Ram Temple: ನಾವು ರಾಮಮಂದಿರ ಪರ, ಸಂಪೂರ್ಣ ಬೆಂಬಲ ಎಂದ ಸಿದ್ದರಾಮಯ್ಯ
ಬೆಂಗಳೂರು, ಜನವರಿ 01: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣೆ ಆರಂಭವಾಗುತ್ತಿದ್ದಂತೆ ಈ ಬಗ್ಗೆ ಬಹಳಷ್ಟು ಚರ್ಚೆಗಳಾಗುತ್ತವೆ. ರಾಜಕೀಯ ಟೀಕೆಗಳಿಗೆ ಈ ಕಾರ್ಯಕ್ರಮ ಗುರಿಯಾಗುತ್ತಿದೆ. ಇದೀಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಮಂದಿರ ಉದ್ಘಾಟನೆ ಕುರಿತು ಪ್ರತಿಕ್ರಿಸಿದ್ದಾರೆ.
ನಾವು ರಾಮ ಮಂದಿರ ಪರವಾಗಿದ್ದೇವೆ. ನಾವು ರಾಮಮಂದಿರ ವಿಚಾರದಲ್ಲಿ ನಮ್ಮ ವಿರೋಧವಿಲ್ಲ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಜೊತೆಗೆ ಬಿಜೆಪಿ ಸರ್ಕಾರ ರಾಮಮಂದಿರ ವಿಚಾರದಲ್ಲಿ ಏನು ಮಾಡುತ್ತಿದೆ ಅಂತಲೂ ಅವರು ತಿಳಿಸಿದ್ದಾರೆ.

ನಾವು ರಾಮಮಂದಿರ ಪರ
ರಾಮ ಮಂದಿರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ಅದನ್ನು ವಿರೋಧಿಸುತ್ತಿಲ್ಲ. ರಾಮ ಮಂದಿರದ ಪರವಾಗಿದ್ದೇವೆ. ಕೇಂದ್ರ ಸರ್ಕಾರವೇ ಲೋಕಸಭಾ ಚುನಾವಣೆಯಲ್ಲಿ ಮತಗಳಿಸಲು ರಾಮ ಮಂದಿರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ರಾಮಮಂದಿರ ಉದ್ಘಾಟನೆ ಒಂದು ಸ್ಟಂಟ್ ಅಷ್ಟೇ. ಲೋಕಸಭಾ ಚುನಾವಣೆಯಲ್ಲಿ ಮತ ಗಳಿಸಲು ದೇವಸ್ಥಾನ ಉದ್ಘಾಟನೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಇದಕ್ಕು ಮೊದಲು ಸಿದ್ದರಾಮಯ್ಯ ಸಚಿವ ಸಂಪುಟದ ಸದಸ್ಯರಾದ ಸಚಿವ ಡಿ.ಸುಧಾಕರ್ ರಾಮಮಂದಿರ ಉದ್ಘಾಟನೆ ಸಂಬಂಧ ಕೇಂದ್ರ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದರು.
ಇತ್ತೀಚೆಗೆ ಸುದ್ದಿಗಾರ ಜತೆ ಮಾತನಾಡಿದ್ದ ಸಚಿವ ಡಿ.ಸುಧಾಕರ್ ಅವರು, ರಾಮಮಂದಿರ ಉದ್ಘಾಟನೆ ಚುನಾವಣೆ ಗಿಮಿಕ್. ಈ ಹಿಂದೆ ಎಲ್ಲಿತ್ತು ರಾಮಮಂದಿರಾ, ಆಗೆಲ್ಲ ಪುಲ್ವಾಮಾ ಘಟನೆಯನ್ನು ಹೇಳಿದ್ದರು. ಅದ್ಯಾವುದೋ ವಿಮಾನ ತೋರಿಸಿದ್ದರು. ಆಗ ಪಾಪ ದೇಶ ಕಾಯುವ ಎಷ್ಟು ಮಂದಿ ಹುತಾತ್ಮರಾದರು. ಜನರು ನಂಬಿದರೂ ಎಂದು ಕಿಡಿ ಕಾರಿದ್ದಾರೆ. ಅದರ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಅವರು ತಾವು ರಾಮಮಂದಿರ ಪರ ಎಂದು ಹೇಳಿಕೆ ನೀಡಿದ್ದಾರೆ.
ಚರ್ಚೆಗೆ ಗ್ರಾಸವಾದ ರಾಮಮಂದಿರ ಉದ್ಘಾಟನೆ
ಒಂದು ಕಡೆ ಅಯೋಧ್ಯೆ ದೇವಸ್ಥಾನ ಲೋಕಾರ್ಪಣೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳ ಕೇಳಿ ಬರುತ್ತಿವೆ. ಇತ್ತ ಅದನ್ನು ವಿರೋಧಿಸಲು ಆಗದೇ, ಒಪ್ಪಿಕೊಳ್ಳಲು ಆಗದೇ ಕೇಂದ್ರ ವಿಪಕ್ಷಗಳು, ಕೆಲವು ನಾಯಕರು ಪೇಚಿಗೆ ಸಿಲುಕಿದ್ದಾರೆ. ರಾಮಮಂದಿರದ ಪರ ಎಂದರೆ ನಿರ್ದಿಷ್ಟ ಓಟ್ ಬ್ಯಾಂಕ್ ಮೇಲೆ ಪರಿಣಾಮ ಭೀರುತದೆ ಎಂಬ ಆತಂಕವು ಕೆಲವರಲ್ಲಿ ಮನೆ ಮಾಡಿದೆ. ಒಟ್ಟಾರೆ ರಾಮಮಂದಿರದ ಉದ್ಘಾಟನೆ ರಾಜಕೀಯದಲ್ಲಿ ಒಂದು ಭಾರಿ ಚರ್ಚೆ ಹುಟ್ಟು ಹಾಕಿದೆ. ಇನ್ನೂ ಕೆಲವು ನಾಯಕು ಈ ಬಗ್ಗೆ ಪ್ರತಿಕ್ರಿಯಿಸದೇ ಕಾದು ನೋಡುತ್ತಿದ್ದಾರೆ.











Click it and Unblock the Notifications