ಮುಸ್ಲಿಂ ಪರವಾಗಿದ್ದ ಹೆಚ್‌ ಡಿ ಕುಮಾರಸ್ವಾಮಿ ಏಕಾಏಕಿ ಜೈ ಶ್ರೀರಾಮ ಎಂದು ಘೋಷಣೆ ಮೊಳಗಿಸಿದ್ದು ಯಾಕೆ?

ಬೆಂಗಳೂರು, ಡಿಸೆಂಬರ್‌ 11: ಜಾತ್ಯಾತೀಕ ಪಕ್ಷ ಎಂದೇ ಗುರುತಿಸಿಕೊಂಡಿರುವ ಜೆಡಿಎಸ್ ನಲ್ಲಿ ಮುಸ್ಲಿಂ ಸಮುದಾಯಕ್ಕೂ ಹೆಚ್ಚು ಮನ್ನಣೆಯನ್ನ ನೀಡಲಾಗಿತ್ತು. ಆದರೆ ಕಾಲ ಕ್ರಮೇಣ, ಅಂದರೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಳಿಕ ಜೆಡಿಎಸ್‌ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಅವರು ಜಾತ್ಯಾತೀತ ತತ್ವ ದಿಂದ ಸಂಪೂರ್ಣ ಹಿಂದುತ್ವದ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ.

ಹೌದು, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಹಾಗೂ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಮತಗಳು ಜೆಡಿಎಸ್‌ ಪಕ್ಷವನ್ನ ಕೈ ಹಿಡಿದಿತ್ತು. ಅದರಲ್ಲೂ ರಾಮನಗರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಜೆಡಿಎಸ್‌ ನ ಭದ್ರಕೋಟೆಯಾಗಿತ್ತು. ಆದರೆ ರಾಮನಗರ ವಿಧಾನಸಭಾ ಕ್ಷೇತ್ರ ಸೇರಿದಂತ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ದಳಪತಿಗಳ ನಿರೀಕ್ಷೆಯಂತೆ ಮುಸ್ಲೀಂ ಮತಗಳು ಬಂದಿಲ್ಲ, ಅದರಲ್ಲೂ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಸೋಲಿಗೆ ಅಲ್ಪಸಂಖ್ಯಾತ ಮತಗಳನ್ನ ನೀಡದೇ ಇರುವುದೇ ಕಾರಣ ಎಂದು ಹೇಳಲಾಗಿದೆ.

Why Did HD Kumaraswamy Suddenly Begin Chanting Jai Shree Ram Despite Previous Support for Muslims?

ಹೀಗಾಗಿ ಕುಮಾರಸ್ವಾಮಿ ಜಾತ್ಯಾತೀತ ತತ್ವ ದಿಂದ ಸಂಪೂರ್ಣ ಹಿಂದುತ್ವದ ಕಡೆ ಕುಮಾರಸ್ವಾಮಿ ಅವರು ವಾಲುತ್ತಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಮೈತ್ರಿಯಾದ ಹಿನ್ನಲೆ ಹಿಂದುತ್ವದತ್ತ ಕುಮಾರಸ್ವಾಮಿ ಮೊರೆ ಹೋಗಿದ್ದಾರೆ. ದತ್ತ ಮಾಲೆ ವಿರೋಧಿಸುತ್ತಿದ್ದ ಕುಮಾರಸ್ವಾಮಿ ಈಗ ಮಾಲೆ ಹಾಕೋದ್ರಲ್ಲಿ ತಪ್ಪೇನು ಅಂತಿದಾರೆ. ಅಲ್ಲದೇ ನಮ್ಮ ಧರ್ಮ ನಾನು ಪಾಲಿಸಿದರೆ ಏನು ತಪ್ಪು ಎಂಬಂತೆ ಹೇಳಿಕೆ ಕೊಡುತ್ತಿದ್ದಾರೆ.

ಅಲ್ಪಸಂಖ್ಯಾತ ಮತಗಳು ಹೇಗೂ ದೂರವಾಗಿವೆ. ಹೀಗಿರುವ ಹಿಂದೂ ಮತಗಳನ್ನಾದ್ರೂ ಕ್ರೋಢೀಕರಿಸಿಕೊಳ್ಳುವ ಪ್ಲಾನ್ ನನ್ನ ಕುಮಾರಸ್ವಾಮಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಅಂದ್ರೆ ಕೇವಲ ಒಕ್ಕಲಿಗರ ಪಕ್ಷ ಎಂಬ ಹಣೆ ಪಟ್ಟಿ‌ಇತ್ತು. ಇದನ್ನು ಕಳಚಿಕೊಳ್ಳುವ ಪ್ರಯತ್ನ ಕುಮಾರಸ್ವಾಮಿ ಮಾಡುತ್ತಿದ್ದಾರೆ.

ಕರಾವಳಿ ಭಾಗದ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಜೊತೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದು, ಭಾಷಣ ಮಾಡುವ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಜೈ ಶ್ರೀರಾಮ್ ಅಂತಾ ಘೋಷಣೆ ಮೊಳಗಿಸಿದ್ದಾರೆ. ಅಲ್ಲದೇ ಈ ಕಾರ್ಯಕ್ರಮ ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ..ಇಲ್ಲಿ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಲಾಗುತ್ತಿದೆ..ಈ‌ ಕಾರ್ಯಕ್ರಮ ಅಷ್ಟು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಗುರುಕುಲ ಪರಂಪರೆಯನ್ನು ಸಂಸ್ಕೃತಿಗಳನ್ನು ನೀಡಲಾಗುತ್ತಿದೆ. ಉತ್ತಮ ಶಿಸ್ತಿನ ಬದಕನ್ನು ಕಲಿಸಲಾಗುತ್ತಿದೆ..ಮಾನವೀಯತೆ ವಿಕಸನವನ್ನು ಇಲ್ಲಿ ನೀಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Why Did HD Kumaraswamy Suddenly Begin Chanting Jai Shree Ram Despite Previous Support for Muslims?

ಕಾರ್ಯಕ್ರಮದಲ್ಲಿ ಚಂದ್ರಯಾನ ಉಡಾವಣೆಯನ್ನು ಕಣ್ಣಿಗೆ ಕಟ್ಟುವ ಹಾಗೆ ತೋರಿಸಿದ್ದೀರಿ. ಬಾಲ್ಯದಲ್ಲಿ ರಾಮನ ಭಜನೆ ಮಾಡಿದನ್ನು ಇವತ್ತು ಮತ್ತೆ ನೆನಪಿಸಿದ್ದೀರಿ.ಪ್ರಭಾಕರ್ ಭಟ್ ಬದುಕಿನ ಒಳ್ಳೆಯ ನಡವಳಿಕೆ ಕಲಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕಣ್ಣು ತೆರೆಸುತ್ತಿದ್ದೀರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ ಇವತ್ತು ನನ್ನ ಕಣ್ಣು ತೆರೆದಿದೆ.ನನ್ನಲ್ಲಿ ತಪ್ಪುಗಳಾಗಿದೆ, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಭಾಷಣದ ಕೊನೆಗೆ ಜೈ ಶ್ರೀರಾಮ್ ಘೋಷಣೆ ಕೂಗಿ ಕುಮಾರಸ್ವಾಮಿ ಭಾಷಣ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+