ಸ್ವತಂತ್ರ ಭಾರತದಲ್ಲಿ ಯಾವ ಪ್ರಧಾನಿ ಅವಧಿಯಲ್ಲಿ ಎಷ್ಟು ಬಾರಿ ರಾಷ್ಟ್ರಪತಿ ಆಳ್ಬಿಕೆ?
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬಹುದು ಎಂಬ ಸುದ್ದಿ ಶುಕ್ರವಾರ ಹರಿದಾಡುತ್ತಿದೆ. ಸ್ವತಂತ್ರ ಭಾರತದಲ್ಲಿ ಯಾವ ಪ್ರಧಾನ ಮಂತ್ರಿ ಅವಧಿಯಲ್ಲಿ ಎಷ್ಟು ಬಾರಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿದೆ ಎಂಬ ವಿವರ ಹೀಗಿದೆ. ಇದುವರೆಗೆ ಅತಿ ಹೆಚ್ಚಿನ ಅವಧಿಗೆ ರಾಷ್ಟ್ರಪತಿ ಆಳ್ವಿಕೆ ಹೇರಿರುವುದು ಜಮ್ಮು- ಕಾಶ್ಮೀರದಲ್ಲಿ: ಆರು ವರ್ಷಗಳ ಕಾಲ. ಆ ನಂತರ ಪಂಜಾಬ್ ನಲ್ಲಿ: ನಾಲ್ಕು ವರ್ಷ.

ನೂರಕ್ಕೂ ಹೆಚ್ಚು ಬಾರಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿದ್ದು ಇಂದಿರಾ ಗಾಂಧಿ ಅವರು ಪ್ರಧಾನಿ ಹುದ್ದೆಯಲ್ಲಿ ಇದ್ದ ಅವಧಿಯಲ್ಲಿ. ಆ ಸಂಖ್ಯೆ ಐವತ್ತನ್ನು ಮುಟ್ಟುತ್ತದೆ. ಕಾಂಗ್ರೆಸ್ಸಿನಿಂದ ಪ್ರಧಾನಿ ಆದವರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಅವಧಿಯಲ್ಲಿ ಅತ್ಯಂತ ಕಡಿಮೆ ಸಲ ಅಂದರೆ, ಒಂದು ಬಾರಿಯಷ್ಟೇ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿದೆ.
| ಪ್ರಧಾನಮಂತ್ರಿ ಹೆಸರು | ಅವಧಿ | ಎಷ್ಟು ಸಲ? |
| ಜವಾಹರ್ ಲಾಲ್ ನೆಹರೂ | 1947- 1964 | 8 |
| ಲಾಲ್ ಬಹಾದ್ದೂರ್ ಶಾಸ್ತ್ರಿ | 1964-1966 | 1 |
| ಇಂದಿರಾ ಗಾಂಧಿ | 1966- 1977 | 35 |
| ಮೊರಾರ್ಜಿ ದೇಸಾಯಿ | 1977- 1979 | 16 |
| ಚರಣ್ ಸಿಂಗ್ | 1979- 1980 | 4 |
| ಇಂದಿರಾ ಗಾಂಧಿ | 1980- 1984 | 15 |
| ರಾಜೀವ್ ಗಾಂಧಿ | 1984- 1989 | 6 |
| ವಿ.ಪಿ.ಸಿಂಗ್ | 1989- 1990 | 2 |
| ಚಂದ್ರಶೇಖರ್ | 1990- 1991 | 5 |
| ಪಿ.ವಿ.ನರಸಿಂಹ ರಾವ್ | 1991- 1996 | 11 |
| ಎಚ್.ಡಿ.ದೇವೇಗೌಡ | 1996-1997 | 1 |
| ಅಟಲ್ ಬಿಹಾರಿ ವಾಜಪೇಯಿ | 1999- 2004 | 5 |
| ಮನ್ ಮೋಹನ್ ಸಿಂಗ್ | 2004- 2014 | 12 |
| ನರೇಂದ್ರ ಮೋದಿ | 2014- | 3 |












Click it and Unblock the Notifications