Vijayalakshmi Darshan: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಮಗನ ಜೊತೆ ಬೆಂಗಳೂರು ತೊರೆದು ಹೋಗಿದ್ದೆಲ್ಲಿಗೆ?

Vijayalakshmi Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್‌ ಹಾಗೂ ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷ್ಮಿ ಅವರು ಮಗ ವಿನೀಶ್‌ ಜೊತೆ ಆಗಮಿಸಿ ಪತಿ ದರ್ಶನ್‌ನನ್ನು ಭೇಟಿಯಾಗಿದ್ದು, ಬಳಿಕ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದರು. ಇದೀಗ ವಿಜಯಲಕ್ಷ್ಮಿ ಅವರು ಮಗನೊಂದಿಗೆ ಬೆಂಗಳೂರು ತೊರೆದಿದ್ದಾರೆ ಎನ್ನುವ ಮಾಹಿತಿಯೊಂದು ಮುಲಗಳಿಂದ ಲಭ್ಯವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನ ಆಗಿರುವ ನಟ ದರ್ಶನ್ ಅವರನ್ನು ಬಿಡುಗಡೆ ಮಾಡಿಸಲು ಪತ್ನಿ ವಿಜಯಲಕ್ಷ್ಮೀ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಇದೀಗ ಅವರು ಮಗನೊಂದಿಗೆ ಕೊಡಗಿನ ಖಾಸಗಿ ರೆಸಾರ್ಟ್‌ಗೆ ಶಿಫ್ಟ್ ಆಗಿದ್ದಾರೆ ಎಂದು ಎನ್ನುವ ಮಾಹಿತಿಯೊಂದು ತಿಳಿದುಬಂದಿದೆ.

Why did actor Darshan s wife Vijayalakshmi go to Kodagu from Bengaluru

ದರ್ಶನ್‌ ಬಂಧನವಾದಾಗಿನಿಂದಲೂ, ದರ್ಶನ್ ಪರ-ವಿರೋಧ ಚರ್ಚೆಗಳು ಆಗುತ್ತಲೇ ಇವೆ. ಇನ್ನೂ ಇವೆಲ್ಲ ಚರ್ಚೆಗಳಿಂದ ನೆಮ್ಮದಿ ಕಳೆದುಕೊಂಡಿರುವ ವಿಜಯಲಕ್ಷ್ಮೀ ಅವರು ಇದೀಗ ತಮ್ಮ ಮಗನ ಜೊತೆ ಕೊಡಗಿನ ಕಡೆ ಪ್ರಯಾಣ ಬೆಳೆಸಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ವಿಜಯಲಕ್ಷ್ಮಿ ಅವರು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲು ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದು, "ನಿಮಗೆಲ್ಲ ಗೊತ್ತಿದೆ ಅಭಿಮಾನಿಗಳನ್ನು ದರ್ಶನ್ ಎಷ್ಟು ಪ್ರೀತಿ ಮಾಡುತ್ತಾರೆ ಅತಾ. ಇಂಥಹ ದುಃಖದ ಸಮಯದಲ್ಲಿ ನಾವು ಅವರಿಂದ ದೂರ ಇರುವಂತೆ ಆಗಿದೆ. ಹೊರಗಿನ ಪರಿಸ್ಥಿತಿ ಬಗ್ಗೆ ಅವರಿಗೆ ನಾನು ತಿಳಿಸಿದ್ದೇನೆ, ಅಭಿಮಾನಿಗಳನ್ನು ಶಾಂತವಾಗಿ ಇರುವಂತೆ ದರ್ಶನ್ ಕೇಳಿಕೊಂಡಿದ್ದಾರೆ. ನಿಮ್ಮ ಅಭಿಮಾನದ ಬಗ್ಗೆ ಕೇಳಿ ಭಾವುಕರಾಗಿದ್ದಾರೆ," ಎಂದು ಬರೆದುಕೊಂಡಿದ್ದರು.

"ನನಗೆ ಗೊತ್ತಿದೆ ಮುಂದೆ ನನ್ನ ಪತಿಗೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ಆದರೆ ತಾವು ಈ ಪ್ರಕರಣದಿಂದ‌ ಯಾವುದೇ ಉದ್ವೇಗಕ್ಕೆ‌ ಒಳಗಾಗಬೇಡಿ. ನಿಮ್ಮ ಶಾಂತ ಸ್ವಭಾವವೇ ನಮ್ಮ‌ ದೊಡ್ಡ ಶಕ್ತಿ. ಈ ಕೆಟ್ಟ ಘಳಿಗೆಯೂ ಹೋಗಲಿದೆ, ಸತ್ಯ ಮೇಲುಗೈ ಸಾಧಿಸಲಿದೆ," ಎಂದು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ಈ ಪೋಸ್ಟ್ ಭಾರೀ ವೈರಲ್‌ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+