ಪ್ರಬಲ ಜಾತಿಯ ಬೆಂಬಲ ಇದ್ದರೂ ಡಿಕೆ ಶಿವಕುಮಾರ್‌ಗಿಂತ ಸಿದ್ದರಾಮಯ್ಯ ಹೆಚ್ಚು ಜನಪ್ರಿಯ; ಕಾರಣವೇನು?
ಬೆಂಗಳೂರು, ಮೇ. 18: ನಾಲ್ಕು ದಿನಗಳ ಸಿಎಂ ಆಯ್ಕೆ ಡ್ರಾಮಾಕ್ಕೆ ಕೊನೆಗೂ ತೆರೆಬಿದ್ದಿದೆ. ಸಿದ್ದರಾಮಯ್ಯ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಹಠಕ್ಕೆ ಹೈಕಮಾಂಡ್ ಕರಗಿದ್ದು, ಸಿಎಂ ಸ್ಥಾನಕ್ಕೆ ಅವರನ್ನೇ ಸೂಚಿಸಿದೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೇ, ರಾಜ್ಯದ ಪ್ರಬಲ ಜಾತಿಗಳಲ್ಲಿ ಒಂದಾದ ಒಕ್ಕಲಿಗರ ಬೆಂಬಲ ಡಿಕೆ ಶಿವಕುಮಾರ್ ಬೆನ್ನಿಗಿದ್ದರೂ ಕೂಡ ಮಾಜಿ ಸಿಎಂ ಸಿದ್ದರಾಮಯ್ಯಗೆ ಜನಪ್ರಿಯತೆ ಹೆಚ್ಚು. ರಾಜ್ಯದಲ್ಲಿ ಅವರಿಗಿರುವ ಗೌರವವೇ ಬೇರೆ. ಸಿಎಂ ಆಯ್ಕೆಗೆ ಸಮೀಕ್ಷೆಗಳಲ್ಲಿ ಸಿದ್ದರಾಮಯ್ಯ ಅವರೇ ಜನರ ನೆಚ್ಚಿನ ಆಯ್ಕೆಯಾಗಿತ್ತು. ಇಲ್ಲಿ ಜಾತಿಗಿಂತ ವ್ಯಕ್ತಿತ್ವವೇ ಮುಖ್ಯವಾಗಿದೆ. ಹಾಗಾದರೆ ಡಿಕೆ ಶಿವಕುಮಾರ್‌ಗಿಂತ ಸಿದ್ದರಾಮಯ್ಯ ಅವರ ಜನಪ್ರಿಯತೆಗೆ ಕಾರಣಗಳನ್ನು ನೋಡುವ.

1. ಭ್ರಷ್ಟಾಚಾರದ ಆರೋಪವಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳು ಹಣ ಹೊಡೆದಿದ್ದಾರೆ. ತಮ್ಮ ಸರ್ಕಾರದ ಅವಧಿಯಲ್ಲಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದರೂ ಕೂಡ ಅವರ ವಿರುದ್ಧ ಭ್ರಷ್ಟಾಚಾರದ ಆರೋಪವಿಲ್ಲ. ಇಂದಿಗೂ ರಾಜ್ಯದ ಇತ್ತೀಚಿನ ಮುಖ್ಯಮಂತ್ರಿಗಳ ಪೈಕಿ ಶುದ್ಧ ಹಸ್ತರಾಗಿ ಸಿದ್ದರಾಮಯ್ಯ ನಿಲ್ಲುತ್ತಾರೆ.
2. ಯಶಸ್ವಿ ಸಿಎಂ: ಸಿದ್ದರಾಮಯ್ಯ ರಾಜ್ಯ ಕಂಡ ಮುಖ್ಯಮಂತ್ರಿಗಳಲ್ಲಿ ಯಶಸ್ವಿ ಸಿಎಂಗಳಲ್ಲಿ ಒಬ್ಬರು. ಅವರು ತಂಡ ಯೋಜನೆಗಳು ಬಡವರ ಹೊಟ್ಎ ತುಂಬಿಸಿದರ ಜೊತೆಗೆ ಕೋಟ್ಯಾಂತರ ಮಂದಿಗೆ ನೆರವಾಗಿವೆ. ಯಾವಾಗಲೂ ಸಾಮಾಜಿಕ ನ್ಯಾಯದ ಪರಿಧಿಯಲ್ಲಿ ಕೆಲಸ ಮಾಡುವ ಒಬ್ಬ ಯಶಸ್ವಿ ರಾಜಕಾರಣಿಯಾಗಿ ಸಿದ್ದರಾಮಯ್ಯ ಗುರಿತಿಸಿಕೊಂಡಿರುವುದು ಅವರ ಜನಪ್ರಿಯತೆಗೆ ಮುಖ್ಯ ಕಾರಣ.

3. ಅಹಿಂದ ನಾಯಕ: ಸಿದ್ದರಾಮ್ಯಯ ಅವರನ್ನು ಅಹಿಂದ ನಾಯಕ ಎಂದು ಬಿಂಬಿಸಲಾಗಿದೆ. ಅಹಿಂದ ಎಂದರೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು, ಬಹುಜನ, ಮುಸ್ಲಿಂ ಸಮುದಾಯ ಸೇರಿದೆ. ಈ ವರ್ಗವನ್ನು ಯಶಸ್ವಿಯಾಗಿ ತನ್ನೆಡೆಗೆ ತಿರುಗಿಸಿಕೊಂಡಿದ್ದು ಸಿದ್ದರಾಮಯ್ಯ. ಅಹಿಂದ ನಾಯಕ ಎಂದರೇ ಜನಪ್ರಿಯರಾಗಿರುವ ಕರ್ನಾಟಕದ ಮುಖ್ಯ ರಾಜಕಾರಣಿ.
4. ಜಾತಿಯಾಚೆಗೂ ಸಿದ್ದರಾಮಯ್ಯ ಮೋಡಿ: ಸಿದ್ದರಾಮಯ್ಯ ಕೇವಲ ಕುರುಬ ನಾಯಕ ಎಂದು ಗುರುತಿಸಿಕೊಂಡವರಲ್ಲ. ಜಾತಿಯಿಂದ ಕುರುಬರಾದರೂ ಕೂಡ ಅವರು ಜಾತ್ಯಾತೀತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಮುಸ್ಲಿಂ ಸಮುದಾಯ, ಹಿಂದುಳಿದ ಜಾತಿಗಳು, ಲಿಂಗಾಯತರು, ದಲಿತರೂ ಅವರನ್ನು ಗೌರವಿಸುತ್ತಾರೆ. ಜಾತಿಗೆ ಸೀಮಿತವಾಗದೆ ಇದ್ದದ್ದು ಅವರ ಜನಪ್ರಿಯತೆಯನ್ನು ಹೆಚ್ಚಿಸಿದೆ.

5. ಲಿಂಗಾಯತರ ಬೆಂಬಲ: ಸಿದ್ದರಾಮಯ್ಯ ಅವರಿಗೆ ಅಹಿಂದ ಜೊತೆಗೆ ಲಿಂಗಾಯತರ ಬೆಂಬಲ ಕೂಡ ಇದೆ. ರಾಜ್ಯದಲ್ಲಿ ಲಿಂಗಾಯತ ಧರ್ಮವನ್ನು ಹೊಡೆದವರು ಎಂದು ವಿಪಕ್ಷಗಳು ಟೀಕಿಸಿದ್ದರೂ ಅದಕ್ಕೆ ಸರಿಯಾದ ಸ್ಪಷ್ಟನೆ ನೀಡಿದ ಮತ್ತೆ ಅದೇ ಸಮುದಾಯವನ್ನು ತನ್ನೆಡೆಗೆ ಸೆಳೆದುಕೊಂಡವರು ಸಿದ್ದರಾಮಯ್ಯ. ಲಿಂಗಾಯತ ನಾಯಕರು ಸಿದ್ದರಾಮಯ್ಯ ಬೆನ್ನಿಗಿದ್ದಾರೆ. ಉತ್ತರ ಕರ್ನಾಟಕದ ಶಾಸಕರಾದ ಎಂಬಿ ಪಾಟಿಲ್, ವಿನಯ್ ಕುಲಕರ್ಣಿ, ವಿಜಯಾನಂದ ಕಾಶ್ಯಪ್ಪನವರ ಬೆಂಬಲ ಸಿದ್ದರಾಮಯ್ಯಗಿದೆ.
6. ಒಕ್ಕಲಿಗರ ವಿರೋಧಿ ಹಣೆಪಟ್ಟಿಯನ್ನು ಗೆದ್ದ ಸಿದ್ದರಾಮಯ್ಯ: ಕಾಂಗ್ರೆಸ್ ಸೇರುವ ಮೊದಲು ಜೆಡಿಎಸ್‌ನಲ್ಲಿ ಇದ್ದವರು. ಪಕ್ಷ ತೊರೆದ ಸಿದ್ದರಾಮಯ್ಯ ಅವರನ್ನು ಒಕ್ಕಲಿಗರ ವಿರೋಧಿ ಎಂದು ಬಿಂಬಿಸಲಾಗಿತ್ತು. ಆದರೆ, ಅದನ್ನು ಜಾಣ್ಮೆಯಿಂದ ಗೆದ್ದವರು ಸಿದ್ದರಾಮಯ್ಯ. ಇದೇ ಕಾರಣಕ್ಕೆ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದೆ.
7. ಜನಪ್ರಿಯತೆ: ಸಿದ್ದರಾಮಯ್ಯ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ರಾಜ್ಯದ ಯಾವುದೇ ಭಾಗದಲ್ಲಿ ಹೋದರೂ ಅವರನ್ನು ಒಪ್ಪಿ ಅಪ್ಪಿಕೊಳ್ಳೂವ ಜನರಿದ್ದಾರೆ. ಇದಕ್ಕೆ ಅವರು ಸಿಎಂ ಆಗಿದ್ದಾಗ ಮತ್ತು ನಂತರದ ದಿನಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಕಾರಣವಾಗಿದೆ. ಒಳ್ಳೆಯತನ ಮತ್ತು ಜನರ ಬಗ್ಗೆ ಯೋಚಿಸುವ ಅವರ ಗುಣವೇ ಜನರನ್ನು ಹೆಚ್ಚು ಆಕರ್ಷಿಸುತ್ತದೆ.
8. ಭಾಗ್ಯಗಳು: ಸಿದ್ದರಾಮಯ್ಯ ಅವರನ್ನು ಭಾಗ್ಯಗಳ ಸರದಾರ ಎಂದೇ ಕರೆಯಲಾಗುತ್ತದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಭಾಗ್ಯ ಜ್ಯೋತಿ, ತಾಳಿ ಭಾಗ್ಯಗಳ ಜೊತೆಗೆ ಹಲವು ಭಾಗ್ಯಗಳನ್ನು ಜರಿಗೆ ನೀಡಿದವರು ಅವರು. ಅನ್ನಕ್ಕಾಗಿ ಕಷ್ಟ ಪಡುವ, ರಾಜ್ಯದ ಯಾವುದೇ ಒಬ್ಬ ಪ್ರಜೆಯೂ ಹಸಿವಿನಿಂದ ಮಲಗಬಾರದು ಎಂಬ ಇಚ್ಛೆಯಿಂದ ಸಿದ್ದರಾಮಯ್ಯ ಜಾರಿಗೆ ತಂದ ಅನ್ನಭಾಗ್ಯ ಇಂದಿಗೂ ಜನಪ್ರಿಯ ಯೋಜನೆ. ಗ್ರಾಮೀಣ ಭಾಗಗಳಲ್ಲಿ ಸಿದ್ದರಾಮಯ್ಯ ಅವರ ಜನಪ್ರಿಯತೆಗೆ ಇದು ದೊಡ್ಡ ಕೊಡುಗೆ ನೀಡಿದೆ.












Click it and Unblock the Notifications