ಮೈಮರೆಯದಿರಿ ಹಿಂದೂಗಳೇ ಎಂದಿದ್ದೇಕೆ ಬಸನಗೌಡ ಪಾಟೀಲ ಯತ್ನಾಳ

ತಿರುಪತಿ ತಿರುಮಲದಲ್ಲಿ ನೀಡುವ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿದೆ ಎನ್ನುವ ಆರೋಪ ಈಗ ಸಾಕಷ್ಟು ಆತಂಕ ಹಾಗೂ ವಿವಾದಕ್ಕೆ ಕಾರಣವಾಗಿದೆ. ಇದೀಗ ಈ ಬಗ್ಗೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಟ್ವೀಟ್‌ ಮಾಡಿದ್ದು, ಈ ಟ್ವೀಟ್‌ಗೆ ಪರ - ವಿರೋಧ ವ್ಯಕ್ತವಾಗಿದೆ. ಯತ್ನಾಳ ಟ್ವೀಟ್‌ಗೆ ಹಲವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ತಿರುಪತಿ ಪ್ರಸಾದವಾದ ಲಡ್ಡಿನಲ್ಲಿ ಪ್ರಾಣಿ ಕೊಬ್ಬು ಬಳಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ಇದೀಗ ಈ ಬಗ್ಗೆ ಮಾತನಾಡಿರುವ ಯತ್ನಾಳ

ಹಿಂದೂಗಳ ಮೇಲೆ ಅನ್ಯಕೋಮಿನವರು ದಬ್ಬಾಳಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಯತ್ನಾಳ, ಹಲವು ವರ್ಷಗಳಿಂದ ಹಿಂದೂಗಳ ಮೇಲೆ ದಬ್ಬಾಳಿ ಮುಂದುವರಿದಿದೆ. ಹಿಂದೂಗಳಲ್ಲಿ ಅರಿವು ಕಡಿಮೆಯಾಗಿರುವುದೂ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಇದಕ್ಕೆ ಅವರು ಭಾರತದಲ್ಲಿ ಶತಮಾನಗಳ ಹಿಂದೆ ನಡೆದಿರುವ ವಿಷಯವನ್ನು ಉಲ್ಲೇಖಿಸಿದ್ದಾರೆ.

What BJP leader Basanagouda Patil Yatnal said to Hindus

1712: ಆಹಾರದಲ್ಲಿ ಗೋಮಾಂಸ ಮಿಶ್ರಣ ಮಾಡಿದ್ದಕ್ಕಾಗಿ ಹಿಂದೂಗಳು ಮೊಘಲ್ ಸರ್ಕಾರದ ಮೇಲೆ ಬಂಡಾಯ ಸಾರುತ್ತಾರೆ. ಮೊಘಲ್ ಪ್ರಾಂತಾಧಿಪತಿ ಹಿಂದೂಗಳಿಗೆ ಬೇಷರತ್ ಕ್ಷಮೆ ಕೋರಿದ್ದ ಎನ್ನುವ ವಿಷಯವನ್ನು ಉಲ್ಲೇಖಿಸಿದ್ದಾರೆ.

1857: ಗುಂಡುಗಳಲ್ಲಿ ಗೋಮಾಂಸದ ಕೊಬ್ಬನ್ನು ಮಿಶ್ರಣ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ಹಿಂದೂಗಳು ತಿರುಗಿ ಬಿದ್ದಿದ್ದರು.

2024 : ಹಿಂದೂಗಳ ಪರಮಪವಿತ್ರ ಸ್ಥಳ, ತಿರುಪತಿಯ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಮಿಶ್ರಣವಾಗುತ್ತಿದೆ ಎಂದು ಪ್ರಯೋಗಾಲಯದ ಪರೀಕ್ಷೆಗಳು ಸಾಬೀತುಪಡಿಸಿದೆ. ಹಿಂದೂಗಳು ಕಿಂಚಿತ್ತೂ ಬಂಡಾಯವೆದ್ದಿಲ್ಲ. ಹಿಂದೂಗಳ ಕ್ಷಾತ್ರ ತೇಜಸ್ಸು , ಅರಿವು ಕಡಿಮೆಯಾಗಿರುವುದಕ್ಕೆ ಅನ್ಯಕೋಮಿನವರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಯತ್ನಾಳ ಆರೋಪ ಮಾಡಿದ್ದಾರೆ.

ಮುಂದುವರಿದು ಕೇರಳದಲ್ಲಾದ ಭೀಕರ ಪ್ರವಾಹಕ್ಕೆ ಹಿಂದೂ ದೇವಸ್ಥಾನಗಳು ನೀಡಿದ ಪರಿಹಾರ ಮೊತ್ತ ಕೋಟಿಗಳಲ್ಲಿ ಇದೆ. ಕೇರಳದಲ್ಲಿ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಶಬರಿಮಲೆ 10 ಕೋಟಿ ರೂಪಾಯಿ, ತಿರುಪತಿ 5 ಕೋಟಿ ರೂಪಾಯಿ, ಶಿರಡಿ ಸಾಯಿ 5 ಕೋಟಿ ರೂಪಾಯಿ, ಗುರುವಾಯೂರು 5.3 ಕೋಟಿ ರೂಪಾಯಿ, ವೈಷ್ಣೋದೇವಿ 1 ಕೋಟಿ ರೂಪಾಯಿ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 1.25 ಕೋಟಿ ರೂಪಾಯಿ ನೀಡಲಾಗಿದೆ. ಆದರೆ, ಇದರ ಪ್ರತಿಯಾಗಿ ಸರ್ಕಾರ ಮಾಡಿದ್ದೇನು, ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಮಿಶ್ರಣ ಮಾಡುವುದು, ಕಲ್ಲಡ್ಕದ ಶಾಲಾ ಮಕ್ಕಳಿಗೆ ಊಟ ನಿಲ್ಲಿಸಿದ್ದು, ಗಣಪತಿ ವಿಸರ್ಜನೆಯ ಮೆರವಣಿಗೆಗೆ ಕಲ್ಲು, ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದದ್ದು, ಹಿಂದೂಗಳ ಹಬ್ಬಗಳಿಗೆ ಪಾಲಿಸಲಾಗದಂತ ನಿಯಮಾವಳಿಗಳು ಎಂದಿದ್ದಾರೆ. ಅಲ್ಲದೇ ಮತದಾನದ ದಿನದಂದು ಮೈಮರೆಯದಿರಿ ಹಿಂದೂಗಳೇ ಎಂದು ಎಚ್ಚರಿಸಿದ್ದಾರೆ.

ಯತ್ನಾಳ ಮಾಡಿರುವ ಟ್ವೀಟ್‌ಗೆ ವಿರೋಧ

ಬಸನಗೌಡ ಪಾಟೀಲ ಯತ್ನಾಳ ಅವರ ಟ್ವೀಟ್‌ಗೆ ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.

ನೀವೇ ಹೋರಾಟ ರೂಪಿಸಬಾರದೇಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದರೆ, ಇನ್ನೂ ಕೆಲವರು ಗೌಡ್ರೆ ಮೊದ್ಲು ಎಲೆಕ್ಟ್ರೋಲ್ ಬಾಂಡ್ ನೆಪದಲ್ಲಿ ಗೋ ಮಾಂಸ ರಫ್ತು ಮಾಡುವ ಸಂಸ್ಥೆಯಿಂದ ಬಿಜೆಪಿ 14 ಕೋಟಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಕೆಲವರು ಹಿಂದೂಗಳು ಪ್ರತಿಭಟನೆ ಮಾಡಬೇಕು. ಇದು ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+