ಜಮೀರ್ ಅಹ್ಮದ್ ಹಾಗೂ ಸಿದ್ದರಾಮಯ್ಯ ಅವರು ಟಿಪ್ಪು ರಕ್ತ ಹಂಚಿಕೊಂಡು ಹುಟ್ಟಿದ್ದಾರೆ: ಈಶ್ವರಪ್ಪ

ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಮುನಿಯಪ್ಪ ಮತ್ತು ಶ್ರೀನಿವಾಸ್ ಪ್ರಸಾದ್ ಅವರೇ ಸಿದ್ದರಾಮಯ್ಯ ಗೆಲ್ಲಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಶಿವಮೊಗ್ಗ,ಫೆಬ್ರವರಿ28: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಟಿಪ್ಪು ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಟಾಕ್ ವಾರ್ ಮುಂದುವರೆದಿದೆ. ಒಂದು ಕಡೆ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಕೋಲಾರದಲ್ಲಿ ಯಾವುದೇ ಕಾರಣಕ್ಕೂ ಅವರು ಸ್ಪರ್ಧೆ ನಡೆಸುವುದಿಲ್ಲ ಎಂದು ಬಿಜೆಪಿ ನಾಯಕರು ಅಬ್ಬರಿಸುತ್ತಿದ್ದಾರೆ.

ಈ ಕುರಿತು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ಜಮೀರ್ ಅಹ್ಮದ್ ರ ಚಾಮರಾಜನಗರ ಕ್ಷೇತ್ರ ಸಿದ್ದರಾಮಯ್ಯಗೆ ಸುರಕ್ಷಿತ. ಏಕೆಂದರೆ ಜಮೀರ್ ಅಹ್ಮದ್ ಹಾಗೂ ಸಿದ್ದರಾಮಯ್ಯ ಅವರು ಟಿಪ್ಪು ರಕ್ತ ಹಂಚಿಕೊಂಡು ಹುಟ್ಟಿದ್ದಾರೆ. ಉಳಿದಂತೆ ರಾಜ್ಯದ 223 ಕ್ಷೇತ್ರದ ಸಿದ್ದರಾಮಯ್ಯ ಸೋಲಲಿದ್ದಾರೆ ಎಂದು ಹೇಳಿದ್ದಾರೆ.

Wherever Siddaramaiah Contest He loses Said KS Eshwarappa

ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಿ ಎಂದು ಸಿದ್ದರಾಮಯ್ಯ ಗೆ ಯಡಿಯೂರಪ್ಪ ಹೇಳಿದ್ದರು.‌ ಆ ಮಾತನ್ನು ಕೂಡ ಅವರು ಕೇಳುತ್ತಿಲ್ಲ. ಏನೋ ಹಿರಿಯರಾಗಿ ಸಲಹೆ ಕೊಟ್ಟಿದ್ದರು. ಅದನ್ನು ಕೂಡ ಅವರು ತಿರಸ್ಕರಿಸಿದ್ದಾರೆ. ಹಿರಿಯರ ಮಾರ್ಗದರ್ಶನ ಬೇಕು ಎಂದರೆ, ಅವರ ಮಾತು ಕೇಳಬಹುದಿತ್ತು. ಸಿದ್ದರಾಮಯ್ಯ ಅವರಿಗೆ ತಮ್ಮ ಕ್ಷೇತ್ರ ಯಾವುದೆಂದೇ ಗೊತ್ತಿಲ್ಲ. ಆದರೆ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದೇ ವೇಳೆ ಹೈ ಕಮಾಂಡ್ ಹೇಳಿದ ಕಡೆ ಸ್ಪರ್ಧಿಸುವುದಾಗಿ ಹೇಳುತ್ತಾರೆ.

ಹಾಗಾದರೆ ಹೈ ಕಮಾಂಡ್ ಕೋಲಾರದಿಂದ ಸ್ಪರ್ಧಿಸಲು ಸೂಚಿಸಿದೆಯೇ ? ಯಾವುದೇ ಕಾರಣಕ್ಕೂ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದೂ ಇಲ್ಲ. ಒಂದೊಮ್ಮೆ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಮುನಿಯಪ್ಪ ಮತ್ತು ಶ್ರೀನಿವಾಸ್ ಪ್ರಸಾದ್ ಅವರೇ ಸಿದ್ದರಾಮಯ್ಯ ಗೆಲ್ಲಲು ಬಿಡುವುದಿಲ್ಲ ಎಂದು ಹೇಳಿದರು.

Wherever Siddaramaiah Contest He loses Said KS Eshwarappa

ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಕಾಂಗ್ರೆಸ್‌ ಗೆ ಹೋಗುವುದಾಗಿ ಹೇಳಿರುವ ವಿಚಾರ. ಸಂತೋಷ ಅವರು ಕಾಂಗ್ರೆಸ್‌ ಸೇರಿದಂತೆ ಎಲ್ಲಿಗಾದರೂ ಹೋಗಲಿ, ಬೇಡ ಎಂದವರು ಯಾರು. ನಾವು ಯಾವ ಮಠಾಧೀಶರನ್ನೂ ಪಕ್ಷಕ್ಕೆ ಆಹ್ವಾನಿಸಿಲ್ಲ. ಅದು ವಿಶ್ವನಾಥ್ ಗೆ ಗೊತ್ತಿರಬಹುದು ಎಂದರು.

ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಭೇಟಿ ಕುರಿತು ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾತನಾಡಿ. ಗತಿ ಇಲ್ಲದೇ ಇರುವವರು ಕಾಂಗ್ರೆಸ್ ನಲ್ಲಿ ಪ್ರಚಾರಕ್ಕೆ ಬರ್ತಾರೆ. ಅವರಲ್ಲಿ ನಾಯಕರೇ ಇಲ್ಲ.
ಹಾಗಾಗಿ ಅವರು ಯಾರೂ ರಾಜ್ಯಕ್ಕೆ ಬರಲ್ಲ.ಇದ್ದವರು ಬಂದರೆ, ಚುನಾವಣೆಯಲ್ಲಿ ಸೋಲ್ತಾರೆ. ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರು ಎಲ್ಲಿದ್ದಾರೆ. ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರಿಲ್ಲದೇ ಸೊರಗುತ್ತಿದೆ ಎಂದು ತಿರುಗೇಟು ನೀಡಿದರು.

ರಾಜ್ಯಕ್ಕೆ ಪಕ್ಷ ಸಂಘಟನೆಗೆ ನಮ್ಮ ರಾಷ್ಟ್ರೀಯ ನಾಯಕರು ಬರುತ್ತಲೇ ಇರುತ್ತಾರೆ. ರಾಹುಲ್ ಗಾಂಧಿ, ಸೋನಿಯಾ ಹಾಗೂ ಪ್ರಿಯಾಂಕ ಗಾಂಧಿ ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ಕಾಂಗ್ರೆಸ್‌ ಸೋತಿದೆ. ಮೊದಲು ನರೇಂದ್ರ ಮೋದಿಗೆ ನರಹಂತಕ ಎಂದ್ರು. ಬಳಿಕ ಪರ್ಸಂಟೇಜ್ ವ್ಯವಹಾರ ಎಂದು ಟೀಕೆ ಮಾಡಿದ್ರು. ಈಗ ಪೇ ಸಿಎಂ ಎಂದು ಆರೋಪ ಮಾಡುತ್ತಿದ್ದಾರೆ. ರಾಜ್ಯದ ಜನ ಇವೆಲ್ಲಾ ಗಮನಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ಚುನಾವಣೆಯಲ್ಲಿ ಕೊಡುತ್ತಾರೆ. ಟೀಕೆ ಮಾಡುವ ಪದಗಳು ಸರಿಯಿಲ್ಲ.‌‌ ನಮಗೂ ಆ ಭಾಷೆ ಬಳಸಲು ಬರುತ್ತದೆ. ಡಿ.ಕೆ‌. ಶಿವಕುಮಾರ್ ಗೆ, ಸಿದ್ಧರಾಮಯ್ಯಗೆ ಭಾಷೆಗಳ ಬಗ್ಗೆ ಹಿಡಿತವೇ ಇಲ್ಲ ಎಂದು ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+