Get Updates
Get notified of breaking news, exclusive insights, and must-see stories!

Gram Panchayat: ಗ್ರಾಮ ಪಂಚಾಯಿತಿ ನೌಕರರಿಗೆ ವಾರದ ರಜೆ ನಿಗದಿ

ಬೆಂಗಳೂರು, ಏಪ್ರಿಲ್ 7: ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವವರಿಗೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಸಿಹಿಸುದ್ದಿ ನೀಡಿದೆ. ಗ್ರಾಮ ಪಂಚಾಯತಿಗಳ 5 ನೌಕರರ ಸಂಘದ ಮನವಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಹತ್ವದ ತೀರ್ಮಾನವೊಂದನ್ನು ಕೈಗೊಳ್ಳಲಾಗಿದೆ. ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ.

ಈ ಬಗ್ಗೆ ಡಾ. ಅರುಂಧತಿ ಚಂದ್ರಶೇಖರ್, ಆಯುಕ್ತರು. ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ವಾಟರ್ ಆಪರೇಟರ್‌ಗಳಿಗೆ ವಾರದ ರಜೆಯನ್ನು ನಿಗದಿಪಡಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

Weekly Holiday Fixed For Gram Panchayat Employees

ಆದೇಶದ ವಿವರಗಳು: ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ (ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳು) ನಿಯಮಗಳನ್ನು ರಚಿಸಲಾಗಿದ್ದು, ಸದರಿ ನಿಯಮಗಳ ಕ್ರ.ಸಂ.7 (ii) ರಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ರಜೆ ನೀಡುವ ಬಗ್ಗೆ ವಿವರಿಸಲಾಗಿರುತ್ತದೆ.

ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಆಪರೇಟರ್ ಗಳಿಗೆ ವಾರದಲ್ಲಿ ಒಂದು ದಿನ ರಜೆಯನ್ನು ನಿಗದಿಪಡಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಶೀಲಿಸಿದ್ದು, ಆದೇಶದಂತೆ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಆಪರೇಟರ್‌ಗಳಿಗೆ ಷರತ್ತಿಗೊಳಪಟ್ಟು ವಾರದಲ್ಲಿ ಒಂದು ದಿನ ರಜೆಯನ್ನು ನಿಗದಿಪಡಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

* ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ನಿರ್ವಹಣೆಗೆ ಅನಾನುಕೂಲವಾಗದಂತೆ, ಆವರ್ತನ ಮಾದರಿಯಲ್ಲಿ (Rotation basis) ವಾರದ ರಜೆಯನ್ನು ನಿಗದಿಪಡಿಸುವುದು.

* ವಾರದ ರಜೆಯನ್ನು ನೀಡುವ ಸಂದರ್ಭದಲ್ಲಿ ರಜೆ ಪಡೆಯುವ ವಾಟರ್ ಆಪರೇಟರ್ ಅವರು ನಿರ್ವಹಿಸುತ್ತಿದ್ದ ಪ್ರಕಾರ್ಯವನ್ನು ಗ್ರಾಮ ಪಂಚಾಯತಿಯ ಮತ್ತೊಬ್ಬ ವಾಟರ್ ಆಪರೇಟರ್ ಮುಖೇನ ನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು.

* ವಾರದ ರಜೆಯನ್ನು ವಾಟರ್ ಆಪರೇಟರ್‌ಗಳು ಅವರ ಹಕ್ಕು ಎಂದು ಪರಿಗಣಿಸುವಂತಿಲ್ಲ ಹಾಗೂ ವಾರದ ನಿಗದಿತ ರಜೆಯನ್ನು ಪಡೆಯದೆ ಮುಂದಿನ ವಾರಕ್ಕೆ ಹಿಂಬಾಕಿ ಎಂದು ಭಾವಿಸಿ ಸತತವಾಗಿ ರಜೆ ಪಡೆಯಲು ಅವಕಾಶವಿರುವುದಿಲ್ಲ.

* ಪ್ರಕೃತಿ ವಿಕೋಪ, ಸ್ಥಳೀಯ ಜಾತ್ರೆ, ಸಭೆ, ಸಮಾರಂಭಗಳು, ಮತ್ತಿತರ ವಿಶೇಷ ಸಂದರ್ಭಗಳಲ್ಲಿ ವಾರದ ರಜೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸುವಂತಿಲ್ಲ. ಅದಾಗ್ಯೂ, ಇಂತಹ ಸಂದರ್ಭಗಳಲ್ಲಿ ರಜೆ ಮಂಜೂರು ಮಾಡುವುದು ಆಯಾ ಗ್ರಾಮ ಪಂಚಾಯತಿಯ ವಿವೇಚನೆಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.

ಪಂಚಾಯಿತಿ ಸಿಬ್ಬಂದಿ ಬೇಡಿಕೆಗಳು: ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ವಿವಿಧ ವರ್ಗದ ನೌಕರರ ಬೇಡಿಕೆಗಳ ಕುರಿತು ಹಲವು ಬಾರಿ ಚರ್ಚೆಗಳು ನಡೆದಿದ್ದವು. ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 3 ದಶಕಗಳಿಂದ ಯಾವುದೇ ಸೂಕ್ತ ಸ್ಥಾನಮಾನ, ವಿಶೇಷ ಸೌಲಭ್ಯಗಳನ್ನು ನೀಡಿಲ್ಲ ಎಂದು ಆರೋಪಿಸಲಾಗುತ್ತಿತ್ತು.

ಕನಿಷ್ಠ ವೇತನ ನೀಡಿ ಜೀತದಾಳುಗಳಂತೆ ಹಗಲಿರುಳು ದುಡಿಸಿಕೊಳ್ಳಲಾಗುತ್ತಿದೆ. ನೈಸರ್ಗಿಕ ವಿಕೋಪಗಳಂತಹ, ಸಂದರ್ಭದಲ್ಲಿ ಇಲಾಖೆಯ ಕೆಲಸದ ಜೊತೆಗೆ ಹೆಚ್ಚುವರಿಯಾಗಿ ಕೆಲಸವನ್ನು ನಿರ್ವಹಿಸಲು ನೀಡಲಾಗುತ್ತಿದೆ. ಆದರೆ, ಇವರ ಜೀವನಕ್ಕೆ ಯಾವುದೇ ಭದ್ರತೆಯಿಲ್ಲ. ಗ್ರಾಮ ಪಂಚಾಯಿತಿಯು ಇತರೇ ಸರ್ಕಾರಿ ನೌಕರರಂತೆ ದಿನದ 24 ಗಂಟೆಯೂ ಕೆಲಸ ನಿರ್ವಹಿಸುವ ಇವರು ಸರ್ಕಾರಿ ನೌಕರರಲ್ಲ, ಇವರಿಗೆ ಕನಿಷ್ಠ ವೇತನ ನೀಡುವ ಬದಲು ಇವರನ್ನು 'ಸಿ' ಮತ್ತು 'ಡಿ' ದರ್ಜೆಯ ರ್ಸರಿ ನೌಕರರೆಂದು ಪರಿಗಣಿಸಿ, ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಬೇಕಾಗಿದೆ. ಇವರಿಗೆ ಹಾಗೂ ಇವರ ಅವಲಂಬಿತರಿಗೆ ಸರ್ಕರದಿಂದ ಸೂಕ್ತ ಆರೋಗ್ಯ ಭದ್ರತೆ ಸೌಲಭ್ಯ ನೀಡುವ ಅಗತ್ಯತೆಯ ಬಗ್ಗೆ ಹಲವು ಬಾರಿ ಚರ್ಚೆಗಳು ನಡೆದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+