DK Shivakumar: ಡಿ.ಕೆ ಶಿವಕುಮಾರ್ ಗಡ್ಡ ಬಿಟ್ಟಿರುವುದ್ಯಾಕೆ? ಮತ್ತೆ ಯಾವಾಗ ಗಡ್ಡಕ್ಕೆ ಕತ್ತರಿ?
ಬೆಂಗಳೂರು, ಫೆಬ್ರವರಿ 21: ವಿಧಾನಸಭಾ ಬಜೆಟ್ ಅಧಿವೇಶನ ನಡೆಯುತ್ತಿದ್ದು, ನಿನ್ನೆಯ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಗಡ್ಡದ ತೆಗೆಯುವ ವಿಚಾರವಾಗಿ ನಾಯಕರು ಅಧಿವೇಶದಲ್ಲಿ ಚರ್ಚೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಯಾವಾಗ ಗಡ್ಡ ತೆಗೆಯುತ್ತಾರೆ? ಯಾಕೆ ತೆಗೆಯ ಬೇಕು ಎಂದೆಲ್ಲಾ ಮಾತನಾಡಿರುವ ವಿಪಕ್ಷ ನಾಯಕರು ಈ ಮೂಲಕ ಸದನದಲ್ಲಿ ಕಾಲಹರಣ ಮಾಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಶೀಘ್ರದಲ್ಲೇ ಗಡ್ಡ ತೆಗೆಯುತ್ತಾರೆ. ಮೂಲದವರಿಂದ ಈ ಮಾಹಿತಿ ನನಗೆ ಬಂದಿದೆ ಎಂದು ಸದನದಲ್ಲಿ ಆರ್. ಅಶೋಕ್ ಹೇಳಿದರು.

ಮೊದಲು ಮಾಜಿ ಸಚಿವ ಅಶ್ವತ್ಥ ನಾರಾಯಣ್ ಮಾತನಾಡಿದ್ದು, ನಾವು ಪ್ರತಿಪಕ್ಷದ ನಾಯಕರು ಸ್ನೇಹ ಜೀವಿಗಳು. ಎಷ್ಟು ಮಾತನಾಡಿದರೂ ಸಮಾಧಾನದಿಂದ ಉತ್ತರ ಸಿಗುತ್ತದೆ. ನಾವು ಸಿದ್ದರಾಮಯ್ಯ ಅವರ ಹಾಗೆ ನಮಗೆ ಉಗ್ರ ಸ್ವರೂಪವಿಲ್ಲ. ನಾವೆಲ್ಲಾ ಸಿದ್ದರಾಮಯ್ಯ ಥರ ತೊಡೆ ತಟ್ಟಲ್ಲ ಎಂದಿದ್ದಾರೆ.
ಈ ವೇಳೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಧ್ಯ ಪ್ರವೇಶಿಸಿ ಮಾತನಾಡಿದ್ದು, ಅಶ್ವತ್ಥ ನಾರಾಯಣ್ ಅವರು, ಯತ್ನಾಳ್ ಮುಖ ನೋಡಿಕೊಂಡು ನಿಮಗೆ ಬಾಣ ಬಿಡುತ್ತಿದ್ದಾರೆ ಎಂದು ಆರ್.ಅಶೋಕ್‌ಗೆ ಹೇಳಿದ್ದು, ನೀವು ಅಲ್ಲಿ ಕುಳಿತುಕೊಂಡಿದ್ದಕ್ಕೆ ನಮಗೆ ತಕರಾರು ಇಲ್ಲ. ಸಿದ್ದರಾಮಯ್ಯ ಥರ ನೀವು ಆಕ್ರಮಣಕಾರಿ ಇಲ್ಲ ಎಂದು ಅಶ್ವತ್ಥ ನಾರಾಯಣ್ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ವೇಳೆ ಮಾತನಾಡಿದ ಆರ್.ಅಶೋಕ್ ನನ್ನ ನಾಯಕತ್ವವನ್ನು ಯತ್ನಾಳ್, ಅಶ್ವಥ್ ನಾರಾಯಣ್ ಒಪ್ಪಿಕೊಂಡಿದ್ದಾರೆ. ನೀವು ನಮ್ಮ ನಡುವೆ ಬೆಂಕಿ ಹಚ್ಚಬೇಡಿ ಎಂದರಷ್ಟೇ ಅಲ್ಲದೇ, ನೀವು ಡಿ.ಕೆ ಶಿವಕುಮಾರ್ ಕಡೆ ಬಂದಿದ್ದೀರಿ ಎಂಬ ಮಾಹಿತಿ ಇದೆ. ನಾನು ಗೃಹ ಸಚಿವ ಆಗಿದ್ದರಿಂದ ನನಗೂ ಈ ಮಾಹಿತಿ ಬಂದಿದೆ ಎಂದು ವ್ಯಂಗ್ಯವಾಗಿ ನಕ್ಕರು.

ಈ ಮಾತು ಕತೆಯ ನಡುವೆ ಡಿ.ಕೆ ಶಿವಕುಮಾರ್ ಗಡ್ಡ ಯಾವಾಗ ತೆಗೆಯುತ್ತಾರೆ, ಏಕೆ ಬಿಟ್ಟಿದ್ದಾರೆ. ಏನು ಪ್ರತಿಜ್ಞೆ ಮಾಡಿದ್ದಾರೆ. ಅವರ ಆಸೆ ಯಾವಾಗ ಈಡೇರಿಸ್ತೀರಾ? ಹೇಳಿ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು. ಈ ವೇಳೆ ಡಿ.ಕೆ ಶಿವಕುಮಾರ್ ನಕ್ಕು ಸುಮ್ಮನಾದರು. ಈ ವೇಳೆ ಕೃಷ್ಣ ಬೈರೇಗೌಡ ಡಿ.ಕೆ ಶಿವಕುಮಾರ್ ದೇವಸ್ಥಾನಕ್ಕೆ ಹೋಗಲಿದ್ದಾರೆ. ಅದಕ್ಕೆ ಗಡ್ಡ ಬಿಟ್ಟಿದ್ದಾರೆ. ಅಜ್ಜಯ್ಯನವರು ಹೇಳಿದಾಗ ತೆಗೆಯುತ್ತಾರೆ ಎಂದರು.
ಈ ವೇಳೆ ಆರ್.ಅಶೋಕ್ ಸಲೂನ್ ಅವರು ಹೇಳಿದಾಗ ಗಡ್ಡ ತೆಗೆಯುತ್ತಾರೆ. ಡಿಸೆಂಬರ್ ಒಳಗಡೆ ಆದರೆ ಸಿಎಂ ಆಗ್ತೀರಿ. ಇಲ್ಲಾಂದ್ರೆ ಜನ್ಮದಲ್ಲಿ ಆಗಲ್ಲ ಎಂದು ವ್ಯಂಗ್ಯವಾಡಿದರು. ಇದಕ್ಕೆ ಉತ್ತರಿಸಿದ ಡಿ.ಕೆ ಶಿವಕುಮಾರ್ Blood is thicker than water ಎಂದು ಹೇಳಿ ಈ ಸಂಭಾಷಣೆಗೆ ಪೂರ್ಣ ವಿರಾಮ ಹಾಕಿದರು.












Click it and Unblock the Notifications