ಪ್ರತೀ ಭಾನುವಾರ ಕರ್ಫ್ಯೂ ಘೋಷಿಸಿದ ಸರಕಾರ: ಇದರ ಹಿಂದಿನ ಕಾರಣ ಸ್ಪಷ್ಟ

ಬೆಂಗಳೂರು, ಮೇ 18: ನಾಲ್ಕನೇ ಹಂತದ ಲಾಕ್ ಡೌನ್ ಮೇ 31ರ ವರೆಗಿರಲಿದೆ. ಈ ಹಂತದಲ್ಲಿ ಸರಕಾರದ ಮಾರ್ಗಸೂಚಿಯೂ ಹೊರಬಿದ್ದಿದೆ. ಕೆಲವೇ ಕೆಲವು ನಿರ್ಬಂಧಗಳನ್ನು ಹೊರತು ಪಡಿಸಿದರೆ, ಮಿಕ್ಕಂತೆ ಎಲ್ಲಾ ನಾರ್ಮಲ್..

Recommended Video

      ಚೀನಾ ವಿಜ್ಞಾನಿಗಳು ಕಂಡುಹಿಡಿದಿರೋ ಔಷಧಿಯಿಂದ ಕೊರೊನಾ ಗುಣವಾಗುತ್ತಾ? | Oneindia Kannada

      ಇಷ್ಟು ದಿನ ಮನೆಯೊಳಗಿದ್ದು ಕೊರೊನಾ ಜೊತೆ ಹೋರಾಡಿದ್ದಾಗಿದೆ, ಇನ್ನೇನಿದ್ದರೂ ನಮ್ಮ ನಮ್ಮ ದೈನಂದಿನ ಕೆಲಸಗಳನ್ನು ಮಾಡಿಕೊಂಡು, ವೈರಸ್ ಜೊತೆ ಹೊರಗಡೆ ಗುದ್ದಾಡಬೇಕಿದೆ. ಒಂದರ್ಥದಲ್ಲಿ ನಮ್ಮ ತಲೆಗೆ ನಮ್ಮದೇ ಕೈ..

      ರಾಜ್ಯ ಸರಕಾರ ಹೊರಡಿಸಿದ ಹೊಸ ಅಧಿಸೂಚನೆಯ ಪ್ರಕಾರ, ಇನ್ನು ಮುಂದೆ (ಅಂದರೆ ಮೇ 31ಕ್ಕೆ ಲಾಕ್ ಡೌನ್ ಗೊಳ್ಲದಿದ್ದರೆ) ಪ್ರತೀ ಭಾನುವಾರ ಜನತಾ ಕರ್ಫ್ಯೂ ಇರಲಿದೆ. ಮುಖ್ಯಮಂತ್ರಿಗಳೂ ಇದನ್ನು ಗೋಷ್ಠಿಯಲ್ಲಿ ಹೇಳಿದ್ದಾರೆ.

      Why Government Of Karnataka Declared Sunday As Like A Curfew Day

      ಅಂದು ತುರ್ತು ಸೇವೆಯನ್ನು ಹೊರತು ಪಡಿಸಿ, ಮನೆಯಿಂದ ಸುಮ್ಮನೆ ಹೊರಗೆ ಬರುವ ಹಾಗಿಲ್ಲ. ಅಂಗಡಿ, ಮುಂಗಟ್ಟುಗಳು ತೆರೆಯುವ ಹಾಗಿಲ್ಲ. ಮದ್ಯದಂಗಡಿ ಓಪನ್ ಆಗುವುದಿಲ್ಲ. ಅಂದಿಗೆ ಏನೇನು ಬೇಕೋ, ಅದನ್ನು ಶನಿವಾರವೇ ಖರೀದಿಸಬೇಕಿದೆ.

      ಭಾನುವಾರವನ್ನು ಕರ್ಫ್ಯೂ ಘೋಷಿಸಲು ಇರುವ ಪ್ರಮುಖ ಕಾರಣವೆಂದರೆ, ವಾರದ ದಿನಗಳ ಜನರ ಓಡಾಟ ಬೇರೆ, ಭಾನುವಾರದ ಓಡಾಟವೇ ಬೇರೆ. ಅದರಲ್ಲೂ ಪ್ರಮುಖವಾಗಿ, ಲಾಕ್ ಡೌನ್ ಸಡಿಲಗೊಂಡ ನಂತರ ಬಂದಿರುವ ಸಂಡೇ ಆಗಿರುವುದರಿಂದ, ಜನರು, ಕುಟುಂಬ ಸಮೇತರಾಗಿ ಹೊರ ಬರುವ ಸಾಧ್ಯತೆ ಇರುವುದರಿಂದ, ಸರಕಾರ ಮುನ್ನೆಚ್ಚರಿಕೆಯಾಗಿ ಈ ಕ್ರಮ ತೆಗೆದುಕೊಂಡಿದೆ.

      ಆರ್ಥಿಕ ಚಟುವಟಿಕೆ ಆರಂಭಗೊಳ್ಲಲಿ ಎನ್ನುವ ಕಾರಣಕ್ಕಾಗಿ, ಸರಕಾರ, ಲಾಕ್ ಡೌನ್ ಸಡಿಲಗೊಳಿಸುವ ರಿಸ್ಕ್ ತೆಗೆದುಕೊಂಡಿದೆ ಎನ್ನುವುದು ಅತ್ಯಂತ ಸ್ಪಷ್ಟ. ಹಾಗಾಗಿಯೇ, ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ ಏಳರಿಂದ ಸಂಜೆಯ ಏಳರವರೆಗೆ ಇದ್ದ, ಬಹುತೇಕ ಎಲ್ಲಾ ನಿರ್ಬಂಧಗಳನ್ನು ಸರಕಾರ ಸಡಿಲಿಸಿದೆ.

      ಭಾನುವಾರ, ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳೂ ಓಡುವುದಿಲ್ಲ. ಹಾಗಾಗಿ, ಗುಂಪು ಗುಂಪಾಗಿ ಹೊರಬರುವುದು, ಖರೀದಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು, ಕುಟುಂಬದವರ ಮನೆಗೆ ಪ್ರಯಾಣಿಸುವುದು, ನಾನ್ ವೆಜ್ ಖರೀದಿಸಲು ಉದ್ದುದ್ದ ಕ್ಯೂ ನಿಲ್ಲುವುದು.. ಹೀಗೆ ಹಲವು ಸಾಧ್ಯತೆಗಳು ಇರುವುದರಿಂದ, ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+