ಕರಾವಳಿ ಭಾಗದಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ

ಬೆಂಗಳೂರು ಜು. 15: ಮುಂದಿನ 24 ಗಂಟೆ ಅವಧಿಯಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆ ಬೀಳಲಿದೆ. ದಕ್ಷಿಣ ಒಳನಾಡು ಭಾಗಗಳು ಸಾಧಾರಣ ಮಳೆ ಪಡೆದುಕೊಳ್ಳಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯಲಿದೆ. ಆದರೆ ಕರ್ನಾಟಕದ ಒಳನಾಡು ಭಾಗದಲ್ಲಿ ನೈರುತ್ಯ ಮಾನ್ಸೂನ್ ಶಕ್ತಿ ಕಳೆದುಕೊಳ್ಳುತ್ತಿದೆ ಎಂದು ಹೇಳಿದೆ.[ತಗ್ಗಿದ ಮಳೆ ಬ್ಬರ, ಶುರುವಾಯ್ತು ಹಾನಿ ಲೆಕ್ಕಾಚಾರ]

rain

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಕೆಲ ಭಾಗಗಳಲ್ಲಿ ತುಂತುರು ಮಳೆಯಾಗಲಿದೆ. ಮಂಗಳವಾರ ಬೆಂಗಳೂರಿನಲ್ಲಿ ಅತ್ಯಧಿಕ ಅಂದರೆ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

ಕೈಕೊಟ್ಟ ಮುಂಗಾರು
ಜೂನ್ ತಿಂಗಳಲ್ಲಿ ಅಬ್ಬರ ತೋರಿಸಿದ್ದ ವರುಣ ನಂತರ ನಾಪತ್ತೆಯಾಗಿದ್ದಾನೆ. ಉತ್ತರ ಕರ್ನಾಟಕದ ಭಾಗ ತೀವ್ರ ಮಳೆ ಕೊರತೆ ಎದುರಿಸುತ್ತಿವೆ. ಇದೇ ರೀತಿ ಮುಂದುವರಿದರೆ ಫಸಲುಗಳೆಲ್ಲ ಕೈ ತಪ್ಪಲಿದ್ದು ಆಹಾರ ಬೆಳೆಗಳ ಉತ್ಪಾದನೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ.[ಮಳೆ ಬಂದ್ರೆ ಬರಲಿ ಬಿಡಿ, ಮುನ್ನೆಚ್ಚರಿಕೆ ಮರೀಬೇಡಿ]

ಕಬ್ಬು ಬೆಳೆಗಾರರು ಬಾಕಿ ಸಿಗದೇ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ ಇತ್ತ ಮಳೆ ಇಲ್ಲದೇ ಕಂಗಾಲಾಗಿರುವ ಉತ್ತರ ಕರ್ನಾಟಕದ ರೈತನ ನೆರವಿಗೆ ಸರ್ಕಾರ ಧಾವಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+