂಗಳೂರು ಭಾಗದ ಮೇಲೆ ಕಣ್ಣೀಟ್ಟಿದ್ದು, ಎಸ್‌ ಟಿ ಸೋಮಶೇಖರ್‌ ಬಳಿಕ ಕೆಆರ್ ಪುರಂ ಕ್ಷೇತ್ರದ ಶಾಸಕ ಭೈರತಿ ಬಸವರಾಜ ಅವರಿಗೆ ಗಾಳ ಹಾಕಿದ್ದಾರೆ ಎನ್ನುವ ಸುದ್ದಿಗೆ ಸ್ವಹಃ ಭೈರತಿ ಬಸವರಾಜ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಯಾವುದೇ ಕಾರಣಕ್ಕೂ ನಾನು ಭಾರತೀಯ ಜನತಾ ಪಕ್ಷ ತೊರೆಯಲ್ಲ. ನಾನು ಬಿಜೆಪಿ ಬಿಡುತ್ತಿದ್ದೇನೆಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಒಂದು ವೇಳೆ ನಾನು ಬಿಜೆಪಿ ಬಿಡುವ ಸಂದರ್ಭ ಒದಗಿ ಬಂದರೆ ನಿವೃತ್ತಿಯಾಗಿ ಮನೆಯಲ್ಲಿರುವೆ. ಅದರ ಬದಲು ಕಾಂಗ್ರೆಸ್ ಸೇರಲಾರೆ ಎಂದು ಆಪರೇಷನ್‌ ಹಸ್ತದ ಕುರಿತು ಸ್ಪಷ್ಟನೆ ನೀಡಿದ್ದಾರೆ.

Will Not Leave BJP For Any Reason Said MLA Byrati Basavaraj

ಇನ್ನೂ ಕಾಂಗ್ರೆಸ್‌ ನಾಯಕರು ಸಂಪರ್ಕಿಸಿದ್ದಾರೆಯೇ ಎಂಬ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​ನಿಂದ ನನಗೆ ಆಹ್ವಾನ ಬಂದಿಲ್ಲ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಿಜೆಪಿಯಲ್ಲಿ ನನಗೆ ಅಧಿಕಾರ, ಸ್ಥಾನ ಮಾನ, ಗೌರವ ಎಲ್ಲವೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ. ಯಾರು ಏನೇ ಹೇಳಿದರೂ ನಾನು ಬಿಜೆಪಿ ಕಾರ್ಯಕರ್ತನಾಗಿರುತ್ತೇನೆ. ನಮ್ಮ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲ ಬಗೆಹರಿಸಬೇಕಿದೆ ಎಂದ ಅವರ, ಎಸ್ ​​ಟಿ ಸೋಮಶೇಖರ್​ ಕೂಡ ಬಿಜೆಪಿ ಬಿಡುವುದಿಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+