ನರೇಂದ್ರ ಮೋದಿ ಯಾರ್ರೀ? - ಕುಮಾರಸ್ವಾಮಿ ಪ್ರಶ್ನೆ

Who is Narendra Modi - what is his contribution to Karnataka questions JDS HD Kumaraswamy,
ಬೆಂಗಳೂರು, ಅಕ್ಟೋಬರ್ 26: ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ಹಿಂದೆಸರಿದಿರುವ ಜೆಡಿಎಸ್ ನಾಯಕ ಎಚ್‌ ಡಿ ಕುಮಾರಸ್ವಾಮಿ ಅವರು 'ಯಾರ್ರೀ ಅದು ನರೇಂದ್ರ ಮೋದಿ? ಕರ್ನಾಟಕಕ್ಕೆ ಅವರು ಏನು ಕೊಡುಗೆ ಕೊಟ್ಟಿದ್ದಾರ್ರೀ?' ಎಂದು ಪ್ರಶ್ನಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನರೇಂದ್ರ ಮೋದಿ ಭಾಷಣ ಕೇಳಲು ಹಣ ಕೊಟ್ಟು ಹೋಗಬೇಕೆನ್ರೀ?' ಎಂದೂ ಪ್ರತಿಪಕ್ಷದ ನಾಯಕ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮೋದಿ ಇಲ್ಲಿಗೆ ಬಂದು ಭಾಷಣ ಮಾಡಿ ಹೋಗಬಹುದು. ಆದರೆ, ನಿಮ್ಮ (ಕರ್ನಾಟಕದ ಜನತೆ) ಸಂಕಷ್ಟಕ್ಕೆ ಸ್ಪಂದಿಸಲು ಇದೇ ಕುಮಾರಸ್ವಾಮಿ, ದೇವೇಗೌಡರೇ ಬರಬೇಕು' ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ಜೆಡಿಎಸ್‌ ಗೆ ಬೆಲೆ ಇಲ್ಲವಾ?:
ಲೋಕಸಭೆ ಚುನಾವಣೆ ಪೂರ್ವ ಸಮೀಕ್ಷೆಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ 13, ಬಿಜೆಪಿಗೆ 12, ಜೆಡಿಎಸ್‌ಗೆ 3 ಸ್ಥಾನಗಳು ಸಿಗಲಿವೆ ಎಂದು ಹೇಳಲಾಗುತ್ತಿದೆ. 10 ವರ್ಷ ದೇಶ ಲೂಟಿ ಮಾಡಿದ ಕಾಂಗ್ರೆಸ್‌, ಐದು ವರ್ಷ ರಾಜ್ಯ ಕೊಳ್ಳೆ ಹೊಡೆದ ಬಿಜೆಪಿಗೆ 13-12 ಸ್ಥಾನವಾದರೆ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತಿರುವ ಜೆಡಿಎಸ್‌ ಗೆ ಬೆಲೆ ಇಲ್ಲವಾ? ರಾಜ್ಯದ ಮತದಾರರು ಈ ಬಗ್ಗೆ ಯೋಚಿಸುವಂತಾಗಬೇಕು' ಎಂದು ಅವರು ತಿಳಿಸಿದರು.

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್‌, ಶಾಸಕರಾದ ಎಚ್‌ಡಿ ರೇವಣ್ಣ, ಜಿಟಿ ದೇವೇಗೌಡ, ಅಖಂಡ ಶ್ರೀನಿವಾಸಮೂರ್ತಿ ಮತ್ತಿತರರು ಸಮಾವೇಶದಲ್ಲಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+