Pratap Simha: ಮುಂದೆ ಯಾವ ಬ್ರಾಹ್ಮಣನನ್ನು ಜಗದೀಶ್ ಶೆಟ್ಟರ್ ಟಾರ್ಗೆಟ್ ಮಾಡಬಹುದು? ಜನರಿಗೆ ಗೆಸ್ ಮಾಡಲು ಹೇಳಿದ ಪ್ರತಾಪಸಿಂಹ
ಮೈಸೂರು, ಏಪ್ರಿಲ್ 19: ನನಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಲ್ ಸಂತೋಷ್ ಕಾರಣ ಹಾಗೂ ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯಲಾಗುತ್ತಿದೆ ಎಂದು ಹೇಳಿದ್ದ ಜಗದೀಶ್ ಶೆಟ್ಟರ್ ಅವರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಇದಕ್ಕೆ ಮೂಲ ಕಾರಣ ಎಲ್ ಸಂತೋಷ್ ಅವರೇ ನೇರ ಕಾರಣ ಎಂದು ಶೆಟ್ಟರ್ ಹೇಳಿದ್ದರು.

ಇದು ರಾಜಕೀಯ ಚರ್ಚೆಗಳು ಮುಂದುವರೆದು ಕರ್ನಾಟಕದಲ್ಲಿ ಮುಂದಿನ ಬಾರಿ ಬ್ರಾಹ್ಮಣರನ್ನು ಸಿಎಂ ಮಾಡಲು ಲಿಂಗಾಯತ ಹಿರಿಯ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಹೀಗಾಗಿ ಎಲ್ಲ ಹಿರಿಯ ಬಿಜೆಪಿ ನಾಯಕರಿಗೆ ಟಿಕೆಟ್ ನಿರಾಕರಿಸಿ ನಿವೃತ್ತಿ ನೀಡಲಾಗುತ್ತಿದೆ ಎಂದು ಚರ್ಚೆಗಳು ನಡೆಯುತ್ತಿದ್ದವು.
ಈ ಬೆನ್ನಲ್ಲೇ ಇಂದು ಬುಧವಾರ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ನಿನ್ನೆ ಸಂತೋಷ್ ಜಿಯವರನ್ನು ದೂಷಣೆ ಮಾಡಿದ್ದಾಯಿತು, ನೆಕ್ಸ್ಟ್ ಯಾವ ಬ್ರಾಹ್ಮಣರನ್ನು ಜಗದೀಶ್ ಶೆಟ್ಟರ್ ಟಾರ್ಗೆಟ್ ಮಾಡಬಹುದು? ಗೆಸ್ ಮಾಡಿ. ಎಂದು ಟ್ವೀಟ್ ಮಾಡಿದ್ದರು. ಮಂಗಳವಾರ ಎಲ್ ಸಂತೋಷ್ ಪರ ಬ್ಯಾಟಿಂಗ್ ಮಾಡಿದ್ದ ಪ್ರತಾಪ್ ಸಿಂಹ ಸಂತೋಷ್ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದರು.

ಮುಂದುವರೆದು ಸಂತೋಷ್ ಅವರು ಮೂಲತಃ ಎಂಜಿನಿಯರ್, ಮೇಧಾವಿ. ಅವರು ತಮ್ಮ ಇಡೀ ಜೀವನವನ್ನು ಸಿದ್ಧಾಂತಕ್ಕೆ ರಾಷ್ಟ್ರಕ್ಕೆ, ಪಕ್ಷಕ್ಕೆ, ರಾಷ್ಟ್ರವಾದಕ್ಕೆ ಮುಡಿಪಾಗಿಟ್ಟಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಒಳ್ಳೆಯ ಕಂಪೆನಿಯಲ್ಲಿ ಕೆಲಸದಲ್ಲಿ ಇರಬೇಕಿತ್ತು. ಇಲ್ಲ ತಮ್ಮದೇ ಕಂಪೆನಿ ಆರಂಭಿಸಬಹುದಿತ್ತು. ಮೈಸೂರಿಗೆ ಪ್ರಚಾರಕ್ಕೆ ಬಂದಿದ್ದ ಅವರು ಇವತ್ತು ಬಿಜೆಪಿ ರಾಷ್ಟ್ರ ಕಾರ್ಯದರ್ಶಿಯಾಗಿದ್ದಾರೆ.
ಸಂತೋಷ್ ಅವರಿಗೆ ತಾಯಿ ಭಾರತೀಯ ಸೇವೆ ಗೊತ್ತೆ ಹೊರತು ಜಾತಿ ಬಾಂಧವರನ್ನು ಕೂಡಿಕೊಂಡು ರಾಜಕಾರಣ ಮಾಡಲು ಗೊತ್ತಿಲ್ಲ. ಅವರು ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿರುವಾಗಲೇ ವೀರಶೈವ ಸಮುದಾಯ ನಾಯಕರಿಗೆ ಎಲ್ಲ ಸ್ಥಾನಮಾನಗಳು ಸಿಕ್ಕಿವೆ, ಅವರು ಯಾರನ್ನು ಜಾತಿಯಿಂದ ಗುರುತಿಸುವುದಿಲ್ಲ. ಅವರು ಎಲ್ಲ ಹಿಂದೂಗಳನ್ನು ಸಮಭಾವದಿಂದ ನೋಡುವವರು ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಅವರು ಬಹಳ ದೊಡ್ಡ ವ್ಯಕ್ತಿ. ಅವರಿಗೆ ನಮ್ಮ ಯಡಿಯೂರಪ್ಪ ಅವರಿಗೆ ಉತ್ತರ ನೀಡಿದ್ದಾರೆ. ನಾನು ಒಂದೇ ಮಾತು ಹೇಳಿತ್ತೇನೆ. 1999ರಲ್ಲಿ ಬಿ ಶಿವಪ್ಪ ಅವರ ಬದಲಿಗೆ ಜಗದೀಶ್ ಶೆಟ್ಟರ್ ಅವರಿಗೆ ಕೊಟ್ಟಿತ್ತು ಬಿಜೆಪಿ. ಈ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಅವರ ಕ್ಷೇತ್ರದ ಜನರೇ ಉತ್ತರ ನೀಡಲಿದ್ದಾರೆ. ಶೆಟ್ಟರ್ ಅವರು ಬಿಜೆಪಿ ಬಗ್ಗೆ ಮಾತನಾಡುವುದು ನಿಲ್ಲಿಸಲಿ ಎಂದು ಹೇಳಿದರು.












Click it and Unblock the Notifications