ಪ್ರೇಮಿಗಳ ದಿನಾಚರಣೆಗೆ ಕತ್ತೆಗಳ ಮದುವೆ: ವಿಶೇಷ ಕಾರ್ಯಕ್ರಮ ಹಮ್ಮಿಕೊಂಡ ವಾಟಾಳ್!

ಪ್ರೇಮಿಗಳ ದಿನಾಚರಣೆಯ ನಿಮಿತ್ತ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಪ್ರತೀ ವರ್ಷದಂತೆ ಈ ಬಾರಿ ಪ್ರೇಮಿಗಳ ದಿನಾಚರಣೆಯ ನಿಮಿತ್ತ ವಿಶೇಷ ಕಾರ್ಯಕ್ರಮವನ್ನು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಮ್ಮಿಕೊಂಡಿದ್ದಾರೆ. ವಿಶೇಷ ಪ್ರತಿಭಟನೆಗಳಿಗಾಗಿನೇ ಹೆಸರಾದ ವಾಟಾಳ್ ನಾಗರಾಜ್ ಪ್ರೇಮಿಗಳ ದಿನಾಚರಣೆಯನ್ನೂ ಬಿಟ್ಟಿಲ್ಲ. ಈ ಬಾರಿಯೂ ಕತ್ತೆಗಳ ಮದುವೆ ಮಾಡಿಸಲು ಯೋಜಿಸಿದ್ದಾರೆ.

ಪ್ರೇಮಿಗಳ ದಿನಾಚರಣೆ ಹಿನ್ನಲೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಕತ್ತೆಗಳಿಗೆ ಮದುವೆ ಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಪ್ರೇಮಿಗಳ ವಿವಾಹ ಆಹ್ವಾನ ಪತ್ರಿಕೆಯನ್ನೂ ಅವರು ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಬಾರಿಯಂತೆ, ಕತ್ತೆಗಳನ್ನು ಮೈಸೂರು ಬ್ಯಾಂಕ್ ಬಳಿ ಕರೆತಂದು ಕೆಂಪ ಕತ್ತೆಗೆ ಹಳದಿ, ರಂಗಿ ಕತ್ತೆಗೆ ಬಿಳಿ ವಸ್ತ್ರವನ್ನು ಹಾಕಿ ಮಂಗಳ ವಾದ್ಯಗಳೊಂದಿಗೆ ತಾಳಿ ಕಟ್ಟಿಸಿ, ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಲಿದ್ದಾರೆ.

Wedding of donkeys for Valentines Day: Watal organized a special event!

ನಂತರ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಅಲ್ಲಿ ಪಾಲ್ಗೊಂಡಿದ್ದ ಪ್ರೇಮಿಗಳಿಗೆ ಗುಲಾಬಿ ಹೂ ಕೊಟ್ಟು ಶುಭ ಹಾರೈಸಲಿದ್ದಾರೆ. ಪ್ರೇಮಿಗಳಿಗೆ ರಕ್ಷಣೆ ದೊರೆಯಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಂತಹ ಒಂದು ಕಾನೂನನ್ನು ರಚಿಸಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+