10,000,000 ಕರ್ನಾಟಕದಲ್ಲಿರುವ ವಲಸಿಗರ ಸಂಖ್ಯೆ! ವಲಸಿಗರು ಇಲ್ಲಿ ಮತಚಲಾಯಿಸಬಹುದೇ, EC ಹೇಳಿದ್ದೇನು ?
ಕರ್ನಾಟಕದಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದು ದಿನೇ ದಿನೆ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಿಗಿಂತ ಮುಂಚೆ ಇದ್ದ ಟ್ರಾಫಿಕ್ ಜಾಮ್ ಸಮಸ್ಯೆಗೂ ಈಗ ಇರುವ ಟ್ರಾಫಿಕ್ ಜಾಮ್ ಸಮಸ್ಯೆಗೂ ಸಾಕಷ್ಟು ವ್ಯತ್ಯಾಸವಿದೆ. ಇದೀಗ ಬೆಂಗಳೂರು ವಿಪರೀತ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಮೆಟ್ರೋ ಸೇರಿದಂತೆ ಸಾರಿಗೆ ಸೇವೆ ಕಷ್ಟವಾಗುತ್ತಿದೆ. ಮಾರುಕಟ್ಟೆಗಳಲ್ಲೂ ವಿಪರೀತ ಜನ ಸೇರುವುದಿದೆ. ಆದರೆ ಸರ್ಕಾರವು ಇದಕ್ಕೆ ಪರ್ಯಾಯ ಮತ್ತು ವೇಗವಾಗಿ ಕೆಲಸ ಮಾಡುತ್ತಿಲ್ಲ. ಈ ನಡುವೆ ಕರ್ನಾಟಕದಲ್ಲಿ ಬರೋಬ್ಬರಿ 1 ಕೋಟಿ ವಲಸಿಗರಿದ್ದು ಅವರು ಮತ ಚಲಾಯಿಸುವುದಕ್ಕೂ ಅವಕಾಶವಿದೆ ಎಂದು ಹೇಳಲಾಗುತ್ತಿದೆ.
ಒಂದೊಮ್ಮೆ ವಲಸಿಗರಿಗೆ ಮತ ಚಲಾಯಿಸುವ ಅಧಿಕಾರವೂ ಸಿಕ್ಕರೆ ಅವರಿಗೆ ಬೇಕಾದರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಕನ್ನಡ, ಕರ್ನಾಟಕ, ನಾಡು - ನುಡಿ ಮತ್ತು ಜಲ ವಿಚಾರದಲ್ಲಿ ಹಿನ್ನಡೆ ಆಗಲಿದೆ ಎಂದೇ ಹೇಳಲಾಗುತ್ತಿದೆ. 2025ರಲ್ಲಿ ಕರ್ನಾಟಕದ ಜನಸಂಖ್ಯೆ ಎಷ್ಟಿದೆ ಎನ್ನುವ ವಿಚಾರವಾಗಿ ಎರಡು ಬೇರೆ ಬೇರೆ ಸಂಖ್ಯೆಗಳು ಬಂದಿವೆ. ಭಾರತೀಯ ಚುನಾವಣಾ ಆಯೋಗವು 7.86 ಕೋಟಿ ಎಂದು ಅಂದಾಜು ಮಾಡಿದ್ದರೆ. ರಾಷ್ಟ್ರೀಯ ಜನಸಂಖ್ಯಾ ಆಯೋಗವು 6.85 ಕೋಟಿ ಎಂದು ಅಂದಾಜಿಸಿದೆ. ಈ ಎರಡೂ ಆಯೋಗಗಳು ನೀಡುವ ಅಂಕಿ - ಸಂಖ್ಯೆಗಳ ನಡುವೆ ಬರೋಬ್ಬರಿ ಒಂದು ಕೋಟಿ ವ್ಯತ್ಯಾಸವಿದೆ.

ಜನಗಣತಿ ನಡೆದು 10 ವರ್ಷಗಳಿಗಂತ ಹೆಚ್ಚಾಗಿರುವುದರಿಂದ ಈ ಅಂಕಿ - ಸಂಖ್ಯೆಗಳಲ್ಲಿ ಹೆಚ್ಚು ವ್ಯತ್ಯಾಸ ಕಂಡು ಬರುತ್ತಿದೆ ಎಂದು ಹೇಳಲಾಗಿದೆ. ಆದರೆ, ಇದೀಗ ಈ ವಿಚಾರಕ್ಕಿಂತಲೂ ಹೆಚ್ಚು ಚರ್ಚೆ ಆಗುತ್ತಿರುವುದು ಈ ವಲಸಿಗರು ಮುಂದಿನ ದಿನಗಳಲ್ಲಿ ಕರ್ನಾಟಕದ ಚುನಾವಣೆಗಳಲ್ಲಿ ಮತ ಚಲಾಯಿಸುವ ಬಗ್ಗೆ.
ಬರಹಗಾರ ಸಿದ್ದೇಗೌಡ ಶ್ಯಾಮ್ ಪ್ರಸಾದ್ ಅವರು, ರಾಷ್ಟ್ರೀಯ ಜನಸಂಖ್ಯಾ ಆಯೋಗ ಹೇಳಿರುವುದಕ್ಕಿಂತ (6.85 ಕೋಟಿ) ಒಂದು ಕೋಟಿ ಹೆಚ್ಚು ಜನಸಂಖ್ಯೆಯನ್ನು ಚುನಾವಣಾ ಆಯೋಗ (7.86 ಕೋಟಿ) ಕರ್ನಾಟಕದಲ್ಲಿ ತೋರಿಸುತ್ತಿದೆ. ಕನ್ನಡಿಗರ ಜನಸಂಖೆ ಏರಿಕೆ ಪ್ರಮಾಣ ಮೊದಲೇ ಕಮ್ಮಿ ಇದ್ದ 1% ಇಂದ 0.6% ಗೆ ಕುಸಿದಿದೆ (2011-15 ಇಂದ 2021-25 ಅವಧಿ). ಹಾಗಾದರೆ ಚುನಾವಣಾ ಆಯೋಗ ಹೇಳುವ ಈ ಹೆಚ್ಚುವರಿ ಒಂದು ಕೋಟಿ ಜನ ಕರ್ನಾಟಕಕ್ಕೆ ಎಲ್ಲಿಂದ ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಹಾರದಲ್ಲಿ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಉತ್ತರ ಅಡಗಿದೆ. ಬಿಹಾರದಲ್ಲಿ ಅವರಿಗೆ ಸ್ವಂತ ಮನೆ ಇದ್ದರೂ ಅವರು ವಲಸೆ ಹೋಗಿ ಕೆಲಸ ಮಾಡುತ್ತಿರುವ ರಾಜ್ಯಗಳಲ್ಲಿ ಅವರು ಮತದಾನ ಮಾಡಬೇಕು ಎಂದು, ಅದರ ಪ್ರಕಾರ ಮತದಾರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಮುಂದೆ ನಡೆಯುವ ಚುನಾವಣೆಗಳಲ್ಲಿ ವಲಸಿಗರ ಈ ಒಂದು ಕೋಟಿ ಮತಗಳು ಸೇರಿಕೊಳ್ಳಲಿದೆ. ವಲಸಿಗರ ಮತಗಳು ಯಾವ ಪಕ್ಷಗಳಿಗೆ ಬೀಳಲಿದೆ ಎಂದು ಬಿಡಿಸಿ ಹೇಳಬೇಕಿಲ್ಲ ಎಂದು ಅವರು ಹೇಳಿದ್ದಾರೆ. #ನಮ್ಮನಾಡು_ನಮ್ಮಆಳ್ವಿಕೆ.












Click it and Unblock the Notifications