Rain Alert: ಮಳೆ.. ಮಳೆ.. ಬೆಂಗಳೂರಿನಲ್ಲಿ ಭರ್ಜರಿ ಮಳೆ ಯಾವಾಗ?
ಮಳೆ.. ಮಳೆ.. ಹೀಗೆ ಬಿರು ಬೇಸಿಗೆ ನಡುವೆ ಇದೀಗ ಕರ್ನಾಟಕದ ಹಲವು ಜಿಲ್ಲೆಗಳಲ್ಲೀಗ ಭರ್ಜರಿ ಮಳೆ ಶುರುವಾಗಿದೆ. ಹೀಗಿದ್ದರೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅಬ್ಬರ ಶುರುವಾಗಿಲ್ಲ. ಅದರಲ್ಲೂ ಬೆಂಗಳೂರಿನ ಮಂದಿ ಬೇಸಿಗೆಯ ಬಿಸಿಲಿಗೆ ನರಳಿದ್ದು, ಮುಂದೆ ಏನು ಮಾಡುವುದು? ಅಂತಾ ಚಿಂತೆಯಲ್ಲಿದ್ದಾರೆ. ಹೀಗಿದ್ದಾಗ ಬೆಂಗಳೂರಿಗೆ ಕೂಡ ಮಳೆ ವಿಚಾರದಲ್ಲಿ ಭರ್ಜರಿ ಸುದ್ದಿ ಸಿಕ್ಕಿದೆ!
ಕರ್ನಾಟಕದ ಕರಾವಳಿ ಜಿಲ್ಲೆಯು ಸೇರಿದಂತೆ ಬೆಂಗಳೂರು ನಗರ & ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ ಬೆಂಗಳೂರಿನ ಕಥೆ ಏನು? ಅತಿಹೆಚ್ಚು ಮಳೆ ಬೀಳುತ್ತಾ ಇದ್ದ ನಮ್ಮ ಬೆಂಗಳೂರಿನಲ್ಲಿ ಈಗ ಮಳೆ ಯಾವಾಗ ಬರುತ್ತೆ?

ಕರ್ನಾಟಕದ ವಿದ್ಯಾಕಾಶಿ ಧಾರವಾಡ & ಹುಬ್ಬಳ್ಳಿಯಲ್ಲಿಂದು ಭಾರಿ ಮಳೆ ತಂಪೆರದಿದ್ದು, ಗದಗ ಜಿಲ್ಲೆಯ ಜನ ಕೂಡ ಭಾರಿ ಮಳೆಯಿಂದ ಖುಷಿಯಾಗಿ ಕುಣಿದಿದ್ದಾರೆ. ಆದರೆ ಬೆಂಗಳೂರಲ್ಲಿ ಭರ್ಜರಿ ಮಳೆ ಬರೋದು ಯಾವಾಗ? ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿದು, ಕೆರೆಗಳು ತುಂಬುವುದು ಯಾವಾಗ? ಮುಂದೆ ಓದಿ.
ಮುಂದಿನ 24 ಗಂಟೆಯಲ್ಲಿ ಮಳೆ!
ಹವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗ ಮಳೆಯಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಮಳೆಯ ಕೊರತೆ ಕಾಡುತ್ತಿದೆ. ಹೀಗಾಗಿ ಬೆಂಗಳೂರಿನ ನಿವಾಸಿಗಳು ನರಳಾಡಿ ಹೋಗಿದ್ದಾರೆ. ಬೋರ್‌ವೆಲ್ ಬತ್ತಿ ಹೋಗಿವೆ, ಕೆರೆಗಳ ತಳ ಕಾಣಿಸುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಹನಿ ಹನಿ ನೀರಿಗೂ ಸಂಕಷ್ಟ ಶುರುವಾಗಿದೆ. ಹೀಗಿದ್ದಾಗ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳಲೇಬೇಕು. ಇಲ್ಲವಾದ್ರೆ ಬೆಂಗಳೂರಿನ ಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಇಂತಹ ಸಮಯದಲ್ಲೇ ಭರ್ಜರಿ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, ಮುಂದಿನ 24 ಗಂಟೆಯಲ್ಲಿ ಬೆಂಗಳೂರಿನಲ್ಲೂ ಭಾರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ.

ಬೆಂಗಳೂರಿನ ಹಲವು ಪ್ರದೇಶದಲ್ಲಿ ಮಳೆ
ಮಳೆ.. ಮಳೆ.. ಮಳೆ.. ಹಿಂಗೆ ಜನರು ಭರ್ಜರಿ ಮಳೆ ನೋಡಿ ಫುಲ್ ಖುಷಿಯಾಗಿದ್ದಾರೆ. ಈ ನಡುವೆ ಬೇಸಿಗೆ ಸಮಯದಲ್ಲಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ, ರೈತರು ಕೂಡ ಫುಲ್ ಖುಷಿ ಆಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಮಳೆ ಅಬ್ಬರ ಶುರುವಾಗಿಲ್ಲ. ಹೀಗಾಗಿ, ಬೆಂಗಳೂರಿನ ಜನರು ಮಳೆಗಾಗಿ ಕಾಯುತ್ತಾ ಕೂತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ವಿಚಾರದಲ್ಲಿ ಭರ್ಜರಿ ಸುದ್ದಿ ಸಿಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಮುಂದಿನ 24 ಗಂಟೆಯಲ್ಲಿ ಬೆಂಗಳೂರಿನ ಹಲವು ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಮುಂಗಾರು ಮಳೆ ಕೈಕೊಟ್ಟ ಕಾರಣ 2023 ರಲ್ಲಿ ಬರದ ಬೇಗೆಯಲ್ಲಿ ಕರ್ನಾಟಕ ಬೆಂದು ಹೋಗಿ ಜನ ಪರದಾಡಿದ್ದಾರೆ. ಇದೇ ಕಾರಣಕ್ಕೆ, ಈ ಬಾರಿಯ ಬೇಸಿಗೆಯಲ್ಲಿ ಪರದಾಟ ಶುರುವಾಗಿ ಹನಿ ಹನಿ ನೀರು ಬಂಗಾರವಾಗಿದೆ. 2024 ಬೇಸಿಗೆ ಆರಂಭಕ್ಕೆ ಮೊದಲೇ, ತಲೆನೋವು ಶುರುವಾಗಿತ್ತು. ಕುಡಿವ ನೀರು ಒದಗಿಸಲು ಸರ್ಕಾರ ಪರದಾಡುತ್ತಿದೆ. ಈ ಸಮಯದಲ್ಲೇ ನಮ್ಮ ರಾಜ್ಯದ ಹಲವು ಪ್ರದೇಶದಲ್ಲಿ ಟ್ಯಾಂಕರ್ ಮಾಫಿಯಾ ಕೂಡ ಶುರುವಾಗಿದೆ. ಹೀಗಿದ್ದಾಗ ಮಳೆರಾಯ ಕನ್ನಡಗರ ಮೇಲೆ ಕರುಣೆ ತೋರಿಸಿ ಮಳೆ ಬರಿಸಿದ್ದಾನೆ.
ಕುಡಿಯುವ ನೀರಿಗೂ ತೀವ್ರ ಪರದಾಟ
ರಾಜ್ಯದಲ್ಲಿ ಮಳೆಯ ಕೊರತೆ ಎಂತಹ ಪರಿಸ್ಥಿತಿ ನಿರ್ಮಾಣ ಮಾಡಿತ್ತು ಎಂದರೆ, ರಾಜ್ಯದಲ್ಲಿರುವ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಅತಿಹೆಚ್ಚು ಮಳೆಯಾಗುವ ಮಲೆನಾಡು ಪ್ರದೇಶದಿಂದ ಹಿಡಿದು, ಕರಾವಳಿ ಜಿಲ್ಲೆಗಳ ತನಕ ಇದೇ ಪರಿಸ್ಥಿತಿ ಇತ್ತು. ಹಾಗೂ ಬಯಲು ಸೀಮೆ ಪ್ರದೇಶದಲ್ಲಿ ಇನ್ನೂ ಭಯಾನಕ ಪರಿಸ್ಥಿತಿ ಇತ್ತು. ಹೀಗೆ ಕುಡಿಯುವ ನೀರಿಗಾಗಿ ಜನರು ಪರದಾಡಿದ್ದರು. ರಾಜ್ಯದಲ್ಲಿನ ಬಹುತೇಕ ಕೆರೆಗಳು & ಡ್ಯಾಂಗಳು ಒಣಗಿ ಹೋಗಿರುವಾಗ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಮಳೆ ಬೀಳುವ ನಿರೀಕ್ಷೆ ಇದೆ.












Click it and Unblock the Notifications