ದಲಿತರು,ಹಿಂದುಳಿದ ನಾಯಕರು ಸಿದ್ದರಾಮಯ್ಯ ಸೋಲಿಸುತ್ತಾರೆ,ಪರಮೇಶ್ವರ್ ಕಾದು ಕೂತಿದ್ದಾರೆ: ಕೆ.ಎಸ್ ಈಶ್ವರಪ್ಪ

ನಾವು ಯಾಕೇ ಮಂತ್ರಿಯಾಗಬೇಕು? ಯಾರಿಗೆ ಅವಕಾಶ ಸಿಗುತ್ತೆ ಅವರು ಸಚಿವರು ಆಗುತ್ತಾರೆ, ನಾನು ಸಚಿವ ಸ್ಥಾನಕ್ಕಾಗಿ ಯಾರಿಗೂ ಕಿರಿಕಿರಿ ಮಾಡಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ರಾಯಚೂರು,ಫೆಬ್ರವರಿ20: ಈ ಬಾರಿ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲೇ ನಿಂತು ಸ್ಪರ್ಧೆ ಮಾಡಿದರೂ ಸೋಲುತ್ತಾರೆ. ದಲಿತರು, ಹಿಂದುಳಿದವರು ನಾಯಕರು ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆ. ಪರಮೇಶ್ವರ ಕಾದು ಕೂತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಈ ಕುರಿತು ರಾಯಚೂರನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ, ಶ್ರೀನಿವಾಸ್ ಪ್ರಸಾದ್ ಇನ್ನಿತರ ನಾಯಕರೇ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆ.
ಸಿದ್ದರಾಮಯ್ಯ ಒಬ್ಬ ಮಿಮಿಕ್ರಿ ಕಲಾವಿದ. ಸಿದ್ದರಾಮಯ್ಯ ವಿಶ್ವ ನಾಯಕ ಮೋದಿ ಅವರಿಗೆ ನರ ಹಂತಕ ಅಂತೀರಲ್ಲಾ? ನಿಮಗೆ ನಾನು ಏನಂತಾ ಕರಿಬೇಕು?, ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತಾಡುತ್ತಾರೆ. ಕನಿಷ್ಠ ಪಕ್ಷ ಒಂದು ಕ್ಷಮೆ ಕೇಳಿದ್ದಾರಾ ಸಿದ್ದರಾಮಯ್ಯ? ಎಂದು ಪ್ರಶ್ನಿಸಿದ್ದಾರೆ.

ಚುನಾವಣೆ ಸಮಯದಲ್ಲಿ ರಾಜ್ಯ ಬಜೆಟ್ ಮಂಡನೆಯಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಕಿವಿಯಲ್ಲಿ ಚಂಡು ಹೂ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ, ಆಡಳಿತ ಪಕ್ಷ ಐದು ವರ್ಷ ಆಡಳಿತ ಮಾಡಿ, ಮತ್ತೆ ಚುನಾವಣೆಯಲ್ಲಿ ಸೋತ್ತಿರಿ. ಒಳ್ಳೆಯ ಕೆಲಸ ಮಾಡಿದರೆ ಜನ ನಿಮ್ಮನ್ನ ತಿರಸ್ಕಾರ ಮಾಡ್ತಾ ಇರಲಿಲ್ಲ. ಚಂಡು ಹೂ ಇಟ್ಟುಕೊಂಡು ಕಾಂಗ್ರೆಸ್ ಪ್ರಚಾರ ಪಡೆದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Wherever Siddaramaiah Contest In Karnataka He loses Said KS Eshwarappa

ನಳೀನ್‌ ಕುಮಾರ ಕಟೀಲ್ ಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆ ಕುರಿತು ಮಾತನಾಡಿದ ಅವರು, ಭಾರತ ಈ ಹಿಂದೆ ಭಿಕ್ಷುಕರ , ಸಾಲಗಾರರ ರಾಷ್ಟ್ರವಾಗಿತ್ತು ಈಗ ಇಲ್ಲ, ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಆರ್ಥಿಕವಾಗಿ ಸದೃಢವಾಗಿದೆ, ನಳಿನ್ ಕುಮಾರ್ ಕಟೀಲ್ ಹೇಳಿಕೆಯಲ್ಲಿ ಗೊಂದಲವಾಗುವುದು ಬೇಡ ಎಂದರು.

ಐಪಿಎಸ್ ಅಧಿಕಾರಿ ಡಿ.ರೂಪ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿಚಾರದ ಕುರಿತು ಮಾತನಾಡಿದ ಅವರು, ಐಎಎಸ್ ಅಧಿಕಾರಿಗಳು ನೇರವಾಗಿ ಪತ್ರಿಕಾಗೋಷ್ಡಿ ಮಾಡುವುದು ಸರಿಯಲ್ಲ. ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದು ಸರಿಯಲ್ಲ, ವೈಯಕ್ತಿಕ ದ್ವೇಷಕ್ಕೆ ಪತ್ರಿಕಾಗೋಷ್ಠಿ ಮಾಡುವುದು ಸರಿಯಲ್ಲ, ಈ ಕುರಿತು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಜೊತೆಗೆ ಮಾತನಾಡುತ್ತೇನೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ನಾವು ಯಾಕೇ ಮಂತ್ರಿಯಾಗಬೇಕು? ಯಾರಿಗೆ ಅವಕಾಶ ಸಿಗುತ್ತೆ ಅವರು ಸಚಿವರು ಆಗುತ್ತಾರೆ, ನಾನು ಸಚಿವ ಸ್ಥಾನಕ್ಕಾಗಿ ಯಾರಿಗೂ ಕಿರಿಕಿರಿ ಮಾಡಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ವಿಷಯದಲ್ಲಿ ಅಶ್ವಥನಾರಾಯಣ ಹೇಳಿಕೆಯನ್ನ ನಾನು ಸಮರ್ಥನೆ ಮಾಡಲ್ಲ. ಪ್ರಜಾಪ್ರಭುತ್ವದಲ್ಲಿ ಕೊಲೆ ಮಾಡುವಂತ ಹೇಳಿಕೆ ಸರಿಯಲ್ಲ, ಆದರೆ ಈಗಾಗಲೇ ಅಶ್ವತ್ಥ ನಾರಾಯಣ ಕ್ಷಮೆ ಕೇಳಿದ್ದಾರೆ. ನೀವು ನರೇಂದ್ರ ಮೋದಿಗೆ ನರಹಂತಕ ಅಂತ ಕರಿತಿರಲ್ಲಾ ಸಿದ್ದರಾಮಯ್ಯ, ಪ್ರಧಾನಿಯನ್ನ ಏಕ ವಚನದಲ್ಲಿ‌ ಕರಿತಾರೆ, ನೀವು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

Wherever Siddaramaiah Contest In Karnataka He loses Said KS Eshwarappa

ಬಿಜೆಪಿ ಅವರು ರಾಕ್ಷಸರು ಎಂಬ ಸುರ್ಜೇವಾಲ್ ಹೇಳಿಕೆ ಕುರಿತು ಮಾತನಾಡಿ, ರಾಕ್ಷಸರನ್ನು ಜನ ಹೊರಹಾಕ್ತಿದ್ದಾರೆ. ದೈವ ಭಕ್ತರನ್ನು ಆಡಳಿತಕ್ಕೆ ತರುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸುರ್ಜೆಚಾಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸುರ್ಜೆವಾಲ್ ಒಬ್ಬ ರಾಷ್ಟ್ರೀಯ ನಾಯಕರು ಅವರಿಗೆ ಈ ತರಹದ ಹೇಳಿಕೆಯಿಂದ ಇದು ಶೋಭೆತರುವಂತಹದ್ದು ಅಲ್ಲ. ಅದಕ್ಕಾಗಿ ಜನ ರಾಕ್ಷಸರನ್ನು ಹೊರ ಹಾಕುತ್ತಿದ್ದಾರೆ, ದೈವ ಭಕ್ತರನ್ನು ಆಡಳಿತಕ್ಕೆ ತರುತ್ತಿದ್ದಾರೆ ಎಂದರು.

ನನ್ನ ಕಂಡ್ರೆ ಬಿಜೆಪಿ ನಾಯಕರಿಗೆ ಭಯ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಕುರಿತು ಮಾತನಾಡಿದ ಅವರು, ರಸ್ತೆಯಲ್ಲಿ ಕಾರು ಬಂದರೆ ನಾಯಿ ಬೊವ್ ಬೊವ್ ಎನ್ನುತ್ತದೆ. ನಾನು ಸಿದ್ದರಾಮಯ್ಯ ಅವರನ್ನ ನಾಯಿ ಅಂತ ಕರೆಯಲ್ಲ, ನರೇಂದ್ರ ಮೋದಿ ಆನೆಯಿದ್ದ ಹಾಗೆ, ಆನೆ ಹೋಗುವಾಗ ನಾಯಿಗಳು ಬೋಗಳುತ್ತವೆ, ಸಿದ್ದರಾಮಯ್ಯ ನಾಯಿ ಅಂತ ನಾನು ಹೇಳಲ್ಲ. ಅಂತಹ ಕೀಳು ಮಟ್ಟಕ್ಕೆ ನಾನು ಹೋಗುವುದಿಲ್ಲ ಎಂದು ಲೇವಡಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+