ಲೀಲಾವತಿ ಆತ್ಮಕಥನ 'ರಾಜ್ ಲೀಲಾ ವಿನೋದ'ದಲ್ಲಿ ಅಂಥಾದ್ದೇನಿದೆ?

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 26: ಭಾನುವಾರ ಸಂಜೆ ಪತ್ರಕರ್ತ-ಲೇಖಕ ರವಿ ಬೆಳಗೆರೆ ಅವರು ಬರೆದಿರುವ, ನಟಿ ಲೀಲಾವತಿ ಅವರ ಆತ್ಮಕಥನ 'ರಾಜ್ ಲೀಲಾ ವಿನೋದ' ಬಿಡುಗಡೆ ಆಗಲಿಲ್ಲ. ಆದರೆ ಸೋಮವಾರದಿಂದ ಅಂಗಡಿಗಳಲ್ಲಿ ಖರೀದಿಗೆ ಸಿಗಲಿದೆ ಪುಸ್ತಕ. ತುಂಬ ಕುತೂಹಲಕ್ಕೆ ಕಾರಣವಾಗಿದ್ದ ಪುಸ್ತಕದಲ್ಲಿ ಏನೇನಿದೆ ಎಂದು ತಿಳಿದುಕೊಳ್ಳಲು ಕಾತರಿಸಿದ್ದವರಿಗಂತೂ ಭಾನುವಾರ ನಿರಾಶೆಯಾಗಿದೆ.

ಹೌದು, ಆ ಪುಸ್ತಕದಲ್ಲಿ ಯಾವ ಸಂಗತಿಗಳಿವೆ? ಅಂಥ ಕುತೂಹಲಕಾರಿ ಅಂಶಗಳು ಏನಿವೆ ಎಂಬುದನ್ನು ಒನ್ಇಂಡಿಯಾ ಕನ್ನಡ ತಿಳಿಸುತ್ತಿದೆ. ಭಾವನಾ ಪ್ರಕಾಶನದಿಂದ ಹೊರಬಂದಿರುವ 81ನೇ ಪುಸ್ತಕ ಇದು. ಮುಖಪುಟ ವಿನ್ಯಾಸವನ್ನು ಮಾಡಿರುವವರು ಸುಧಾಕರ ದರ್ಬೆ. 216 ಪುಟಗಳ ಪುಸ್ತಕದ ಬೆಲೆ 250 ರು.[ನನ್ನ ಸ್ಥಿತೀಲಿ ಬೇರೆ ಹೆಂಗಸಿದ್ದಿದ್ದರೆ ಎಷ್ಟು ರಾದ್ಧಾಂತ ಆಗ್ತಿತ್ತು?]

ಮುಖಪುಟದಲ್ಲಿ ರಾಜ್ ಕುಮಾರ್, ಲೀಲಾವತಿ ಹಾಗೂ ಬಾಲಕ ವಿನೋದ ರಾಜ್ ಅವರಿರುವ ಫೋಟೋವನ್ನು ಬಳಸಿದ್ದು, "ಫೋಟೋಗಳು ಒಳಗಿವೆ ವಿತ್ ಪ್ರೂಫ್" ಎಂಬ ಒಕ್ಕಣೆ ಹಾಗೂ ರಾಜ್ ಲೀಲಾ ವಿನೋದ ಶೀರ್ಷಿಕೆಯ ಮೇಲೆ ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ? ಎಂಬ ಸಾಲುಗಳಿವೆ.['ರಾಜ್ ಲೀಲಾ ವಿನೋದ': ಒನ್ಇಂಡಿಯಾ ಓದುಗರ ಪ್ರತಿಕ್ರಿಯೆ]

ಅರ್ಪಣೆ

ಅರ್ಪಣೆ

ಇಂಥ ಮಹತ್ತರವಾದ ಪುಸ್ತಕವನ್ನು ಲೇಖಕರು ಯಾರಿಗೆ ಅರ್ಪಿಸಿರುತ್ತಾರೆ ಎಂಬ ಕುತೂಹಲ ಸಹಜ. "ಬದುಕಿನುದ್ದಕ್ಕೂ ಇದೇ ನೋವು ಕಂಡ ನನ್ನ 'ಅಮ್ಮ'ನಿಗೆ" ಎಂದು ರವಿ ಬೆಳಗೆರೆಯವರು ಈ ಪುಸ್ತಕವನ್ನು ತಮ್ಮ ತಾಯಿಯವರಿಗೆ ಅರ್ಪಣೆ ಮಾಡಿದ್ದಾರೆ.

ನಿರ್ಧಾರ ಗಟ್ಟಿಯಾಯಿತು

ನಿರ್ಧಾರ ಗಟ್ಟಿಯಾಯಿತು

ಶಿರಾದ ಹೊಟೇಲೊಂದರಲ್ಲಿ ತಿಂಡಿ ತಿನ್ನುವ ವೇಳೆ ಹಾಗೆ ಮಾತಿಗೆ ಸಿಕ್ಕ ಲೀಲಾವತಿ ಹಾಗೂ ವಿನೋದ್ ರಾಜ್. ಮತ್ತು ಆ ದಿನ ಆತ್ಮಕಥನ ಬರೆಯುವುದಕ್ಕೆ ಬೀಜಾಂಕುರವಾದದ್ದು, ಈಟಿವಿ ಕನ್ನಡದಲ್ಲಿ ಎಂದೂ ಮರೆಯದ ಹಾಡು ಕಾರ್ಯಕ್ರಮದಲ್ಲಿ ಲೀಲಾವತಿ ಅವರ ಆತ್ಮಕಥನ ಬರೆಯುವ ನಿರ್ಧಾರ ಮತ್ತೂ ಗಟ್ಟಿಯಾದ ಸಂಗತಿಯನ್ನು ಮುನ್ನುಡಿಯಲ್ಲಿ ತೆರೆದಿಟ್ಟಿದ್ದಾರೆ ರವಿ ಬೆಳಗೆರೆ.

ಹೋರಾಟದ ಬದುಕು

ಹೋರಾಟದ ಬದುಕು

ಬಾಲ್ಯ, ಬಣ್ಣದ ಹುಚ್ಚು ಅಂಟಿಕೊಂಡಿದ್ದು, ಆ ನಂತರ ನಾಟಕ ಕಂಪನಿಗಳಲ್ಲಿನ ಅವರ ಪಯಣ, ಏಕಾಂಗಿಯಾಗಿ ನಡೆಸಿದ ಹೋರಾಟವನ್ನು ಹೇಳಿಕೊಂಡಿದ್ದಾರೆ ಲೀಲಾವತಿ.

ಎರಡನೇ ಮದುವೆ ಪ್ರಸ್ತಾವ

ಎರಡನೇ ಮದುವೆ ಪ್ರಸ್ತಾವ

ಮದುವೆಯಾದ ಹತ್ತು ವರ್ಷದ ನಂತರ ಕೂಡ ರಾಜ್-ಪಾರ್ವತಮ್ಮ ದಂಪತಿಗೆ ಮಕ್ಕಳಾಗಿರುವುದಿಲ್ಲ. ಆಗ ರಾಜ್ ಕುಮಾರ್ ಅವರಿಗೆ ಎರಡನೇ ಮದುವೆ ಮಾಡುವ ಪ್ರಸ್ತಾವ ಇರುತ್ತದೆ ಎಂಬುದು ಗೊತ್ತಾಗುತ್ತದೆ. ಆಗ ಲೀಲಾವತಿಯವರಿಗೆ ರಾಜ್ ಅವರೆಡೆಗೊಂದು ಪ್ರೀತಿ ಮೂಡುತ್ತದೆ. ಸ್ವತಃ ರಾಜ್ ಕೂಡ ಲೀಲಾವತಿ ಅವರನ್ನು ಮದುವೆ ಆಗುವ ಬಯಕೆ ವ್ಯಕ್ತಪಡಿಸುತ್ತಾರೆ.

ಫೋಟೋ-ಪತ್ರಗಳು

ಫೋಟೋ-ಪತ್ರಗಳು

ರಾಜಕುಮಾರ್ ರೊಂದಿಗೆ ಲೀಲಾವತಿ-ವಿನೋದ್ ರಾಜ್ ಅವರ ಫೋಟೋಗಳು, ಲೀಲಾವತಿ ಅವರಿಗೆ ರಾಜ್ ಕುಮಾರ್ ಅವರು ಬರೆದಿದ್ದರು ಎನ್ನಲಾದ ಪತ್ರಗಳನ್ನು ಪ್ರಕಟಿಸಲಾಗಿದೆ.

ಸಂತ ತುಕಾರಾಂ ಚಿತ್ರೀಕರಣ

ಸಂತ ತುಕಾರಾಂ ಚಿತ್ರೀಕರಣ

ಕೊಲ್ಹಾಪುರದಲ್ಲಿ ಸಂತ ತುಕಾರಾಂ ಚಿತ್ರೀಕರಣ ವೇಳೆ ತಾವು ತುಂಬ ಅನ್ಯೋನ್ಯವಾಗಿದ್ದೆವು. ಲಕ್ಷ್ಮಿ ದೇವಿಯ ವಿಗ್ರಹ ಎದುರು ತನಗೆ ಲಕ್ಷ್ಮಿ ಕಾಸಿರುವ ದಾರವನ್ನು 'ದೊಡ್ಡವರು' ಕಟ್ಟಿದರು. ಅದು ತಮ್ಮಿಬ್ಬರ ಜೀವನದಲ್ಲೂ ಸಂತಸದ ದಿನಗಳು ಎಂದು ಲೀಲಾವತಿಯವರು ಹೇಳಿಕೊಂಡಿದ್ದಾರೆ.

ಪಾರ್ವತಮ್ಮನವರ ಬಗ್ಗೆ ಒಳ್ಳೆ ಮಾತು

ಪಾರ್ವತಮ್ಮನವರ ಬಗ್ಗೆ ಒಳ್ಳೆ ಮಾತು

ಪಾರ್ವತಮ್ಮನವರ ಬಗ್ಗೆ ಒಳ್ಳೆ ಮಾತನಾಡಿದ್ದಾರೆ ಲೀಲಾವತಿ. ಆದರೆ ತಾವು ಮಾಡಿದ ತ್ಯಾಗಕ್ಕೆ ತಕ್ಕ ಪ್ರತಿಫಲ ತನಗೆ ದೊರಕಲಿಲ್ಲ ಎಂಬ ಕೊರಗು ಹೇಳಿಕೊಂಡಿದ್ದಾರೆ.

ಈಗ ಅತ್ಮಕಥೆ ಬರೆದು, ಈ ವಿಚಾರ ತಿಳಿಸಿದ್ದೇಕೆ?

ಈಗ ಅತ್ಮಕಥೆ ಬರೆದು, ಈ ವಿಚಾರ ತಿಳಿಸಿದ್ದೇಕೆ?

ಈಗ ಲೀಲಾವತಿಯವರಿಗೆ ಎಂಬತ್ತು ವರ್ಷ. ಈಗಲೂ ವಿನೋದ್ ರಾಜ್ ಜನ್ಮರಹಸ್ಯ ತಿಳಿಸದಿದ್ದರೆ ಹೇಗೆ ಎಂದು ವಿನೋದ್ ರಾಜ್ ಕೇಳಿದ್ದರಿಂದ ತಮ್ಮ ಬದುಕಿನ ಕಥೆಯನ್ನು ಬಿಚ್ಚಿಟ್ಟರಂತೆ ನಟಿ ಲೀಲಾವತಿ.

ಸುದೀರ್ಘ ಇತಿಹಾಸ

ಸುದೀರ್ಘ ಇತಿಹಾಸ

ರಾಜ್ ಲೀಲಾ ವಿನೋದ ಪುಸ್ತಕ ಎರಡು ಕುಟುಂಬಗಳ ತಾಕಲಾಟ, ಸಾಂಸಾರಿಕ ವಿಚಾರ, ಆ ಕಾಲಘಟ್ಟದ ಸಾಮಾಜಿಕ ಸ್ಥಿತಿ-ಗತಿ, ಐದಾರು ದಶಕಗಳ ಚಿತ್ರರಂಗದ, ನಟ-ನಟಿಯರ ಇತಿಹಾಸವನ್ನು ಆರ್ದ್ರವಾಗಿ ಕಟ್ಟಿಕೊಡುವ ಪುಸ್ತಕ ಅನ್ನೋದು ಹೌದು.

ಏನೇನೂ ನೆಗಟಿವ್ ಅಂಶಗಳಿರುವ ಪುಸ್ತಕವಲ್ಲ

ಏನೇನೂ ನೆಗಟಿವ್ ಅಂಶಗಳಿರುವ ಪುಸ್ತಕವಲ್ಲ

ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೂ ನೆಗಟಿವ್ ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. belagereravi@gmail.com ಗೆ ನೀವು ಅಭಿಪ್ರಾಯ ಕಳಿಸಿ.
ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
ಎಂದು ಬೆನ್ನುಡಿಯಲ್ಲಿ ಬರೆದಿದ್ದಾರೆ ಲೇಖಕ ರವಿ ಬೆಳಗೆರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Content details of Ravi belagere's Raj Leela Vinoda book. It is an Autobiography of actress leelavathi. The book available in book shops from December 26th.
Please Wait while comments are loading...