ರಾಜ್ಯದಲ್ಲಿ ಶೈಕ್ಷಣಿಕ ಪ್ರವಾಸ ರದ್ದು ಬಗ್ಗೆ ಶಿಕ್ಷಣ ಇಲಾಖೆ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್, 13: ರಾಜ್ಯದಲ್ಲಿ ಶಾಲೆಗಳ 2024-25ನೇ ಸಾಲಿನ ಶೈಕ್ಷಣಿಕ ಪ್ರವಾಸ ರದ್ದಾಗಿದೆ ಎನ್ನುವ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇನ್ನು ಶಾಲಾ ಶಿಕ್ಷಣ ಇಲಾಖೆಯು ಶೈಕ್ಷಣಿಕ ಪ್ರವಾಸ ರದ್ದು ಕುರಿತು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ಎನ್ನಲಾದ ಸಂದೇಶದ ಬಗ್ಗೆ ಸ್ಪಷ್ಟನೆ ನೀಡಿದೆ. ಇಲ್ಲಿದೆ ನೋಡಿ ಮಾಹಿತಿ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಜಿಲ್ಲಾ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಇವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಪ್ರಸ್ತುತ 2024-25ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಪಕ್ಷಣಿಕ ಪ್ರವಾಸ ಕುರಿತು ವಾಟ್ಸಪ್‌ನಲ್ಲಿ ಅಥವಾ ಇತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕ್ಷಣಿಕ ಪ್ರವಾಸ ರದ್ದು ಮಾಡಿರುವ ಬಗ್ಗೆ ಹಾಗೂ ಈಗಾಗಲೇ ಪ್ರವಾಸ ಹೊರಟಿದ್ದಲ್ಲಿ ಕೂಡಲೇ ಹಿಂದಿರುಗಿ ಬರುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸೂಚಿಸಿರುವುದಾಗಿ ಸುದ್ದಿ ಹಬ್ಬಿಸುತ್ತಿದ್ದಾರೆ, ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿದ ಶಿಕ್ಷಣ ಇಲಾಖೆಯು, 2024-25ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳಲಾಗುತ್ತಿರುವ ಪ್ರಕ್ಷಣಿಕ ಪ್ರವಾಸ ಮಾಡದಂತೆ ಅಥವಾ ಹಮ್ಮಿಕೊಂಡಿದ್ದಲ್ಲಿ ಕೂಡಲೇ ಹಿಂತಿರುಗಿ ಬರುವಂತೆ ಯಾವುದೇ ಸೂಚನೆ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮುಂದುವರೆದು ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25ನೇ ಸಾಲಿನಲ್ಲಿ ವಸ್ತುತ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸಗಳನ್ನು ಡಿಸೆಂಬರ್ 2024ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ರಜಾ ದಿನಗಳ ಪಟ್ಟಿ: ರಾಜ್ಯ ಸರ್ಕಾರವು ಪ್ರತಿವರ್ಷದಂತೆ 2025-26ನೇ ಸಾಲಿನ ಕರ್ನಾಟಕ ಶೈಕ್ಷಣಿಕ ಶಾಲಾ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗಾದರೆ 2025ರಲ್ಲಿ ಶಾಲೆಗಳಿಗೆ ಯಾವ್ಯಾವ ದಿನ ರಜೆ ಇರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2025ನೇ ಸಾಲಿನ ಶೈಕ್ಷಣಿಕ ರಜೆ ದಿನಗಳ ಪಟ್ಟಿ
* ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ: ಜನವರಿ 14, 2025
* ಗಣರಾಜ್ಯೋತ್ಸವ: ಜನವರಿ 26, 2025
* ಮಹಾ ಶಿವರಾತ್ರಿ: ಫೆಬ್ರವರಿ 26, 2025
* ಯುಗಾದಿ ಹಬ್ಬ: 30 ಮಾರ್ಚ್, 2025
* ಖುತುಬ್-ಎ-ರಂಜಾನ್: 31 ಮಾರ್ಚ್, 2025
* ಗುಡ್ ಫ್ರೈಡೆ: 18 ಏಪ್ರಿಲ್, 2025
* ಬಸವ ಜಯಂತಿ/ಅಕ್ಷಯ ತೃತೀಯ: 30 ಏಪ್ರಿಲ್, 2025 & ಮೇ 1, 2025
* ಬೇಸಿಗೆ ರಜೆಗಳು: 20 ಮೇ ನಿಂದ 30 ಜೂನ್, 2025
* ಬಕ್ರೀದ್: 7 ಜೂನ್, 2025
* ಮೊಹರಂನ ಕೊನೆಯ ದಿನ: 27 ಜುಲೈ, 2025
* ಸ್ವಾತಂತ್ರ್ಯ ದಿನಾಚರಣೆ: 15 ಆಗಸ್ಟ್, 2025
* ವರಸಿದ್ಧಿ ವಿನಾಯಕ ವ್ರತ: 27 ಆಗಸ್ಟ್, 2025
* ಈದ್ ಮಿಲಾದ್: 5 ಸೆಪ್ಟೆಂಬರ್, 2025
* ಮಹಾನವಮಿ, ಆಯುಧಪೂಜೆ: 1 ಅಕ್ಟೋಬರ್, 2025
* ಗಾಂಧಿ ಜಯಂತಿ/ಮಹಾಲಯ ಅಮಾವಾಸ್ಯೆ: 2 ಅಕ್ಟೋಬರ್, 2025
* ಮಹರ್ಷಿ ವಾಲ್ಮೀಕಿ ಜಯಂತಿ: 7 ಅಕ್ಟೋಬರ್, 2025
* ತುಲಾ ಸಂಕ್ರಮಣ: 17 ಅಕ್ಟೋಬರ್, 2025
* ನರಕ ಚತುರ್ದಶಿ: 20 ಅಕ್ಟೋಬರ್, 2025
* ಬಲಿಪಾಡ್ಯಮಿ, ದೀಪಾವಳಿ: ಅಕ್ಟೋಬರ್ 22, 2025
* ಕನ್ನಡ ರಾಜ್ಯೋತ್ಸವ: 1 ನವೆಂಬರ್, 2025
* ಕನಕದಾಸ ಜಯಂತಿ: 8 ನವೆಂಬರ್, 2025
* ಹುತ್ರಿ: 5 ಡಿಸೆಂಬರ್, 2025
ಕರ್ನಾಟಕದಲ್ಲಿ ನಿರ್ಬಂಧಿತ ರಜಾದಿನಗಳ ಪಟ್ಟಿ
* ಹೊಸ ವರ್ಷ: 1 ಜನವರಿ, 2025
* ಹೋಳಿ: 14 ಮಾರ್ಚ್, 2025
* ಪವಿತ್ರ ಶನಿವಾರ: 15 ಮಾರ್ಚ್, 2025
* ಜುಮತ್-ಉಲ್-ವಿದಾ: 28 ಮಾರ್ಚ್, 2025
* ಶಬ್-ಎ-ಖಾದರ್: 27 ಮಾರ್ಚ್, 2025
* ರಾಮನವಮಿ: 6 ಏಪ್ರಿಲ್, 2025
* ಬುದ್ಧ ಪೂರ್ಣಿಮಾ: 12 ಏಪ್ರಿಲ್, 2025
* ವರಮಹಾಲಕ್ಷ್ಮಿ ವ್ರತ: 8 ಆಗಸ್ಟ್, 2025
* ಶ್ರೀ ಕೃಷ್ಣ ಜನ್ಮಾಷ್ಟಮಿ: 16 ಆಗಸ್ಟ್, 2025
* ಸ್ವರ್ಣಗೌರಿ ವ್ರತ: 26 ಆಗಸ್ಟ್, 2025
* ರಗ್-ಉಪಕರ್ಮ, ಯಜುರ್ ಉಪಕರ್ಮ: 9 ಆಗಸ್ಟ್, 2025
* ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ: 18 ಸೆಪ್ಟೆಂಬರ್, 2025
* ವಿಶ್ವಕರ್ಮ ಜಯಂತಿ: 17 ಸೆಪ್ಟೆಂಬರ್, 2025
* ಗುರುನಾನಕ್ ಜಯಂತಿ: 5 ನವೆಂಬರ್2025
* ಕ್ರಿಸ್ ಮಸ್ ಮುನ್ನಾದಿನ: 24 ಡಿಸೆಂಬರ್, 2025












Click it and Unblock the Notifications