ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲ ಶುರುವಾದರೂ ಬೆಂಗಳೂರಿಗೆ ಬಿಡದ ಮಳೆ ಕಾಟ

|
Google Oneindia Kannada News

ಬೆಂಗಳೂರು, ಡಿಸೆಂಬರ್, 09: ಚಳಿಗಾಲದ ವಾತಾವರಣ ನಿಧಾನವಾಗಿ ಮನೆ ಮಾಡುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ಕಡಿಮೆ ಉಷ್ಣತೆ ಅಂದರೆ 10.6 ಡಿಗ್ರಿ ಮಂಗಳವಾರ ದಾಖಲಾಗಿದೆ.

ಮುಂದಿನ 24 ಗಂಟೆ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಮಳೆ ಕಾಣಿಸಿಕೊಳ್ಳಲಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[ಚೆನ್ನೈ ಮಹಾ ಪ್ರವಾಹಕ್ಕೂ ಜಗ್ಗದ-ಕುಗ್ಗದ ಬಸ್!]

rain

ಬೆಂಗಳೂರು ವಾತಾವರಣ ಹೇಗಿರಲಿದೆ?
ಮೋಡ ಕವಿದ ವಾತಾವರಣವಿದ್ದು ತುಂತುರು ಮಳೆ ಬೀಳುವ ಸಂಭವವಿದೆ. 17 ರಿಂದ 25 ಡಿಗ್ರಿ ಉಷ್ಣತೆ ದಾಖಲಾಗಬಹುದು. ಬುಧವಾರ ಬೆಳಗ್ಗೆ ಸಹ ತುಂತುರು ಮಳೆ ಬಿದ್ದಿದೆ. ಚೆನ್ನೈ ನಲ್ಲಿ ಮತ್ತೆ ಮಳೆ ಕಾಣಿಸಿಕೊಂಡಿದ್ದರೂ ಮೊದಲಿನಷ್ಟು ಪ್ರಭಾವಶಾಲಿಯಾಗಿಲ್ಲ.

ಮುಂದಿನ 48 ಗಂಟೆ ಅವಧಿಯಲ್ಲಿ, ಹವಾಮಾನದಲ್ಲಿ ಅಂಥ ಗಮನಾರ್ಹ ಬದಲಾವಣೆಯಿಲ್ಲ. ದಕ್ಷಿಣ ಒಳನಾಡಿನಲ್ಲಿ ಚೆನ್ನೈ ಹವಾಮಾನ ವೈಪರೀತ್ಯದ ಪರಿಣಾಮ ತುಂತುರು ಮಳೆ ಬೀಳುವ ಸಂಭವಿದೆ.[ಚೆನ್ನೈ ಪ್ರಳಯ, ಪಾಠ ಕಲಿಯುವುದೇ ಬೆಂಗಳೂರು ನಗರಿ!]

ಚೆನ್ನೈನಲ್ಲಿ ಮತ್ತೆ ಮಳೆ
ಚೆನ್ನೈನಲ್ಲಿ ಬುಧವಾರ ಬಳೆಗ್ಗೆ ಮತ್ತೆ ಮಳೆಯಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಚೆನ್ನೈ ಗೆ ಭೇಟಿ ನೀಡಿ ಸಂತ್ರಸ್ತರ ಅಳಲು ಆಲಿಸಿದ್ದರು. ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಒಂದುಗೂಡಿ ಸಾವಿರಾರು ಜನರನ್ನು ಸಂರಕ್ಷಣೆ ಮಾಡಿದ್ದರು.

English summary
Weather report: Dry weather prevailed over the Karnataka. Bagalkote has recorded the lowest minimum temperature of 10.6 degree celsius. Light rain would occur in Bengaluru next 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X