ನಾನೇಕೆ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಬೇಕು: ರಣದೀಪ್ ಸುರ್ಜೇವಾಲಾ
ಬೆಂಗಳೂರು, ಜೂನ್ 16: ಬೆಂಗಳೂರಿನಲ್ಲಿ ಸಚಿವರು ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಯಾವುದೇ ಸಭೆ ನಡೆಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಕರ್ನಾಟಕ ಉಸ್ತುವಾರಿ) ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಕುರಿತು ವಿವಾದದ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ, ಸುರ್ಜೆವಾಲಾ ತಾವು ಹೋಟೆಲ್‌ನಲ್ಲಿ ತಂಗಿದ್ದು, ಅಲ್ಲಿಗೆ ಕೆಲವು ಮಂತ್ರಿಗಳು ಚಹಾ ಕುಡಿಯಲು ಬಂದರು. ಅದೇ ಸಮಯದಲ್ಲಿ ಅವರೊಂದಿಗೆ ಹೋಟೆಲ್‌ನಲ್ಲಿದ್ದ ಬಿಬಿಎಂಪಿ ಅಧಿಕಾರಿಗಳೂ ನಮ್ಮ ಜೊತೆ ಸೇರಿಕೊಂಡರು ಎಂದರು.

ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಸಭೆಯ ಅಧ್ಯಕ್ಷತೆ ವಹಿಸುವ ಅಧಿಕಾರ ನನಗಿಲ್ಲ. ನಾನೇಕೆ ಇಂತಹ ಸಭೆ ನಡೆಸಬೇಕು. ವಿಧಾನಸಭಾ ಚುನಾವಣೆಯ ಸೋಲಿನ ಹತಾಶೆಯಿಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾಂಗ್ರೆಸ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.
ಆದರೆ ರಾಜ್ಯ ಸರ್ಕಾರದ ವ್ಯವಹಾರಗಳನ್ನು ನಿಯಂತ್ರಿಸುವ ನಿಯಮಗಳನ್ನು ಉಲ್ಲಂಘಿಸಿದ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಕರ್ನಾಟಕ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಶಾಸಕರುಗಳ ಸಭೆಯ ನೇತೃತ್ವ ವಹಿಸಿದ್ದಎಐಸಿಸಿ ಪ್ರಧಾನಿ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಅವರ ಸಭೆಯಲ್ಲಿ ಸರ್ಕಾರದ ಅಧಿಕಾರಿಗಳಿಗೆ ಭಾವಹಿಸಲು ಅವಕಾಶ ನೀಡಲಾಗಿದೆ. ಇದೀಗ ವಿವಾದಕ್ಕೀಡಾಗಿ ಜೆಡಿಎಸ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತ್ತು.
ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕರ ಜೊತೆಗೆ ಮಂಗಳವಾರ ಸಭೆ ನಡೆದಿದೆ ಎನ್ನಲಾಗಿತ್ತು. ಇದರಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಕುರಿತ ಫೋಟೋವನ್ನು ಟ್ವೀಟ್ ಮಾಡುವ ಬಿಜೆಪಿ ಸಹ ಟೀಕೆ ಮಾಡಿತ್ತು. ಇತ್ತ ಜೆಡಿಎಸ್ ಸಹ ಕಾಂಗ್ರೆಸ್ ನಡೆ ಖಂಡಿಸಿತ್ತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಸರ್ಕಾರದ ಸಭೆ ನಡೆಸಲು ಇವರ್ಯಾರು? ಎಂದು ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದರು.

ಕರ್ನಾಟಕ ರಾಜ್ಯ ಸರ್ಕಾರದ ಅಧಿಕಾರಿಗಳ ಸಭೆಯಲ್ಲಿ ದೆಹಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಉಪಸ್ಥಿತಿ ಕುರಿತು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಬಳಿಕ ಜಟಾಪಟಿ ಮುಂದುವರಿದಿತ್ತು. ಸಭೆ ನಡೆದಿಲ್ಲ, ಅಧಿಕೃತ ಸಭೆಯಲ್ಲ ಎಂದಿದ್ದೀರಿ, ಮತ್ತೇಕೆ ಸಭೆಗೆ ಕಡತಗಳನ್ನು ಹೊತ್ತೊಯ್ಯುವ ಜರೂರು ಏನಿತ್ತು? ಎಂದು ಕರ್ನಾಟಕ ಬಿಜೆಪಿ ಪ್ರಶ್ನೆ ಮಾಡಿತ್ತು.
ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಬಿಜೆಪಿಯು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿಸಭೆ ಅಧಿಕೃತವಲ್ಲ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳುತ್ತಿದ್ದಾರೆ. ಆದರೆ ಅಂಥ ಸಭೆಗೆ ಕಡತಗಳನ್ನು ಹೊತ್ತೊಯ್ಯುವ ಜರೂರತ್ತು ಏನಿತ್ತು?. ಅನಧಿಕೃತವಾಗಿ ಹಾಗೆ ಕಡತಗಳನ್ನು ತೆಗೆದೊಯ್ಯಲಾಗಿದೆ ಎಂದರೆ ಎಟಿಎಂ ಸರ್ಕಾರ (#ATMSarkara) ದ ಭ್ರಷ್ಟಾಚಾರಕ್ಕೆ ಇನ್ನೇನೂ ಸಾಕ್ಷಿ ಬೇಡ ಅಂತಲೇ ಅರ್ಥ ಎಂದು ಬಿಜೆಪಿ ಆರೋಪಿಸಿತ್ತು.












Click it and Unblock the Notifications