ಇನ್ನೆರೆಡು ದಿನ ಕರ್ನಾಟಕಾದ್ಯಂತ ಭಾರಿ ಮಳೆ ,ತುಂಬಿ ಹರಿಯಲಿವೆ ನದಿಗಳು
ಬೆಂಗಳೂರು, ಜುಲೈ 25: ಕರ್ನಾಟಕಾದ್ಯಂತ ಇನ್ನೆರೆಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದು ವಾರದಿಂದ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಮಲೆನಾಡು, ಉತ್ತರ ಕನ್ನಡ ಭಾಗಗಳಲ್ಲಿ ಮಳೆಯಾಗುತ್ತಿತ್ತು. ಆದರೆ ಬುಧವಾರದಿಂದ ಉತ್ತರ ಕರ್ನಾಟಕ ಭಾಗಗಳಲ್ಲೂ ಅತಿ ಹೆಚ್ಚು ಮಳೆಯಾಗಿದೆ. ಬಾಗಲಕೋಟೆ, ಗದಗ, ವಿಜಯಪುರದಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಉತ್ತರ ಕನ್ನಡ, ಬೆಂಗಳೂರು, ರಾಯಚೂರು, ಯಾದಗಿರಿ, ಕೊಡಗು, ಮಂಡ್ಯ, ಚಿಕ್ಕಮಗಳೂರು, ದಾವಣಗೆರೆ,ಕೋಲಾರ, ರಾಮನಗರದಲ್ಲಿ ಸಾಮಾನ್ಯ ಮಳೆಯಾಗಿದೆ. ಬಳ್ಳಾರಿಯಲ್ಲಿ ಅತಿ ಕಡಿಮೆ ಮಳೆಯಾಗಿದೆ.

ಶಿರಾಲಿ, ಕಾರವಾರ, ಹೊನ್ನಾವರದಲ್ಲಿ 10 ಸೆಂ.ಮೀ, ಕೋಟಾ, ಭಟ್ಕಳ, ಗೋಕರ್ಣದಲ್ಲಿ 9 ಸೆಂ.ಮೀ, ಉಡುಪಿ, ಗೇರುಸೊಪ್ಪ, ಮಂಗಳೂರು, ಬೂಡಬಿದಿರೆ, ಕುಂದಾಪುರ, ಸಿದ್ದಾಪುರದಲ್ಲಿ 7 ಸೆಂ.ಮೀ ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕಾದ್ಯಂತ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ.
ಮಹಾರಾಷ್ಟ್ರದಿಂದ ಇದೀಗ ಇದೀಗ ಕರ್ನಾಟಕಕ್ಕೂ ಭಾರಿ ಮಳೆಯ ಆಗಮನವಾಗಲಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ನಿರ್ಮಾಣವಾಗಿದ್ದು, ಸಮುದ್ರದ ಮಟ್ಟಕ್ಕಿಂತ 7.6 ಕಿ.ಮೀ ಎತ್ತರದಲ್ಲಿ ಸೈಕ್ಲೋನ್ ಸರ್ಕ್ಯುಲೇಷನ್ ಏರ್ಪಟ್ಟಿದೆ.












Click it and Unblock the Notifications