PM Modi Letter: ಮಾಜಿ ಮುಖ್ಯಮಂತ್ರಿಗೆ ಪ್ರಧಾನಿ ಮೋದಿ ಸುದೀರ್ಘ ಪತ್ರ ಬರೆದಿದ್ದೇಕೆ?
ದೆಹಲಿ, ಏಪ್ರಿಲ್ 30: ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ, ನೀರಾವರಿ ಸಚಿವರಾಗಿ, ಗೃಹ ಸಚಿವರಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿರುವ ನೀವು ಸಂಸದರಾಗಿ ನಮ್ಮ ತಂಡ ಸೇರುತ್ತಿರುವ ದೊಡ್ಡ ಶಕ್ತಿ ಎಂದು ಪತ್ರದಲ್ಲಿ ಪ್ರಧಾನಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಪತ್ರ ಬರೆದಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬರುವಂತೆ ಶುಭ ಕೋರಿದ್ದಾರೆ. ನೀವು ಸಂಸದರಾಗಿ ಕೇಂದ್ರದ ತಂಡ ಸೇರುತ್ತಿರುವುದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸಾಧನೆ ವಿವರಿಸಿದ ಪ್ರಧಾನಿ
ಸುದೀರ್ಘ ಪತ್ರದಲ್ಲಿ ಪ್ರಧಾನಿ ಮೋದಿಯವರು, ನೀವು ಮುಖ್ಯಮಂತ್ರಿ ಯಾಗಿ, ನೀರಾವರಿ ಸಚಿವರಾಗಿ ಗೃಹ ಸಚಿವರಾಗಿ, ಕಾನೂನು ಸಚಿವರಾಗಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದೀರಿ, ನೀವು ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಸುಮಾರು 30 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಮಾಡಿದ್ದೀರಿ.
ನಿಮ್ಮ ಕ್ಷೇತ್ರದಲ್ಲಿ ಸಿಮೆಂಟ್ ರಸ್ತೆಗಳು, ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡಿದ್ದೀರಿ, ಕೊವಿಡ್ ಸಂದರ್ಭದಲ್ಲಿ ನಿಮ್ಮ ಸ್ವಂತ ಮನೆಯನ್ನು ಕೊವಿಡ್ ಕೇಂದ್ರವನ್ನಾಗಿ ಮಾಡಿ ಆಸ್ಪತ್ರೆಗಳ ಮೇಲಿನ ಭಾರ ಕಡಿಮೆ ಮಾಡಿದ್ದೀರಿ ಎಂದು ಅವರು ಶ್ಲಾಘಿಸಿದ್ದಾರೆ.
ನೇಕಾರರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿ, ಆಧುನಿಕ ತಂತ್ರಜ್ಞಾನ ಬಳಸಿ ಅವರ ಜೀವನ ಮಟ್ಟ ಸುಧಾರಣೆ ಮಾಡಿದ್ದೀರಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡಿದ್ದೀರ, ನೀವು ಒಬ್ಬ ಕಾರ್ಯಕರ್ತರಾಗಿ ಪಡೆದ ಅನುಭವ ಜನ ಸೇವಕರಾಗಿ ಮಾಡಿದ ಸೇವೆ ಹಾವೇರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದಿದ್ದಾರೆ.

ಹಾವೇರಿ-ದೇಶದ ಅಭಿವೃದ್ಧಿಗೆ ನಾವು ಶ್ರಮಿಸುತ್ತೇವೆ
ಜನರ ಆಶೀರ್ವಾದದಿಂದ ನೀವು ಸಂಸದರಾಗಿ ನಮ್ಮ ತಂಡದ ಸದಸ್ಯರಾಗಿ ಬರುವುದು ನನಗೆ ದೊಡ್ಡ ಆಸ್ತಿ ಸಿಕ್ಕಂತೆ. ನಮ್ಮ ತಂಡ ಹಾವೇರಿ ಕ್ಷೇತ್ರ ಹಾಗೂ ದೇಶದ ಅಭಿವೃದ್ಧಿಗೆ ಶ್ರಮ ವಹಿಸಲಿದೆ. ನಾನು ಈ ಪತ್ರದ ಮೂಲಕ ಕ್ಷೇತ್ರದ ಜನತೆಗೆ ಹೇಳುವುದೇನೆಂದರೆ, ಇದು ಸಾಮನ್ಯ ಚುನಾವಣೆಯಲ್ಲಿ ಇದು ದೇಶದ ಪ್ರತಿಯೊಂದು ಕುಟುಂಬದ ವಿಶೇಷವಾಗಿ ಹಿರಿಯ ನಾಗರಿಕರು ಕಳೆದು ಐದಾರು ದಶಕದಲ್ಲಿ ಅನುಭವಿಸಿದ ತೊಂದರೆಗಳು ಕಳೆದ ಒಂದು ದಶಕದಲ್ಲಿ ಸಾಕಷ್ಟು ಬೆಳವಣಿಗೆಗಳನ್ನು ಕಂಡಿದ್ದಾರೆ.
ಅನೇಕ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇನ್ನೂ ಸಾಕಷ್ಟು ಸಮಸ್ಯೆಗಳಿವೆ. ಈ ಚುನಾವಣೆ ಜನರ ಜೀವನಮಟ್ಟವನ್ನು ಇನ್ನಷ್ಟು ಸುಧಾರಣೆಗೊಳಿಸಲು ಪ್ರೇರಣೆಯಾಗಲಿದೆ ಎಂದರು.
ಜನರು ದೇಶದ ಅಭಿವೃದ್ಧಿ ಪರವಾಗಿದ್ದಾರೆ
ಈ ಚುನಾವಣೆಯಲ್ಲಿ ಬಿಜೆಪಿ ಪಡೆಯುವ ಪ್ರತಿಯೊಂದು ಮತವೂ 2047 ಕ್ಕೆ ಅಭಿವೃದ್ಧಿ ಹೊಂದಿದ ಭಾರತ ಮಾಡಲು ಮಹತ್ವದ್ದಾಗಿವೆ. ಮೊದಲ ಎರಡು ಹಂತದ ಮತದಾನದಲ್ಲಿ ಮತದಾರರು ತಮ್ಮ ಮತಗಳ ಮೂಲಕ ದೇಶದ ಅಭಿವೃದ್ಧಿ ಪರ ಇರುವ ಎಂದು ಸಂದೇಶ ನೀಡಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಇಂಡಿ ಒಕ್ಕೂಟದ ಸಮಾಜ ಒಡೆಯುವ ಮನಸ್ಥಿತಿ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳ ಮೀಸಲಾತಿಯನ್ನು ತಮ್ಮ ಓಟ್ ಬ್ಯಾಂಕ್ ಸಮುದಾಯಕ್ಕೆ ಧರ್ಮಾಧಾರಿತ ಮೀಸಲಾತಿಯನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್‌ನ ಓಟ್ ಬ್ಯಾಂಕ್ ತಡೆಯಬೇಕು
ಕಾಂಗ್ರೆಸ್‌ನವರು ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಓಟ್ ಬ್ಯಾಂಕ್ ಸಮುದಾಯಕ್ಕೆ ಹಂಚಿಕೆ ಮಾಡುವ ಅಪಾಯಕಾರಿ ತೀರ್ಮಾನ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಒಟ್ಟಾಗಿ ತಡೆಯಬೇಕಿದೆ ಎಂದು ತಿಳಿಸಿದ್ದಾರೆ.
ಈಗ ಬೇಸಿಗೆ ಇರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆದರೆ, ದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಆದಷ್ಟು ಬೆಳಗಿನ ಸಮಯ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.
ಕಾರ್ಯಕರ್ತರಿಗೆ ಪ್ರಧಾನಿ ಆರೋಗ್ಯ ಸಲಹೆ
ಈ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರನ್ನು ಪ್ರೇರೆಪಿಸಿ ಹೆಚ್ಚಿನ ಮತದಾನವಾಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಬೂತ್ ಗೆಲ್ಲುವ ಮೂಲಕ ಲೋಕಸಭಾ ಕ್ಷೇತ್ರ ಗೆಲ್ಲುವಂತೆ ನೋಡಿಕೊಳ್ಳಬೇಕು.
ಇದೇ ವೇಳೆ ಕಾರ್ಯಕರ್ತರು ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ ಎಂದು ಪತ್ರದ ಮೂಲಕ ಪ್ರಧಾನಿ ಮನವಿ ಮಾಡಿದ್ದಾರೆ.
ನನ್ನ ಪ್ರತಿ ಕ್ಷಣವೂ ದೇಶದ ಜನರ ಶ್ರೇಯೋಭಿವೃದ್ದಿಗೆ ಮೀಸಲಿದೆ ಎಂದು ಹಾವೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಈ ಸಂದೇಶವನ್ನು ಎಲ್ಲ ಮತದಾರರಿಗೆ ತಲುಪಿಸಿ ಎಂದು ಪತ್ರದ ಮೂಲಕ ಪ್ರಧಾನಿ ತಿಳಿಸಿದ್ದಾರೆ.












Click it and Unblock the Notifications