ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಟಕು ನೀರಿಲ್ಲದ ರಾಯಚೂರಿನಲ್ಲಿ ಖಾಲಿ ಕೊಡಗಳ ಪ್ರದರ್ಶನ

By ಜಯಕುಮಾರ್ ದೇಸಾಯಿ, ರಾಯಚೂರು
|
Google Oneindia Kannada News

ರಾಯಚೂರು,ಮಾರ್ಚ್,17: ಕುಡಿಯುವ ನೀರಿನ ಸಮಸ್ಯೆ ನೀಗಿಸುವ ವಿಷಯವಾಗಿ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಹರೀಶ ನಾಡಗೌಡ ಖಾಲಿ ಕೊಡ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಉದ್ಯಾನವನದಲ್ಲಿ ನಗರಸಭೆ ಆಯವ್ಯಯ ಮಂಡನೆಯ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಗೌಡ ಅವರು, 'ಕುಡಿಯುವ ನೀರಿನ ಬವಣೆ ಎದುರಿಸುತ್ತಿರುವ ಜನರಿಗೆ ಸ್ಪಂದಿಸದ ನಗರಸಭೆ ಪೌರಾಯುಕ್ತರಿಗೆ ಸನ್ಮಾನ ಮಾಡುವುದು ಎಷ್ಟು ಉಚಿತ?' ಅಲ್ಲದೇ ಕುಡಿಯುವ ನೀರಿಗಾಗಿ ನೇತಾಜಿ ನಗರದಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದನ್ನು ಸಭೆಯಲ್ಲಿ ಖಂಡಿಸಿದರು.[ಏರಿದ ಬಿಸಿಲ ಧಗೆ, ಮಡಿಕೆ ವ್ಯಾಪಾರ ಬಲು ಜೋರು]

Water scarcity in Raichur : Corporators clash at budget session

ನಗರ ಸಭೆಯು ತಮ್ಮ ಉಳಿತಾಯ ಬಜೆಟ್ ಸಭೆಯನ್ನು ಏರ್ಪಡಿಸಿತ್ತು. ಆ ಸಂದರ್ಭದಲ್ಲಿ ನಗರದ ಜನರನ್ನು ಸಂಕಷ್ಟಕ್ಕೆ ತಳ್ಳಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನಗರಸಭೆ ವಿಫಲವಾಗಿದೆ ಎಂದು ವಿರೋಧ ಪಕ್ಷದ ಕೆಲ ಸದಸ್ಯರು ತೀವ್ರ ಕೋಲಾಹಲ ಎಬ್ಬಿಸಿದರು. ಇದರ ನಡುವೆಯೂ ನಗರಸಭೆಯ 2016-17 ನೇ ಸಾಲಿನ 6.89 ಲಕ್ಷ ಉಳಿತಾಯ ಬಜೆಟ್ ಮಂಡನೆಯಾಯಿತು.[ಸಿದ್ದರಾಮಯ್ಯ ಬಜೆಟ್‌ ಬಗ್ಗೆ ನಿರೀಕ್ಷೆಗಳೇನು?]

ನಗರಸಭೆ ಆಯವ್ಯಯ ಮಂಡನೆ ಸಾಮಾನ್ಯ ಸಭೆ ಪ್ರಾರಂಭಕ್ಕೂ ಮುನ್ನ ಡಾಕ್ಟರೇಟ್ ಪದವಿ ಪಡೆದ ನಗರಸಭೆ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ ಅವರನ್ನು ಹಿರಿಯ ಸದಸ್ಯ ಎ. ಮಾರೆಪ್ಪ ನಗರಸಭೆ ವತಿಯಿಂದ ಸನ್ಮಾನಿಸಲು ಮುಂದಾದರು.[ಬಂಗಾರಪೇಟೆಯ 4 ಗ್ರಾಮಗಳಿಗೆ ನೀರಿನ ತಲೆಬಿಸಿ ಇಲ್ಲ]

Water scarcity in Raichur : Corporators clash at budget session

ಆ ಸಂದರ್ಭದಲ್ಲಿ ಸದಸ್ಯ ಹರೀಶ ನಾಡಗೌಡ ಖಾಲಿ ಕೊಡಗಳ ಜೊತೆ ಬಡಾವಣೆ ನಿವಾಸಿಗಳೊಂದಿಗೆ ಆಗಮಿಸಿ ಕುಡಿಯುವ ನೀರಿಗಾಗಿ ನೇತಾಜಿ ನಗರದಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದನ್ನು ಪ್ರಸ್ತಾಪಿಸಿದರು. ಕುಡಿಯುವ ನೀರಿಲ್ಲದೆ ಜನ ತತ್ತರಿಸುತ್ತಿರುವುದನ್ನು ವಿವರಿಸಿದರು.[ತೀವ್ರಗೊಂಡ ಕಳಸಾ ಹೋರಾಟ : ಹುಬ್ಬಳ್ಳಿಯಲ್ಲಿ ರೈಲು ಬಂದ್]

ಆ ಸಂದರ್ಭದಲ್ಲಿ ಸದಸ್ಯರ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪ ನಡೆದಿದ್ದು, ಈ ಕೋಲಾಹಲ ನಗರ ಸಭೆ ಉಳತಾಯ ಬಜೆಟ್ ಮಂಡನೆಯಾಗುವವರೆಗೂ ಮುಂದುವರೆಯಿತು. ಇದು ನಗರ ಜನತೆಯ ಅಸಮಾಧಾನಕ್ಕೆ ಕಾರಣವಾಯಿತು.

English summary
Raichur is facing huge water scarcity during this summer. During budget session members of coporation exhibited empty pots to showcase the water problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X