ಬೊಮ್ಮಾಯಿ ಹೆಸರನ್ನು ಅಮಿತ್‌ ಶಾ, ಮೋದಿ ಒಂದು ಬಾರಿಯೂ ಉಲ್ಲೇಖಿಸುತ್ತಿಲ್ಲವೇಕೆ? ಮತ್ತೆ ಶಿಕಾರಿಪುರದ ಕಡೆಗೆ ಹೈಕಮಾಂಡ್‌ ಒಲವು?

ಇಲ್ಲಿ ಗಮನಿಸಬೇಕಿರುವ ವಿಚಾರವೆಂದರೆ, ತಮ್ಮ ದೀರ್ಘ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ಸಿಎಂ ಬೊಮ್ಮಾಯಿ ಹೆಸರನ್ನು ಉಲ್ಲೇಖಿಸದೇ ಇರುವುದು. ಮೊನ್ನೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹ ಬೊಮ್ಮಾಯಿ ಅವರ ಹೆಸರನ್ನು ಉಲ್ಲೇಖಿಸಲಿಲ್ಲ.

ಬೆಳಗಾವಿ, ಫೆಬ್ರವರಿ 27: ಕಮಲದ ಆಕಾರದ ಟರ್ಮಿನಲ್‌ ಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ಕರ್ನಾಟಕ ಬಿಜೆಪಿಯ ಪ್ರಬಲ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ 80 ನೇ ಜನ್ಮದಿನದ ಹಿನ್ನೆಲೆಯಲ್ಲಿ ಆಯೋಜಿಸಲಾಗಿತ್ತು. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ.

 'ಹವಾಯಿ ಚಪ್ಪಲ್‌, ಹವಾಯಿ ಜಹಾಜ್‌'

'ಹವಾಯಿ ಚಪ್ಪಲ್‌, ಹವಾಯಿ ಜಹಾಜ್‌'

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಹವಾಯಿ ಚಪ್ಪಲ್' ಧರಿಸುವವರು 'ಹವಾಯಿ ಜಹಾಜ್' (ವಿಮಾನ)ದಲ್ಲಿ ಪ್ರಯಾಣಿಸಬೇಕು. ಅದು ನಡೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ' ಎಂದು ಹೇಳಿದರು. ಭಾರತದ ವಾಯುಯಾನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಸಾವಿರಾರು ವಿಮಾನಗಳು ಬೇಕಾಗಲಿದ್ದು, ಮೇಡ್ ಇನ್ ಇಂಡಿಯಾ ಪ್ರಯಾಣಿಕ ವಿಮಾನಗಳ ದಿನಗಳು ದೂರವಿಲ್ಲ ಎಂದೂ ಮೋದಿ ಪ್ರತಿಪಾದಿಸಿದರು.

 ಯಡಿಯೂರಪ್ಪ ಸ್ಫೂರ್ತಿಯ ಮೂಲ

ಯಡಿಯೂರಪ್ಪ ಸ್ಫೂರ್ತಿಯ ಮೂಲ

80 ನೇ ಜನ್ಮದಿನ ಆಚರಿಸಿಕೊಂಡ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಹಾರೈಸಿದ ಮೋದಿ, 'ವಿಧಾನಸಭೆಯಲ್ಲಿ ಯಡಿಯೂರಪ್ಪನವರು ಶಾಸಕರಾಗಿ ಮಾಡಿದ ಅಂತಿಮ ಭಾಷಣ ಸ್ಫೂರ್ತಿಯ ಮೂಲವಾಗಿದೆ' ಎಂದು ಹೇಳಿದರು. ಅವರ ಮಾತನ್ನು ಯುವ ರಾಜಕಾರಣಿಗಳು ಪಾಲಿಸಬೇಕು ಎಂದರು. ನಾಯಕನ ಜನ್ಮದಿನವನ್ನು ಸ್ಮರಣೀಯವಾಗಿಸಲು, ಮೋದಿ ಅವರು ತಮ್ಮ ಫೋನ್‌ಗಳ ಟಾರ್ಚ್ ಲೈಟ್‌ಗಳನ್ನು ಸ್ವಿಚ್ ಆನ್ ಮಾಡುವ ಮೂಲಕ ಯಡಿಯೂರಪ್ಪ ಅವರನ್ನು ಗೌರವಿಸುವಂತೆ ಕೋರಿದರು.

 73 ಹೊಸ ವಿಮಾನ ನಿಲ್ದಾಣ

73 ಹೊಸ ವಿಮಾನ ನಿಲ್ದಾಣ

'2014 ರ ಮೊದಲು, ಭಾರತವು ಕೇವಲ 73 ವಿಮಾನ ನಿಲ್ದಾಣಗಳನ್ನು ಹೊಂದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ದೇಶದಲ್ಲಿ ಹೊಸ 73 ವಿಮಾನ ನಿಲ್ದಾಣಗಳನ್ನು ಹೊರತರಲಾಗಿದೆ. ಡಬಲ್ ಇಂಜಿನ್ ಸರ್ಕಾರವು ಪ್ರಗತಿಯ ವೇಗವನ್ನು ಹೆಚ್ಚಿಸಿದೆ' ಎಂದು ಅವರು ಹೇಳಿದರು.

 ರಾಜ್ಯಕ್ಕೆ ಮೋದಿಯವರ ಐದನೇ ಭೇಟಿ

ರಾಜ್ಯಕ್ಕೆ ಮೋದಿಯವರ ಐದನೇ ಭೇಟಿ

ಮೇ ವೇಳೆಗೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಕ್ಕೆ ಈ ವರ್ಷ ಮೋದಿಯವರ ಐದನೇ ಭೇಟಿ ಇದಾಗಿದೆ. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಕಟ್ಟಡವು ಗಂಟೆಗೆ 300 ಪ್ರಯಾಣಿಕರನ್ನು ನಿಭಾಯಿಸಬಲ್ಲದು. ಒಟ್ಟಾರೆಯಾಗಿ, ಪ್ರಧಾನ ಮಂತ್ರಿ ಅವರು ಇಲ್ಲಿ 3,600 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಬೊಮ್ಮಾಯಿ ಹೆಸರು ಉಲ್ಲೇಖವಿಲ್ಲ

ಬೊಮ್ಮಾಯಿ ಹೆಸರು ಉಲ್ಲೇಖವಿಲ್ಲ

ಇಲ್ಲಿ ಗಮನಿಸಬೇಕಿರುವ ವಿಚಾರವೆಂದರೆ, ತಮ್ಮ ದೀರ್ಘ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಉಲ್ಲೇಖಿಸದೇ ಇರುವುದು. ಅವರು ಬಿಎಸ್‌ವೈ ಹಾಗೂ ಬಿಜೆಪಿ ಸರ್ಕಾರದ ಹೆಸರನ್ನು ಮಾತ್ರ ಉಲ್ಲೇಖಿಸಿದರು. ಮೊನ್ನೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೂ ಸಹ ಸಿಎಂ ಬೊಮ್ಮಾಯಿ ಅವರ ಹೆಸರನ್ನು ಉಲ್ಲೇಖಿಸಲಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಬಿಜೆಪಿ ಹೈಕಮಾಂಡ್‌ ದೂರ ಮಾಡುತ್ತಿದೆಯಾ ಎಂಬ ಶಂಕೆಗಳು ಬಲವಾಗಿವೆ.

 ಕಾಂಗ್ರೆಸ್‌ ಟ್ವೀಟ್‌ನಲ್ಲಿ ಬರೆದುಕೊಂಡಿದ್ದೇನು?

ಕಾಂಗ್ರೆಸ್‌ ಟ್ವೀಟ್‌ನಲ್ಲಿ ಬರೆದುಕೊಂಡಿದ್ದೇನು?

ಈ ಕುರಿತು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. 'ಮೊನ್ನೆ ಅಮಿತ್ ಶಾ ಬೊಮ್ಮಾಯಿ ಮೇಲೆ ಭರವಸೆ ಇಡಿ ಎನ್ನಲಿಲ್ಲ. ಇಂದು ಶಿವಮೊಗ್ಗದಲ್ಲಿ ಪ್ರಧಾನಿ ಒಮ್ಮೆಯೂ ಬೊಮ್ಮಾಯಿಯವರ ಹೆಸರು ಹೇಳಲಿಲ್ಲ. ಇದು ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ನಾಣ್ಯದ ಚಲಾವಣೆ ಮುಗಿದಿದೆ ಎಂದರ್ಥವಲ್ಲವೇ? ಬಿಜೆಪಿಯಲ್ಲಿ ಇನ್ನೇನಿದ್ದರೂ ಜೋಶಿ, ಸಂತೋಷ್ ಅವರದ್ದೇ ಆಟ ಎಂಬುದರ ಮುನ್ಸೂಚನೆಯಲ್ಲವೇ ಇದು?' ಎಂದು ಪ್ರಶ್ನಿಸಿದೆ.

 ಮೋದಿ ನಾಟಕ ಪ್ರದರ್ಶನ

ಮೋದಿ ನಾಟಕ ಪ್ರದರ್ಶನ

'ಇದೇ BSY ಸಿಎಂ ಆಗಿದ್ದಾಗ ಕರ್ನಾಟಕದ ನೆರೆ ಸಂಕಷ್ಟದ ಬಗ್ಗೆ ಹೇಳಿಕೊಳ್ಳಲು ಹಲವು ಬಾರಿ ಅಲೆದಾಡಿದರೂ ಪ್ರಧಾನಿ ಕಚೇರಿ ಒಳಗೂ ಬಿಟ್ಟುಕೊಳ್ಳಲಿಲ್ಲ. ಮೋದಿ ಬೆಂಗಳೂರಿಗೇ ಬಂದಿದ್ದರೂ BSY ಮುಖವನ್ನೂ ನೋಡದೆ ವಾಪಸ್ ತೆರಳಿದ್ದರು. ಈಗ ಚುನಾವಣೆಗಾಗಿ BSY ಸ್ತುತಿ ಮಾಡುತ್ತಿರುವ ನರೇಂದ್ರ ಮೋದಿ ಅವರ ನಾಟಕ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ' ಎಂದೂ ಕೆಪಿಸಿಸಿ ಟ್ವೀಟ್‌ ಮಾಡಿದೆ.

 ಹಿಂದೆ - ಯಡಿಯೂರಪ್ಪ, ಇಂದು - ಬೊಮ್ಮಾಯಿ

ಹಿಂದೆ - ಯಡಿಯೂರಪ್ಪ, ಇಂದು - ಬೊಮ್ಮಾಯಿ

'ಹಿಂದೆ - ಯಡಿಯೂರಪ್ಪ, ಇಂದು - ಬೊಮ್ಮಾಯಿ. ಬಿಜೆಪಿ ಬಳಸಿ ಬಿಸಾಡುವ ಟಿಷ್ಯೂ ಪೇಪರ್‌ಗಳ ಹೆಸರುಗಳಿವು. ರಾಜ್ಯದ ಸಿಎಂ ಪಕ್ಕದಲ್ಲೇ ಇದ್ದರೂ ಒಂದು ಬಾರಿಯೂ ಪ್ರಧಾನಿ ಬಾಯಲ್ಲಿ ಬೊಮ್ಮಾಯಿ ಹೆಸರು ಬರಲಿಲ್ಲ. ಕರ್ನಾಟಕದ ಜನತೆ ಬೊಮ್ಮಾಯಿ ಆಡಳಿತದಿಂದ ಬೇಸತ್ತಿರುವ ಸಂಗತಿ ಮೋದಿಗೂ ತಿಳಿಯಿತೇ ಅಥವಾ ಉದ್ದೇಶಪೂರ್ವಕ ನಿರ್ಲಕ್ಷ್ಯವೇ?' ಎಂದು ಕಾಂಗ್ರೆಸ್‌ನ ರಾಜ್ಯ ಘಟಕ ಕೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+