Liquor: ವಿಸ್ಕಿ - ರಮ್ & ಬಿಯರ್ ಚಳಿಗಾಲದಲ್ಲಿ ಯಾವ ಮದ್ಯ ಬೆಸ್ಟ್‌

ಈ ಬಾರಿಯ ಚಳಿಗಾಲದ ಚಳಿಯು ಕಳೆದ ವರ್ಷಕ್ಕಿಂತಲೂ ತುಸು ಹೆಚ್ಚಾಗಿದೆ. ಈ ಬಾರಿಯ ಚಳಿಗಾಲದಲ್ಲಿ ಕೋಳಿ ಮತ್ತು ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ವಿವಿಧ ಪ್ರಾಣಿಗಳ ಮಾಂಸದ ಬೆಲೆಯೂ ಸಹ ಭರ್ಜರಿಯಾಗಿ ಹೆಚ್ಚಳವಾಗಿದೆ. ಇದರೊಂದಿಗೆ ಮದ್ಯ ಮಾರಾಟಕ್ಕೂ ಭರ್ಜರಿ ಬೇಡಿಕೆ ಇದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ವಿವಿಧ ಮದ್ಯಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಈ ರೀತಿ ಇರುವಾಗಲೇ ಚಳಿಗಾಲದಲ್ಲಿ ಯಾವ ಮದ್ಯ ಸೇವನೆ ಒಳ್ಳೆಯದು ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ನಡೆದಿದೆ. ಚಳಿಗಾಲದಲ್ಲಿ ಯಾವ ಮದ್ಯ ಸೇವನೆ ಬೆಸ್ಟ್‌ ಮತ್ತು ಯಾಕೆ ಎನ್ನುವ ವಿವರ ನೋಡೋಣ.

ಸಾಮಾನ್ಯವಾಗಿ ಚಳಿಗಾಲದಲ್ಲಿ ರಮ್ ಮತ್ತು ವಿಸ್ಕಿಗೆ ಹೆಚ್ಚು ಡಿಮ್ಯಾಂಡ್ ಇರುತ್ತದೆ. ಅದೇ ರೀತಿ ಬೇಸಿಗೆ ಕಾಲದಲ್ಲಿ ಬಿಯರ್ ಹೆಚ್ಚು ಡಿಮ್ಯಾಂಡ್ ಪಡೆದುಕೊಳ್ಳುತ್ತದೆ. ಚಳಿಗಾಲದಲ್ಲೂ ಬಿಯರ್ ಸೇವನೆ ಮಾಡುವವರು ಇದ್ದಾರೆ. ವಿಸ್ಕಿ, ರಮ್ ಮತ್ತು ಬಿಯರ್ ಮದ್ಯಗಳಲ್ಲಿ ಚಳಿಗಾಲದಲ್ಲಿ ಯಾವುದು ತೆಗೆದುಕೊಳ್ಳುವುದು ಬೆಸ್ಟ್‌ ಅಥವಾ ಹೆಚ್ಚು ಡಿಮ್ಯಾಂಡ್‌ ಇದೆ ಎನ್ನುವುದರ ವಿವರ ಮುಂದೆ ನೋಡೋಣ.

Whiskey - Rum and Beer Which alcohol is best in winter

ಇನ್ನು ಚಳಿಗಾಲದಲ್ಲಿ ಬಿಯರ್‌ಗಿಂತಲೂ ವಿಸ್ಕಿ ಮತ್ತು ರಮ್ ಎರಡೂ ಸಹ ಸೇವನೆಗೆ ಉತ್ತಮ ಎಂದು ಹೇಳಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಎರಡೂ ಮದ್ಯಗಳು ಸಹ ಒಳ್ಳೆಯ ಸುವಾಸನೆ ಹಾಗೂ ಬೆಚ್ಚಗಿನ ಅನುಭವವನ್ನು ನೀಡುತ್ತದೆ ಎನ್ನುವುದು ಮುಖ್ಯ ಕಾರಣವಾಗಿದೆ. ವಿವಿಧ ಆಲ್ಕೋಹಾಲ್‌ಗಳ ಸೇವನೆಯ ನಂತರ ದೇಹದಲ್ಲಿ ಬೆಚ್ಚಗಿನ ಪರಿಣಾಮ ಆಗುವುದಕ್ಕೆ ಕಾರಣವೇನೆಂದರೆ, ರಕ್ತನಾಳಗಳ ಹಿಗ್ಗುವಿಕೆಯಿಂದ ಉಂಟಾಗುವ ತಾತ್ಕಾಲಿಕ ಸಂವೇದನೆಯಾಗಿದೆ. ಇದು ವಾಸ್ತವವಾಗಿ ದೇಹದ ತಾಪಮಾನವನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ನಿಜವಾದ ಬೆಚ್ಚಗಿನ ಅನುಭವಕ್ಕಾಗಿ ಯಾವುದರ ಮೇಲೂ ಅವಲಂಬನೆ ಆಗದೆ ಇರುವುದು ಉತ್ತಮ.

ವಿಸ್ಕಿ

ಚಳಿಗಾದಲ್ಲಿ ಹೆಚ್ಚು ಬೇಡಿಕೆ ಇರುವ ಮದ್ಯಗಳಲ್ಲಿ ವಿಸ್ಕಿ ಅಗ್ರಸಾಲಿನಲ್ಲಿದೆ. ವಿಸ್ಕಿಯನ್ನು ಸಾಮಾನ್ಯವಾಗಿ ಚಳಿಗಾಲದ ಮದ್ಯ ಎಂದೇ ಪರಿಗಣಿಸಲಾಗುತ್ತದೆ. ಸುವಾಸನೆಯುಕ್ತ ಪದಾರ್ಥಗಳ ಬಳಕೆ, ಮಸಾಲೆ ಮತ್ತು ಒಣಗಿದ ಹಣ್ಣುಗಳು ಮಿಶ್ರಣದಿಂದ ವಿಸ್ಕಿ ಕೂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಬೆಚ್ಚಗಿನ ನೀರಿನ ಮಿಶ್ರಣದೊಂದಿಗೆ ನಿಧಾನವಾಗಿ ಕುಡಿಯುತ್ತಾರೆ. ಇದರ ಹೆಚ್ಚಿನ ಆಲ್ಕೋಹಾಲ್ ಅಂಶ (ಸಾಮಾನ್ಯವಾಗಿ 40% ABV ಆಲ್ಕೋಹಾಲ್ ಬೈ ವಾಲ್ಯೂಮ್ ಅಥವಾ ಅದಕ್ಕಿಂತ ಹೆಚ್ಚಿನದು) ಬಿಯರ್‌ನ ಕಡಿಮೆ ಎಬಿವಿಗೆ ಹೋಲಿಸಿದರೆ ತುಸು ಹೆಚ್ಚಾಗಿ ಇರುತ್ತದೆ.

ಚಳಿಗಾಲದಲ್ಲಿ ವಿಸ್ಕಿ ಸೇವನೆ ದೇಹಕ್ಕೆ ಬೆಚ್ಚಗಿನ ಅನುಭವ ನೀಡುತ್ತದೆ ಎಂದು ಪರಿಗಣಿಸಲಾಗುತ್ತದೆ. ಚಳಿಗಾಲದ ಆಹಾರಗಳೊಂದಿಗೆ ವಿಸ್ಕಿ ಸೇವನೆಯು ಉತ್ತಮ ಅನುಭವ ಕೊಡುತ್ತದೆ. ಶೀತವಿರುವಾಗ ಕೆಲವರು ಈ ಮದ್ಯವನ್ನು ಸೇವಿಸುವುದು ಇದೆ. ಆದರೆ, ಇದು ವೈದ್ಯರ ಶಿಫಾರಸು ಆಗಿರುವುದಿಲ್ಲ ಎನ್ನುವುದು ನೆನಪಿರಲಿ.

ರಮ್

ಇನ್ನು ಕಬ್ಬಿನ ಉಪಉತ್ಪನ್ನಗಳಾದ ಮೊಲಾಸಸ್ (molasses) ಸೇರಿದಂತೆ ವಿವಿಧ ಮಸಾಲೆಯುಕ್ತ ಪದಾರ್ಥಗಳಿಂದ ರಮ್ ತಯಾರಿಸಲಾಗುತ್ತದೆ. ಚಳಿಗಾಲದಲ್ಲಿ ಮತ್ತೊಂದು ಅತ್ಯುತ್ತಮ ಆಯ್ಕೆ ಎಂದು ಇದನ್ನು ಪರಿಗಣಿಸಲಾಗುತ್ತದೆ. ಇದರಲ್ಲಿ ಕ್ಯಾರಮೆಲ್, ವೆನಿಲ್ಲಾ ಮತ್ತು ಮಸಾಲೆ ಪದಾರ್ಥಗಳನ್ನು ಸಹ ಸೇರಿಸಲಾಗಿರುತ್ತದೆ. ಚಳಿಗಾಲದಲ್ಲಿ ರಮ್ ಸೇವಿಸುವುದು ಬೆಚ್ಚಗಿನ ಹಾಗೂ ಆರಾಮದಾಯ ಅನುಭವವನ್ನು ನೀಡುತ್ತದೆ. ರಮ್ ಮದ್ಯವು ವಿಸ್ಕಿಗಿಂತಲೂ ತುಸು ಸಿಹಿಯಾಗಿರುತ್ತದೆ. ರಮ್‌ನಲ್ಲೂ ವಿವಿಧ ಉತ್ಕೃಷ್ಟ ಅಥವಾ ಬೆಚ್ಚಗಿನ ಅನುಭವ ನೀಡುವುದಕ್ಕೆ ಸೂಕ್ತವಾದ ಮಸಾಲೆ ಪದಾರ್ಥಗಳನ್ನು ಸೇರಿಸುತ್ತಾರೆ.

ಬಿಯರ್

ರಮ್ ಮತ್ತು ವಿಸ್ಕಿಗೆ ಹೋಲಿಕೆ ಮಾಡಿದರೆ ಬಿಯರ್‌ಗೆ ಚಳಿಗಾಲದಲ್ಲಿ ಡಿಮ್ಯಾಂಡ್ ಕಡಿಮೆ ಎಂದೇ ಹೇಳಬಹುದು. ಸಾಮಾನ್ಯವಾಗಿ ಚಳಿಗಾಲದಲ್ಲಿ ಜನ ಹೆಚ್ಚು ಬಿಯರ್ ಸೇವನೆ ಮಾಡುವುದಿಲ್ಲ. ಇದರ ಕಡಿಮೆ ಆಲ್ಕೋಹಾಲ್ ಅಂಶ (ಸಾಮಾನ್ಯವಾಗಿ 4-6% ABV) ಚಳಿಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತದೆ. ದೇಹದ ಉಷ್ಣತೆ ಅಥವಾ ದೇಹವನ್ನು ತಂಪಾಗಿ ಇರಿಸಿಕೊಳ್ಳುವ ಉದ್ದೇಶದಿಂದ ಕೆಲವರು ಬಿಯರ್ ಸೇವನೆ ಮಾಡುತ್ತಾರೆ. ಹೀಗಾಗಿ ಚಳಿಗಾಲದಲ್ಲಿ ಬಿಯರ್ ಡಿಮ್ಯಾಂಡ್ ಕಡಿಮೆ.

ವಿಶೇಷ ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಈ ಲೇಖನವು ಮದ್ಯಪಾನ ಸೇವನೆಯನ್ನು ಉತ್ತೇಜಿಸುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+