ನನ್ನದು ದೇವೇಗೌಡರ ಕುಟುಂಬದ ರಕ್ತ; 23 ಕ್ಕೆ ಹಬ್ಬ ಮಾಡುತ್ತೇವೆ ಎಂದ ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣ, ನವೆಂಬರ್ 02: ಇದು ನನಗೆ ಅನಿರೀಕ್ಷಿತ ಚುನಾವಣೆ. ಕುಮಾರಣ್ಣರ ಕೆಲಸ ಕಾರ್ಯ ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನದು ದೇವೇಗೌಡರ ಕುಟುಂಬದ ರಕ್ತ, ಈ ಕ್ಷೇತ್ರದ ಜನತೆಗೂ ನಮಗೂ ಅವಿನಾಭಾವ ಸಂಬಂಧ ಇದೆ. ನಾನು ಯಾವ ಹಳ್ಳಿಯ ಜನರನ್ನ ಮರೆಯುವಂತವನಲ್ಲ ಎಂದು ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಚನ್ನಪಟ್ಟಣದಲ್ಲಿ ಶನಿವಾರ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರುಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಚನ್ನಪಟ್ಟಣ ತಾಲ್ಲೂಕಿನ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು ಕೊಡ್ತೇನೆ. ಹಿಂದುಳಿದ ಸಮುದಾಯಗಳಿಗೆ ಧ್ವನಿಯಾಗುತ್ತೇನೆ. ನಾನು ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ ಎರಡು ಚುನಾವಣೆಯಲ್ಲಿ ಪೆಟ್ಟು ತಿಂದಿದ್ದೇನೆ. ದಯಮಾಡಿ ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ನಿಮಗೆ ದ್ರೋಹ ಬಗೆಯುವ ಕೆಲಸವನ್ನ ನಾನೆಂದೂ ಮಾಡಲ್ಲ. ನಾವು 23 ಕ್ಕೆ ಹಬ್ಬ ಮಾಡ್ತೇವೆ. ಇವಾಗ ಚುನಾವಣೆ ಮುಖ್ಯ ಅಂತಾ ಜನ ಹೇಳುತ್ತಿದ್ದಾರೆ. ಇದೇ ನನಗೆ ಶ್ರೀರಕ್ಷೆ. ಹೀಗಾಗಿ ಹಬ್ಬದ ನಡುವೆಯೂ ಪ್ರಚಾರದಲ್ಲಿ ನನ್ನ ಜತೆ ಹೆಜ್ಜೆ ಹಾಕ್ತಿದ್ದರೆ. ನಮ್ಮ ಮತ್ತು ಜಿಲ್ಲೆಯ ಸಂಬಂಧ ಭಾವನಾತ್ಮಕ ಸಂಬಂಧ ಇದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಜನರ ಉತ್ಸಾಹ ಕುಗ್ಗದ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಕಣ್ಣೀರು ಎಷ್ಟೇ ತಡೆದರು ಮೊನ್ನೆ ಉದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದೆ. ಎರಡು ಚುನಾವಣೆಯಲ್ಲೂ ಜನ ನನಗೆ ಆಶೀರ್ವಾದ ಮಾಡುತ್ತಿದ್ದಾರೆ. ಆದರೂ ಗೆಲ್ಲಲು ಆಗದಿರಬಹುದು. ಈ ಬಾರಿ ಜನ ಆಶೀರ್ವಾದ ನನಗೆ ಮಾಡ್ತಾರೆ ಅನ್ನೋ ವಿಶ್ವಾಸ ಇದೆ. ಚನ್ನಪಟ್ಟಣ ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ, ಗೆಲ್ಲಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ 200ಕ್ಕೂ ಹೆಚ್ಚು ಹಳ್ಳಿಗಳಿವೆ. ನಿತ್ಯವೂ ಇಪತ್ತು ಹಳ್ಳಿಗಳಲ್ಲಿ ಸಂಚಾರ ಮಾಡ್ತಿದ್ದೀವಿ. ಕ್ಷೇತ್ರದ ಮತದಾರರು ಈ ಬಾರಿ ನನ್ನನ್ನ ಗೆಲ್ಲಿಸ್ತಾರೆ ಅನ್ನೋ ವಿಶ್ವಾಸ ಇದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು. ದೀಪಾವಳಿ ಹಬ್ಬ ಇದ್ದರು ಸಹ ಎರಡು ಪಕ್ಷದ, ಮುಖಂಡರು, ಕಾರ್ಯಕರ್ತರು ಪ್ರಚಾರ ಮಾಡ್ತಿದ್ದಾರೆ. ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ಈ ಬಾರಿ ಜನ ನನಗೆ ಬೆಂಬಲ ನೀಡುವ ವಿಶ್ವಾಸ ಇದೆ ಎಂದು ತಿಳಿಸಿದರು.
ಕಣ್ಣೀರಿನ ಬಗ್ಗೆ ಕಾಂಗ್ರೆಸ್ ನಾಯಕರ ವ್ಯಂಗ್ಯ ವಿಚಾರಕ್ಕೆ ಮಾತನಾಡಿ ಅವರು, ರಾಮನಗರ ಜಿಲ್ಲೆಯ ಜನತೆ ಜೊತೆ ಅವಿನಾಭಾವ ಸಂಬಂಧ ಇದೆ. ನಾವು ಮಾಡಿರೋ ಅಭಿವೃದ್ಧಿ ವಿಚಾರ ಮನವರಿಕೆ ಮಾಡಿ ಮತ ಕೇಳ್ತಿದ್ದೇವೆ. ನಾನು ಉದ್ದೇಶ ಪೂರ್ವಕವಾಗಿ ಮತಗಿಟ್ಟಿಸಲು ಕಣ್ಣೀರು ಹಾಕಿಲ್ಲ. ನನ್ನ ನೋವನ್ನ ಜನರ ಬಳಿ ಹೇಳಿಕೊಳ್ಳುವಾಗ ಕಣ್ಣೀರು ಹಾಕಿದ್ದೇನೆ. ಇದರಲ್ಲಿ ಬೆರೆ ಯಾವುದೇ ಬೇರೆ ಉದ್ದೇಶ ಇಲ್ಲ ಎಂದು ತಿಳಿಸಿದರು.
ಇಂದಿನ ನಿಖಿಲ್ ಪರಿಸ್ಥಿತಿಗೆ ಅವರ ತಂದೆ-ತಾಯಿ ಕಾರಣ ಎಂಬ ಡಿ.ಕೆ.ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ನನ್ನ ಪರಿಸ್ಥಿತಿಗೆ 2019 ರ ಚುನಾವಣೆಯಲ್ಲಿ ಯಾರು ಕಾರಣ ಅಂತ ಇಡೀ ರಾಜ್ಯಕ್ಕೆ ಗೊತ್ತು. ಮೈತ್ರಿ ಧರ್ಮ ಪಾಲನೆ ಮಾಡದೇ ಸೋಲಿಸಿದ್ದು ಯಾರು ಅಂತ ಪ್ರತಿಯೊಬ್ಬರಿಗೂ ಗೊತ್ತು. ಅವರೇ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ನನ್ನ ಸೋಲಿಗೆ ಯಾರೂ ಕಾರಣ ಅಲ್ಲ. ಮಂಡ್ಯ ಜನ, ರಾಮನಗರ ಜನ ಪ್ರೀತಿ ಕೊಟ್ಟಿದ್ದಾರೆ. ಕಾಂಗ್ರೆಸ್ ನವರು ಏನೇನು ಮಾತನಾಡ್ತಿದ್ದಾರೆ ಅದಕ್ಕೆ ಜನ ಉತ್ತರ ಕೊಡ್ತಾರೆ ಎಂದು ತಿಳಿಸಿದರು.












Click it and Unblock the Notifications