'ರಾಮ ಮಂದಿರ ಪ್ರಾರಂಭ ಮಾಡಿದವರೇ ನಾವು ರೀ' : ಸಚಿವರು ಹೇಳಿದ್ದೇನು?
ಹುಬ್ಬಳ್ಳಿ, ಜನವರಿ 06: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾರಂಭ ಮಾಡಿದವರೇ ನಾವೇ. ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲ ಹಾಕಿದವರೇ ನಮ್ಮ ನಾಯಕರಾದ ರಾಜೀವ ಗಾಂಧಿ ಅಡಿಗಲ್ಲು ಹಾಕಿದವರು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಈ ಕುರಿತು ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾವು ಕೂಡ ರಾಮ ಭಕ್ತರಿದ್ದೇವೆ ಅವರ ಅಷ್ಟೇ ಅಲ್ಲಾ ಎನ್ನುವ ಮೂಲಕ ಭಾರತೀಯ ಜನತಾ ವಿರುದ್ಧ ವಾಗ್ದಾಳಿ ನಡೆಸಿದರು.

ಶ್ರೀಕಾಂತ ಪೂಜಾರಿ ಬಂಧನ ಎಂಪಿ ಚುನಾವಣೆ ಬಿಜೆಪಿ ಅಜೆಂಡ ವಿಚಾರವಾಗಿ ಮಾತನಾಡಿ, ಬಿಜೆಪಿ ಅವರಿಗೆ ಅಂತಹದ್ದನ್ನ ಬಿಟ್ರೆ ಏನು ಅಜೆಂಡ ಮಾಡ್ಕೋತಾರೆ? 36 ಜನರಲ್ಲಿ ಇವರೋಬ್ರೇನಾ ಹಿಂದು ಇರೋದು. ಇನ್ನು 20 ಕೇಸ್ ಗಳಿವೆ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳಬೇಕು. ಅವಾಗ ಆಗಿರುವ ಘಟನೆಗೆ ಪ್ರಕರಣ ಇರ್ತಾವೆ. ಅವರಿಗೂ ಕೂಡ ಈ ಪ್ರಶ್ನೆ ಕೇಳಿ ನೀವು, ರಾಮ ಮಂದಿರ ಪ್ರಾರಂಭ ಮಾಡಿದವರೇ ನಾವು ರೀ. ಕಳೆದ 40 ವರ್ಷದಿಂದ ಇಟ್ಟಂಗಿ ಕೊಟ್ಟವಲ್ಲ ಎಲ್ಲಿವೆ? ಎಂದು ಪ್ರಶ್ನಿಸಿದರು.
ನಾವು ಕೂಡ ರಾಮ ಭಕ್ತರಿದ್ದೇವೆ. ಎಲ್ಲರಿಗೂ ಸಮ ಬಾಳು, ಎಲ್ಲರಿಗೂ ಸಮ ಪಾಲು ಅಂತಾ ಬದುಕ್ತಾ ಇದ್ದಿವಿ, ಅವರು ಹಿಂದುಗಳ ಬಗ್ಗೆ ಮಾತನಾಡ್ತಾರೆ. ಕಳೆದ 10 ವರ್ಷದಿಂದ ಹಿಂದುಗಳಿಗೆ ಏನು ಅನುಕೂಲ ಆಗಿದೆ. ನಾನು ಹಿಂದು, ನೀವು ಕೂಡ ಹಿಂದು ತಾನೇ ನಿಮಗೆ ಏನು ಅನುಕೂಲ ಆಗಿದೆ, ಬಿಜೆಪಿ ಪಕ್ಷದವರಿಗೆ, ಕೆಲವು ಉದ್ಯಮಿದಾರರಿಗೆ ಅನುಕೂಲ ಆಗಿದೆ. ಅದನ್ನು ಬಿಟ್ರೆ ಯಾರಿಗೂ ಅನುಕೂಲ ಆಗಿಲ್ಲ. ಹಿಂದು ರಾಷ್ಟ್ರ ಮಾಡ್ತೇವೆ ಅಂತಾರಲ್ಲ, ಯಾವ ಹಿಂದುಗಳಿಗೆ ಅನುಕೂಲ ಆಗಿದೆ ಹೇಳಿ ಎಂದು ಸಚಿವ ಸಂತೋಷ್ ಲಾಡ್ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications