Digital Transaction: ಚಿಲ್ಲರೆ ವ್ಯಾಪಾರಕ್ಕೂ ಡಿಜಿಟಲ್ ಪೇಮೆಂಟ್ ಮಾಡುವ ಮುಂಚೆ ಇಲ್ನೋಡಿ
ಮೆಣಸಿನಕಾಯಿ, ಸೊಪ್ಪು , ತರಕಾರಿಯಿಂದ ಎಲ್ಲದಕ್ಕೂ ಈಗ ಮೊಬೈಲ್ ಮೂಲಕ ಆನ್‌ಲೈನ್ ಪೇಮೆಂಟ್ ನಡಿಯುತ್ತಿದೆ. ಬಹುತೇಕ ಸಣ್ಣ ಪುಟ್ಟ ವಹಿವಾಟುಗಳು 2000 ಸಾವಿರ ರೂಪಾಯಿಯ ಒಳಗೇ ಇರುತ್ತದೆ. ಇದೀಗ ಈ ಕಡಿಮೆ ಮೊತ್ತದ ಹಣ ವಹಿವಾಟಿನ ಮೇಲೂ ಕೇಂದ್ರ ಸರ್ಕಾರದ ಜಿಎಸ್‌ಟಿ ಕಣ್ಣು ಬಿದ್ದಿದೆ. ಇನ್ಮುಂದೆ 2000 ಸಾವಿರ ರೂಪಾಯಿ ಹಣ ವಹಿವಾಟು ಮಾಡುವ ಮುನ್ನ ನೀವು ವಿಚಾರ ಮಾಡಬೇಕಾದ ವಿಷಯವಿದು. ಕೇಂದ್ರ ಸರ್ಕಾರದ ಪ್ರಸ್ತಾವನೆ ಏನು, ಹಣ ವಹಿವಾಟಿನ ಮೇಲೆ ಸರ್ಕಾರ ತೆಗೆದುಕೊಳ್ಳಲು ಮುಂದಾಗಿರುವ ಕ್ರಮವೇನು ಎನ್ನುವ ವಿವರ ಇಲ್ಲಿದೆ.
ಕೇಂದ್ರ ಸರ್ಕಾರವು ಈಗಾಗಲೇ ದೇಶದಲ್ಲಿ ಹಲವು ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿದೆ. ಕೆಲವು ವಸ್ತುಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ಇದ್ದರೆ, ಇನ್ನು ಕೆಲವು ವಸ್ತುಗಳ ಮೇಲೆ ಶೇ 22ರಷ್ಟು ಜಿಎಸ್‌ಟಿ ಇದೆ. ಇದೀಗ ಕೇಂದ್ರ ಸರ್ಕಾರದ ಜಿಎಸ್‌ಟಿ ಕೌನ್ಸಿಲ್ (ಸರಕು ಮತ್ತು ಸೇವಾ ತೆರಿಗೆ) ನಿಂದ 2000 ಸಾವಿರ ರೂಪಾಯಿ ಒಳಗಿನ ವಹಿವಾಟಿಗೂ ಅಂದರೆ ಎರಡು ಸಾವಿರ ರೂಪಾಯಿಯ ವರೆಗೂ ನಡೆಯುವ ಸಣ್ಣ ಡಿಜಿಟಲ್ ಪಾವತಿಯ ಮೇಲೂ ಶೇ 18ರಷ್ಟು ಜಿಎಸ್‌ಟಿ ವಿಧಿಸುವ ಸಾಧಕ - ಬಾಧಕಗಳ ಬಗ್ಗೆ ಚರ್ಚೆ ನಡೆದಿದೆ. ಈ ಸಂಬಂಧ ಈಗಾಗಲೇ ಚರ್ಚೆ ಪ್ರಾರಂಭವಾಗಿದೆ. ಇಲ್ಲಿಯವರೆಗೆ 2000 ಸಾವಿರ ರೂಪಾಯಿ ಒಳಗಿನ ಡಿಜಿಟಲ್ ವಹಿವಾಟಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.

ಇನ್ನು ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಕ್ರಾಂತಿ ಜೋರಾಗಿದ್ದು, ಇತೀಚಿನ ವರ್ಷಗಳಲ್ಲಿ ಶೇ 80ಕ್ಕೂ ಹೆಚ್ಚರಷ್ಟು ಡಿಜಿಟಲ್ ವಹಿವಾಟುಗಳು 2000 ಸಾವಿರ ರೂಪಾಯಿಗಿಂತ ಕಡಿಮೆ ಇರುತ್ತವೆ. ಇನ್ನು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದ್ದು, ಈ ರೀತಿಯ ಪ್ರಸ್ತಾವನೆಯೊಂದರ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಇಲ್ಲಿಯವರೆಗೆ ಜಿಎಸ್‌ಟಿ ವಿಧಿಸುವ ಬಗ್ಗೆ ಅಧಿಕೃತ ಪ್ರಕಟಣೆ ಇಲ್ಲಿಯವರೆಗೆ ಬಂದಿಲ್ಲ. ಆದರೆ, ಈ ರೀತಿ ಸಣ್ಣ ಡಿಜಿಟಲ್ ವಹಿವಾಟಿನ ಮೇಲೆ ಜಿಎಸ್‌ಟಿ ವಿಧಿಸುವುದರಿಂದ ಸಣ್ಣ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ.
ಜನ ವಿರೋಧಿ ಕೇಂದ್ರ ಸರ್ಕಾರ
ಇನ್ನು ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯ ಬಗ್ಗೆ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಆರೋಗ್ಯ ವಿಮೆಯ ಮೇಲೆ ತೆರಿಗೆ, ಜೀವ ವಿಮೆಯ ಕಂತು ಕಟ್ಟುವುದರ ಮೇಲೂ ತೆರಿಗೆ, ಆರೋಗ್ಯ ಸೇವೆಗಳು, ಔಷಧಗಳ ಮೇಲೂ ದುಬಾರಿ ತೆರಿಗೆ, ಬ್ಯಾಂಕುಗಳಲ್ಲಿ ಹಣ ಹಾಕಿದರೂ ಶುಲ್ಕ ವಿಧಿಸಿದೆ. ಹಣ ತೆಗೆದರೂ ಶುಲ್ಕ, ತಿಂಗಳಿಗೆ 30 ಸಾವಿರ ದುಡಿದರೆ ಆದಾಯ ತೆರಿಗೆ ಕಟ್ಟಬೇಕು, ಆದಾಯ ತೆರಿಗೆ ಕಟ್ಟಿ ಉಳಿದ ಹಣದಲ್ಲಿ ಬದುಕು ನಡೆಸುವುದಕ್ಕೂ GST ತೆರಿಗೆಗೆ ಬೆಲೆ ತೆರಬೇಕು.
ಇದು ಕೇಂದ್ರ ಸರ್ಕಾರ ಜನರ ರಕ್ತ ಹೀರುತ್ತಿರುವ ಪರಿ ಎಂದು ಕಿಡಿಕಾರಿದೆ. ಮುಂದುವರಿದು ಈಗ ₹2000 ಒಳಗಿನ ಮೊತ್ತದ ಇ-ಪೇಮೆಂಟ್ ಗಳಿಗೂ 18% GST ವಿಧಿಸುವ ಶಿಫಾರಸು GST ಕೌನ್ಸಿಲ್ ಮುಂದಿದೆಯಂತೆ, ಜನ ವಿರೋಧಿ ಕೇಂದ್ರ ಸರ್ಕಾರ ಈ ತೆರಿಗೆಯನ್ನೇನಾದರೂ ಜಾರಿ ಮಾಡಿದರೆ ಜನರ ಬದುಕು ಬೀದಿಗೆ ಬರುವುದು ನಿಶ್ಚಿತ. ಸಿರಿವಂತ ಉದ್ಯಮಿಗಳಿಗೆ ಸಾಲ ಮನ್ನಾ, ಬಡವರ ಚಿಲ್ಲರೆ ಹಣಕ್ಕೆ ಕನ್ನ ಎಂದು ದೂರಿದೆ.












Click it and Unblock the Notifications