'ಆಕ್ಸಿಡೆಂಟಲ್ ಸಿಎಂ' ಸಿನಿಮಾ ಮಾಡಿದ್ರೆ ಎಚ್‌ಡಿಕೆ ಪಾತ್ರ ಯಾರು ಮಾಡ್ತಾರೆ?'

ಬೆಂಗಳೂರು, ಡಿಸೆಂಬರ್ 29: ಅನುಪಮ್ ಖೇರ್ ನಟಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತಾದ 'ಆಕ್ಸಿಡೆಂಟಲ್ ಪ್ರೈಮಿನಿಸ್ಟರ್‌' ಚಿತ್ರ ಈಗ ವಿವಾದದ ಕೇಂದ್ರ ಬಿಂದು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಅವರನ್ನು ಕೈಗೊಂಬೆಯಾಗಿ ಬಳಸಿಕೊಂಡಿತು ಎಂದು ಚಿತ್ರದಲ್ಲಿ ಬಿಂಬಿಸುವ ಯತ್ನ ಮಾಡಲಾಗಿದೆ, ಇದು ಕಾಂಗ್ರೆಸ್ಸಿಗರನ್ನು ಕೆರಳಿಸಿದೆ. ಆದರೆ ಬಿಜೆಪಿ ಹಾಗೂ ಪಕ್ಷದ ಪರ ಇರುವವರು ಆಕ್ಸಿಡೆಂಟಲ್ ಪ್ರೈಮಿನಿಸ್ಟರ್‌ ಚಿತ್ರಕ್ಕೆ ಭಾರಿ ಪ್ರಚಾರ ಕೊಡುತ್ತಿದ್ದಾರೆ.

Who will be leading actor if Accidental CM movie made in Kannada

ಮನಮೋಹನ್ ಸಿಂಗ್ ಕುರಿತು ಸಿನಿಮಾ, ಸೋನಿಯಾ ಪಾತ್ರದಲ್ಲಿ ಯಾರು?

ಕರ್ನಾಟಕ ಬಿಜೆಪಿ ಸಹ ಇದಕ್ಕೆ ಹೊರತಾಗಿಲ್ಲ, ಆಕ್ಸಿಡೆಂಟಲ್ ಪ್ರೈಮಿನಿಸ್ಟರ್‌ ಗೆ ಪ್ರಚಾರ ಕೊಡುವ ಜೊತೆಗೆ, ಸಿಎಂ ಕುಮಾರಸ್ವಾಮಿ ಅವರ ಕಾಲೆಳೆಯುವ ಕೆಲಸವನ್ನು ಮಾಡಿದೆ.

ಕನ್ನಡದಲ್ಲಿ 'ಆಕ್ಸಿಡೆಂಟಲ್ ಸಿಎಂ' ಎಂಬ ಚಿತ್ರ ನಿರ್ಮಿಸಿದರೆ ಕುಮಾರಸ್ವಾಮಿ ಪಾತ್ರ ಯಾರು ಮಾಡುತ್ತಾರೆ ಎಂದು ಕರ್ನಾಟಕ ಬಿಜೆಪಿ ಟ್ವೀಟ್‌ ಮಾಡಿದೆ. ಆ ಮೂಲಕ ಕುಮಾರಸ್ವಾಮಿ ಅವರು ಸಹ ಅಚಾನಕ್‌ ಆಗಿ ಸಿಎಂ ಆಗಿದ್ದಾರೆ, ಹಾಗೂ ಅವರನ್ನು ಕಾಂಗ್ರೆಸ್‌ ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ ಎಂದು ಕಾಲೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+