ರಾಜಕೀಯ ವಿಶೇಷ; ಕಾಂಗ್ರೆಸ್‌ನ ನಿಜವಾದ ರಾಜಕೀಯ ಶತ್ರು ಯಾರು?

ಬೆಂಗಳೂರು, ಜೂನ್ 06; ಕರ್ನಾಟಕದಲ್ಲಿ ಸದ್ಯ ರಾಜ್ಯಸಭೆ ಮತ್ತು ವಿಧಾನಪರಿಷತ್ ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಗಳಲ್ಲಿ ಗೆಲ್ಲಲೇ ಬೇಕೆಂಬ ಹಠಕ್ಕೆ ಮೂರು ಪಕ್ಷಗಳ ನಾಯಕರು ಬಿದ್ದಿದ್ದಾರೆ.

ಇವರ ನಡುವೆ ಯಾರು?, ಯಾರಿಗೆ? ನಿಜವಾದ ರಾಜಕೀಯ ಶತ್ರು? ಎಂಬುದು ಜೂನ್‌ 10ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗಲಿದೆ. ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ದಾಳ ಉರುಳಿಸಿದೆ.

ಸದ್ಯ ರಾಜ್ಯಸಭೆ ಚುನಾವಣೆಯಂತು ಭಾರೀ ಜಿದ್ದಾ ಜಿದ್ದಿಗೆ, ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಬಿರುಕು ಇನ್ನಷ್ಟು ದೊಡ್ಡದಾಗಿದ್ದು, ಇದೆರಡು ಪಕ್ಷಗಳ ನಾಯಕರು ಒಬ್ಬರ ಮೇಲೆ ಒಬ್ಬರು ಬೆಂಕಿಯನ್ನೇ ಉಗುಳುತ್ತಿದ್ದಾರೆ.

ಅದರಲ್ಲೂ ಸಿದ್ದರಾಮಯ್ಯ ಮತ್ತು ಎಚ್. ಡಿ. ಕುಮಾರಸ್ವಾಮಿ ಮಾತಿನ ಯುದ್ಧ ಲಂಗುಲಗಾಮಿಲ್ಲದೆ ಮುಂದುವರೆಯುತ್ತಿದೆ. ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವಿಗೆ ತಡೆ ಹಾಕಿದೆ ಎಂಬುದು ಲೆಕ್ಕಾಚಾರ. ಆದರೆ ಯಾರಿಗೆ ಗೆಲುವು? ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆ.

ಮುಂದಿನ ದಿನಗಳಲ್ಲಿ ಜೆಡಿಎಸ್ ಮಾಡುವ ತಂತ್ರಗಳು ಕಾಂಗ್ರೆಸ್‌ಗೆ ಮುಳುವಾಗುವ ಎಲ್ಲ ಸಾಧ್ಯತೆಗಳಿವೆ. ಅದು ಬಿಜೆಪಿಗೆ ಲಾಭವಾಗಿ ಪರಿಣಮಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಅಲ್ಪ ಸಂಖ್ಯಾತ ಮತಗಳನ್ನು ಸೆಳೆಯುವಲ್ಲಿ ಜೆಡಿಎಸ್ ಸಫಲವಾದರೆ ಅದರ ಪರಿಣಾಮ ನೇರವಾಗಿ ಕಾಂಗ್ರೆಸ್ ಮೇಲೆಯೇ ಆಗುತ್ತದೆ. ರಾಜ್ಯಸಭಾ ಚುನಾವಣೆ ಕಳೆದ ಬಳಿಕ ರಾಜ್ಯ ರಾಜಕೀಯದಲ್ಲಿ ಯಾರು ಶತ್ರು?, ಯಾರು ಮಿತ್ರರು? ಎಂಬುದು ಗೊತ್ತಾಗಲಿದೆ. ಆ ನಂತರ ನಡೆಯುವುದೇ ನಿಜವಾದ ರಾಜಕೀಯ ಯುದ್ಧ ಎಂಬುದಂತು ಸತ್ಯ.

2023ರ ಚುನಾವಣೆ ಮೇಲೆ ಕಣ್ಣು

2023ರ ಚುನಾವಣೆ ಮೇಲೆ ಕಣ್ಣು

ಮುಂದಿನ 2023ರ ವಿಧಾನಸಭಾ ಚುನಾವಣೆ ರಾಜ್ಯದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಬಹು ಮುಖ್ಯವಾಗಿದೆ. ಈ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆಯನ್ನೇರಲೇ ಬೇಕೆಂಬ ಹಠಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಬಿದ್ದಿದೆ. ಇದರ ನಡುವೆ ಮತ್ತೆ ಅಧಿಕಾರ ಹಿಡಿಯಲು ಏನು ತಂತ್ರ ಮಾಡಬೇಕೆಂಬ ಚಿಂತೆಯಲ್ಲಿ ಬಿಜೆಪಿ ನಾಯಕರಿದ್ದಾರೆ.

ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಕಾಂಗ್ರೆಸ್ ಪರಿಸ್ಥಿತಿ ಸಂಕಷ್ಟದಲ್ಲಿದೆ ಜೆಡಿಎಸ್ ಮತ್ತು ಬಿಜೆಪಿ ಎರಡು ಕಡೆಯಿಂದಲೂ ದಾಳಿ ಮಾಡುತ್ತಿದೆ. ಕಾಂಗ್ರೆಸ್‌ಗೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ವಿರುದ್ಧ ಹೋರಾಡಲು ಬೇಕಾದಷ್ಟು ವಿಚಾರಗಳಿವೆ. ಆದರೆ ಮೇಲಿಂದ ಮೇಲೆ ರಾಜ್ಯದಲ್ಲಿ ಹುಟ್ಟಿಕೊಳ್ಳುತ್ತಿರುವ ವಿವಾದಗಳು ಕಾಂಗ್ರೆಸ್ ನಾಯಕರನ್ನು ಧಿಕ್ಕೆಡಿಸುತ್ತಿವೆ.

ಕಾಂಗ್ರೆಸ್ ಹೋರಾಟ ಫಲ ಕೊಡುತ್ತಿಲ್ಲ

ಕಾಂಗ್ರೆಸ್ ಹೋರಾಟ ಫಲ ಕೊಡುತ್ತಿಲ್ಲ

ಬಿಜೆಪಿ ವಿರುದ್ಧ ಹೋರಾಟಕ್ಕೆ ಹತ್ತು ಹಲವು ವೈಫಲ್ಯಗಳಿದ್ದರೂ ಕಾಂಗ್ರೆಸ್ ಹೋರಾಟಕ್ಕೆ ತೆಗೆದುಕೊಳ್ಳುತ್ತಿರುವ ವಿಷಯಗಳು ಉಲ್ಟಾ ಹೊಡೆಯುವಂತೆ ಮಾಡುತ್ತಿವೆ. ಅದಕ್ಕಿಂತ ಹೆಚ್ಚಾಗಿ ಪಕ್ಷದೊಳಗಿನ ನಾಯಕರ ಭಿನ್ನಾಭಿಪ್ರಾಯಗಳು ಮತ್ತು ಸಿದ್ದರಾಮಯ್ಯ ಹೇಳಿಕೆಗಳು ಎಲ್ಲೋ ಒಂದು ಕಡೆ ಒಂದು ವರ್ಗವನ್ನಷ್ಟೆ ಓಲೈಕೆ ಮಾಡುವಂತಿರುತ್ತದೆ.

ಈಗಾಗಲೇ ಸಿದ್ದರಾಮಯ್ಯ ಅಂದರೆ ಹಿಂದೂ ವಿರೋಧಿ ಎಂಬಂತೆ ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅದಕ್ಕೆ ತಕ್ಕಂತೆ ಆರ್‌ಎಸ್‌ಎಸ್ ಅನ್ನು ಆಗಾಗ್ಗೆ ಸಿದ್ದರಾಮಯ್ಯ ಜರೆಯುತ್ತಿರುವುದು ಪುಷ್ಠಿ ನೀಡುತ್ತಿದೆ. ಈಗಾಗಲೇ ಚಡ್ಡಿಗೆ ಬೆಂಕಿ ಹಚ್ಚುವುದಕ್ಕೆ ಕರೆ ನೀಡಿರುವುದು ಹಿಂದೂಪರ ಸಂಘಟನೆಗಳು ಸೇರಿದಂತೆ ಬಿಜೆಪಿ ನಾಯಕರನ್ನು ಕೆರಳಿಸುವಂತೆ ಮಾಡಿದೆ.

ಸಿದ್ದರಾಮಯ್ಯಗೆ ಹಿಂದೂ ವಿರೋಧಿ ಹಣೆಪಟ್ಟಿ

ಸಿದ್ದರಾಮಯ್ಯಗೆ ಹಿಂದೂ ವಿರೋಧಿ ಹಣೆಪಟ್ಟಿ

ಒಂದೆಡೆ ರಾಜಕೀಯ ಬದ್ಧ ವೈರಿ ಬಿಜೆಪಿ ಮತ್ತೊಂದೆಡೆ ಬೆಂಕಿ ಉಗುಳುವ ಜೆಡಿಎಸ್ ಇದೆರಡು ಪಕ್ಷವನ್ನು ಸಿದ್ದರಾಮಯ್ಯ ಎದುರು ಹಾಕಿಕೊಂಡು ಮುಂದಿನ ಚುನಾವಣೆಯನ್ನು ಗೆಲ್ಲಬೇಕಾದ ಅನಿವಾರ್ಯತೆಯಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಿಗೆ ಹಿಂದೂ ವಿರೋಧಿ ಹಣೆಪಟ್ಟಿ ಕಾರಣವಾಯಿತು ಎಂಬುದನ್ನು ತಳ್ಳಿಹಾಕಲಾಗದು.

ಚುನಾವಣೆ ವರ್ಷಗಳಲ್ಲಿ ಆಡಳಿತ ಪಕ್ಷದ ವೈಫಲ್ಯಗಳನ್ನು ಹಿಡಿದುಕೊಂಡು ವಿಪಕ್ಷಗಳು ಜನರ ಮುಂದೆ ಹೋಗುವುದು ಮತ್ತು ಸದ್ದಿಲ್ಲದೆ ಆಡಳಿತ ವಿರೋಧಿ ಅಲೆಯನ್ನು ಎಬ್ಬಿಸುವ ಕೆಲಸವನ್ನು ಮಾಡುವುದು ರಾಜಕೀಯದಲ್ಲಿ ನಡೆಯುತ್ತದೆ. ಆದರೆ ರಾಜ್ಯದಲ್ಲಿ ಆ ರೀತಿಯ ವಾತಾವರಣ ಕಾಣುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಮತದಾರರು ಬದಲಾಗಿದ್ದಾರೆ. ರಾಜಕೀಯವಾಗಿ ಅರಿತಿದ್ದಾರೆ. ಈ ವೇಳೆ ಯಾವುದೇ ಹೋರಾಟ ಮಾಡಿದರೂ ಅದು ಚುನಾವಣೆ ಪ್ರೇರಿತ ಎಂಬುದು ಗೊತ್ತಾಗಿ ಬಿಡುತ್ತದೆ.

ಕಾಂಗ್ರೆಸ್‌ಗೆ ಜೆಡಿಎಸ್ ಮಗ್ಗುಲ ಮುಳ್ಳು

ಕಾಂಗ್ರೆಸ್‌ಗೆ ಜೆಡಿಎಸ್ ಮಗ್ಗುಲ ಮುಳ್ಳು

ಈಗ ರಾಜ್ಯದಲ್ಲಿ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಗಳು ಎದ್ದಿದೆ. ಅದು ಬೇರೆ ಬೇರೆ ಆಯಾಮಗಳಲ್ಲಿ ಸಾಗುತ್ತಿದೆ. ಬಿಜೆಪಿ ತಮಗೆ ಎದುರಾಳಿ ಹಾಗಾಗಿ ಅದನ್ನು ಹೇಗೆ ಮಣಿಸಬೇಕೆಂಬುದರ ಬಗ್ಗೆ ಕಾಂಗ್ರೆಸ್ ಹಗಲು ರಾತ್ರಿ ಚಿಂತೆ ಮಾಡುತ್ತಿದೆ. ಅಲ್ಪ ಸಂಖ್ಯಾತ ಮತಗಳು ಅಂದುಕೊಂಡಂತೆ ಬಂದರೆ ಪಕ್ಷ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ನಾಯಕರದ್ದಾಗಿದೆ. ಹಾಗಾಗಿ ಹಿಂದೂಪರ ಸಂಘಟನೆಗಳನ್ನು ದ್ವೇಷಿಸುವಂತಹ ಹೇಳಿಕೆಗಳನ್ನು ನೀಡುವುದು ಕಂಡು ಬರುತ್ತಿದೆ.

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ ಕಾಂಗ್ರೆಸ್‌ಗೆ ಬಿಜೆಪಿ ಎದುರಾಳಿ ಮತ್ತು ಶತ್ರುವಾಗಿದ್ದರೂ ಕೂಡ ಕಾಂಗ್ರೆಸ್ ಅನ್ನು ಸದೆ ಬಡಿಯುವ ಶಕ್ತಿ ಜೆಡಿಎಸ್‌ಗಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಅದರಲ್ಲೂ ಸಿದ್ದರಾಮಯ್ಯ ಮರೆಯಬಾರದು.

ಗೌಡರ ಕುಟುಂಬವನ್ನು ಕೆಣಕಿದಷ್ಟು ನಷ್ಟ

ಗೌಡರ ಕುಟುಂಬವನ್ನು ಕೆಣಕಿದಷ್ಟು ನಷ್ಟ

2018ರಲ್ಲಿ ಕಾಂಗ್ರೆಸ್ ಸೋಲನ್ನಪ್ಪಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಜೆಡಿಎಸ್ ಕಾರಣವಾಗಿತ್ತು ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ದೇವೇಗೌಡರ ಕುಟುಂಬದ ಬಗ್ಗೆ ಅವತ್ತು ಸಿದ್ದರಾಮಯ್ಯ ಸದಾ ಆರೋಪಗಳನ್ನು ಮಾಡುತ್ತಲೇ ಬಂದಿದ್ದರು. ಅದರ ಪರಿಣಾಮ ಏನಾಯಿತು? ಎಂಬುದು ಗೊತ್ತೇ ಇದೆ.

ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಒಂದು ವೇಳೆ ಕಾಂಗ್ರೆಸ್ ಬೆಂಬಲಿಸಿದ್ದರೆ ಮುಂದಿನ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ಕಾಂಗ್ರೆಸ್ ಮೇಲೆ ಮೆದುಧೋರಣೆ ತಾಳುವ ಮೂಲಕ ಒಂದಷ್ಟು ಸಹಾಯವಾಗುತ್ತಿತ್ತೇನೋ ಆದರೆ ಸಿದ್ದರಾಮಯ್ಯ ತಂತ್ರ ಜೆಡಿಎಸ್ ರೊಚ್ಚಿಗೇಳುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+