ಸಿದ್ದರಾಮಯ್ಯ ರಾಜಕೀಯ ನಿರುದ್ಯೋಗಿ ಆಗಲಿದ್ದಾರೆ; ಸಿದ್ದರಾಮಯ್ಯ ಎಲ್ಲಿಯೇ ನಿಂತರೂ ಸೋಲಿಸುತ್ತೇವೆ: ನಳಿನ್ ಕುಮಾರ್ ಕಟೀಲ್
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಕಾಂಗ್ರೆಸ್ ನವರೇ ಅವರನ್ನ ಸೋಲಿಸುತ್ತಾರೆ. ಇನ್ನೂ ಬೇರೆ ಯಾವುದೇ ಕ್ಷೇತ್ರದಲ್ಲಿ ನಿಂತರೂ ನಾವು ಸೋಲಿಸುತ್ತೇವೆ ಎಂದು ನಳಿನ್‍ಕುಮಾರ್ ಕಟೀಲ್ ಹೇಳಿದರು.
ಕೊಪ್ಪಳ,ಫೆಬ್ರವರಿ14: ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ರಾಜಕೀಯ ನಿರುದ್ಯೋಗಿ ಆಗಲಿದ್ದಾರೆ. ಅವರು ಎಲ್ಲಿಯೇ ನಿಂತರೂ ನಾವು ಸೋಲಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಕೊಪ್ಪಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಸಿಗುತ್ತಿಲ್ಲ. ಅವರಿಗೆ ಸ್ವಂತ ಕ್ಷೇತ್ರ ಇಲ್ಲ. ಈಗಿರುವಾಗ ಅವರ ಪಕ್ಷ ಅಧಿಕಾರಕ್ಕೆ ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಕಾಂಗ್ರೆಸ್ ನವರೇ ಅವರನ್ನ ಸೋಲಿಸುತ್ತಾರೆ. ಇನ್ನೂ ಬೇರೆ ಯಾವುದೇ ಕ್ಷೇತ್ರದಲ್ಲಿ ನಿಂತರೂ ನಾವು ಸೋಲಿಸುತ್ತೇವೆ. ಇನ್ನೂ ಸಿದ್ದರಾಮಯ್ಯ ಅವರು ರಾಜಕೀಯವನ್ನ ಬಿಟ್ಟು ಜ್ಯೋತಷ್ಯವನ್ನ ಹೇಳುವುದು ಒಳ್ಳೆಯದು. ಪ್ರಧಾನಿ ನರೇಂದ್ರ ಮೋದಿಯವರು ಅಪ್ಪನಾಣೆ ಪ್ರಧಾನಿ ಆಗಲ್ಲ ಅಂತ ಹೇಳಿದರು. ಆದರೆ, ಪ್ರಧಾನಿ ಮೋದಿಯವರು ಎರಡು ಬಾರಿ ಪ್ರಧಾನಿಯಾದರು. ಬಿ.ಎಸ್ ಯಡಿಯೂರಪ್ಪ ನವರು ಸಿಎಂ ಆಗಲ್ಲ ಅಂತ ಹೇಳಿದರು. ಅವರೂ ಸಿಎಂ ಆದರು. ಈಗಲೂ ಅವರು ಹೇಳೋದೆಲ್ಲ ನಡೆಯುವುದಿಲ್ಲ ಎಂದು ಹೇಳಿದರು.

ಇನ್ನೂ ಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಕುರಿತು ಮಾತನಾಡಿದ ಅವರು, ಪದೇ ಪದೇ ಯಾವುದೇ ಜಾತಿಯನ್ನ ನಿಂದಿಸುವುದು ಸರಿಯಲ್ಲ. ನಮ್ಮಮ ಸರ್ಕಾರ ಏನಾದರೂ ತಪ್ಪು ಮಾಡಿದರೇ ಅದನ್ನು ಅವರು ಟೀಕಿಸಲಿ. ಮೂರು ಪಕ್ಷಗಳು ತಮ್ಮ ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳ ಕುರಿತು ಚರ್ಚೆ ನಡೆಸಲಿ. ಆದರೆ ಅದನ್ನ ಬಿಟ್ಟು ಜಾತಿ ನಿಂದನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಜನಾರ್ಧನ ರೆಡ್ಡಿಯವರ ಹೊಸ ಪಕ್ಷದಿಂದ ಬಿಜೆಪಿಗೆ ಹಿನ್ನಡೆಯಾಗಲಿದೆಯೇ ಎಂಬ ವಿಚಾರವಾಗಿ ಮಾತನಾಡಿ, ರೆಡ್ಡಿ ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಯಾರು ಬೇಕಾದರೂ ಪಕ್ಷ ಸ್ಥಾಪಿಸಬಹುದು, ಚುನಾವಣೆಗೆ ಸ್ಪರ್ಧಿಸಬಹುದು. ಹೊಸ ಪಕ್ಷ ಬಂದ ಕೂಡಲೇ ಅದು ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿಯಾಗುವುದಿಲ್ಲ ಎಂದು ಹೇಳಿದರು.

ರಾಜ್ಯ ಬಿಜೆಪಿ ನಾಯಕರಿಗೆ ತಾಕತ್ ಇಲ್ಲದ ಕಾರಣ ಮೋದಿ, ಅಮಿತ್ ಶಾ ಅವರನ್ನು ಕರೆಸುತ್ತಿದ್ದಾರೆಂಬ ಕಾಂಗ್ರೆಸ್ ಟೀಕೆಗೆ ಕುರಿತು ಮಾತನಾಡಿ, ನಾಳೆ ಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ಸಿನ ನಾಯಕರಾದ ರಾಹುಲ್, ಸೋನಿಯಾ, ಪ್ರಿಯಾಂಕ ಅವರು ಚುನಾವಣೆ ಪ್ರಚಾರಕ್ಕೆ ಬರುವುದಿಲ್ಲವಾ? ಇವರಿಗೆ ಧಮ್ ಇದ್ರೆ ಅವರನ್ನು ಕರೆಸಬಾರದು. ಖರ್ಗೆ ಸಹ ಈಗ ರಾಷ್ಟ್ರೀಯ ನಾಯಕ. ಅವರನ್ನು ಕರೆಸದೇ ಮಾಡಲಿ ನೋಡೋಣ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಸವಾಲು ಹಾಕಿದರು.












Click it and Unblock the Notifications