ವಕ್ಫ್ ಬೋರ್ಡ್ ಬೊಮ್ಮಾಯಿ ವಿಡಿಯೋ, 40% ಕಮಿಷನ್: ಬೊಮ್ಮಾಯಿ ಹೇಳಿದ್ದೇನು ?
ಕರ್ನಾಟಕದಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಹೇಗಾದರೂ ಕಟ್ಟಿ ಹಾಕಬೇಕು ಎಂದು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಗೆ ಸಿಕ್ಕಿರುವ ಹೊಸ ಅಸ್ತ್ರವೇ ವಕ್ಫ್ ಬೋರ್ಡ್ ವಿವಾದ. ಈ ವಿವಾದವನ್ನು ಸಮರ್ಪಕವಾಗಿಯೇ ಬಳಿಸಿಕೊಂಡು ಕಾಂಗ್ರೆಸ್‌ಗೆ ಬಿಜೆಪಿ ಚಾಟಿ ಬೀಸುತ್ತಿದೆ. ಬಿಜೆಪಿಯಲ್ಲೂ ಭಿನ್ನಾಭಿಪ್ರಾಯಗಳಿವೆ. ಆದರೆ, ಈ ವಿಷಯದಲ್ಲಿ ಬಿಜೆಪಿ ನಾಯಕರು ಒಂದಾಗಿದ್ದಾರೆ.
ಇನ್ನು ಕರ್ನಾಟಕ ಕಾಂಗ್ರೆಸ್ ಸಹ ಬಿಜೆಪಿ ಹಾಗೂ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಚಾಟಿ ಬೀಸುವುದನ್ನು ಮುಂದುವರಿಸಿದೆ. ಇದೀಗ ಉಪ ಚುನಾವಣೆ ಸಮಯದಲ್ಲಿ ಹಾಗೂ ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಹೇಗಾದರೂ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎನ್ನುವ ಪಣ ತೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಕರ್ನಾಟಕದ PayCM ಖ್ಯಾತಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನೀವೇ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಮಾಣಪ್ಪಡಿ ವರದಿ ಏತಕ್ಕೆ ಮೂಲೆ ಸೇರಿತ್ತು. 40 ಪರ್ಸೆಂಟ್ ಕಮಿಷನ್ ನೀಡಲಿಲ್ಲ ಎಂಬ ಕಾರಣಕ್ಕಾ. ಇಲ್ಲ ನಿಮ್ಮ ಅವಧಿಯ ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ನಾಯಕರ ಪಾಲು ಎಷ್ಟು. ಯತ್ನಾಳ್ ಆರೋಪದಂತೆ ಮುಖ್ಯಮಂತ್ರಿ ಹುದ್ದೆಗೆ ನೀವು ಪಾವತಿ ಮಾಡಿದ ಹಣ ಎಷ್ಟು ಎಂದೆಲ್ಲ ಪ್ರಶ್ನೆ ಮಾಡಿದೆ.
ಅವಕಾಶವಾದಿ ರಾಜಕಾರಣಕ್ಕಾಗಿ ಹೇಳಿಕೆ ಕೊಡುವುದನ್ನು ನಿಲ್ಲಿಸಿ. ನಿಮ್ಮ ಮಗನನ್ನ ಶಿಗ್ಗಾವಿ ಜನ ತಿರಸ್ಕಾರ ಮಾಡಲು ತೀರ್ಮಾನಿಸಿದ್ದಾರೆ. ಇಂತಹ ಹೇಳಿಕೆಗಳಿಂದ ನೀವು, ನಿಮ್ಮ ಮಗ ದಡ ಸೇರುವುದು ಖಂಡಿತ ಸಾಧ್ಯವಿಲ್ಲ. ಬಿಜೆಪಿಯನ್ನು ಜನ ತಿರಸ್ಕಾರ ಮಾಡಿ ಆಗಿದೆ ನಿಮಗೆ ಆತ್ಮ ಸಾಕ್ಷಿ ಇದ್ದರೆ ಮೊದಲು ಕರ್ನಾಟಕದ ದೊಡ್ಡ ಹಗರಣ ಬಿಟ್ ಕಾಯಿನ್ ಕುರಿತು ನ್ಯಾಯಾಂಗ ತನಿಖೆಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ.
ವಕ್ಪ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿ ಮೇಲೆ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ತಕ್ಷಣ ಎಸ್ ಐಟಿ ಅಥವಾ ಸಿಬಿಐ ತನಿಖೆ ಮಾಡಬೇಕೆಂದು ಆಗ್ರಹಿಸಿತ್ತೇನೆ @CMofKarnataka @siddaramaiah
— Basavaraj S Bommai (@BSBommai) November 3, 2024
ವಿನಾಕಾರಣ ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನ ಮಾಡಬೇಡಿ, ನಿಮಗೆ ನೀವೇ ಆತ್ಮ ವಂಚನೆ ಮಾಡಿಕೊಳ್ಳಬೇಡಿ. ವಕ್ಫ್ ಕುರಿತು ನಿಮ್ಮ ಹೇಳಿಕೆಯಿಂದ ನುಣುಚಿಕೊಳ್ಳಲು ಇಂತಹ ಬುಡವಿಲ್ಲದ ಹೇಳಿಕೆಗಳಿಗೆ ಶರಣಾಗಬೇಡಿ ಎಂದಿದೆ.
ವಕ್ಫ್ ಬೋರ್ಡ್ ಹೇಳಿಕೆ: ಬಸವರಾಜ ಬೊಮ್ಮಾಯಿ ಹೇಳಿದ್ದೇನು ?
ವಕ್ಫ್ ಬೋರ್ಡ್‌ಗೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ಅವರದ್ದು ಎಂದು ಹೇಳಲಾಗಿರುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ.
ವಕ್ಫ್ ಸಚಿವ ಜಮೀರ್ ಅಹ್ಮದ್‌ಖಾನ್ ಅವರು ನಾನು ವಕ್ಫ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೊ ಹರಿಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ವಕ್ಫ್ ಬೋರ್ಡ್ ಸಭೆ ಮಾಡಿಲ್ಲ. ವಕ್ಫ್ ಬೋರ್ಡ್ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಫ್ ಆಸ್ತಿ ಕಬಳಿಸಿರುವ ಕರ್ನಾಟಕ ಕಾಂಗ್ರೆಸ್ ನಾಯಕರಿಂದ ವಕ್ಫ್ ಆಸ್ತಿ ವಶಪಡಿಸಿಕೊಳ್ಳಬೇಕು ಎಂದಿದ್ದ ಹೇಳಿರುವುದನ್ನು ತಿರುಚಿದ್ದಾರೆ. ಆ ಸಂದರ್ಭದಲ್ಲಿ ರೈತರ ಜಮೀನಿಗೆ ನೋಟಿಸ್ ಕೊಡುವುದಾಗಲಿ, ಪಹಣಿ ತಿದ್ದುಪಡಿ ಮಾಡುವುದಾಗಲಿ ಯಾವೂದೂ ವಿಷಯ ನಮ್ಮ ಮುಂದೆ ಪ್ರಸ್ತಾಪವಾಗಿರಲಿಲ್ಲ ಎಂದಿದ್ದಾರೆ.
ನಾನು ಆಗ ಹೇಳಿದ್ದು ಅನ್ವರ್ ಮಾನಿಪ್ಪಾಡಿ ಅವರ ಸಮಿತಿ ವರದಿಯಂತೆ ಕಾಂಗ್ರೆಸ್‌ನ ಕೆಲವು ದೊಡ್ಡ ನಾಯಕರು ಮೋಸದಿಂದ ಎಷ್ಟೆಷ್ಟು ವಕ್ಫ್ ಆಸ್ತಿ ನುಂಗಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕು. ಅಲ್ಲದೇ ನಾವು ರೈತರಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ರೈತರ ಜಮೀನು ವಶ ಪಡೆದುಕೊಂಡಿಲ್ಲ. ಸಚಿವ ಜಮೀರ್ ಅವರು ರೈತರಿಗೆ ನೋಟಿಸ್ ಕೊಡುವ ಮೊದಲು ಕಾಂಗ್ರೆಸ್ ನಾಯಕರು ಎಲ್ಲೆಲ್ಲಿ ವಕ್ಫ್ ಆಸ್ತಿ ಹಡಪ್ ಮಾಡಿದ್ದಾರೆ ಅದನ್ನು ಕೂಡಲೇ ರಿಕವರಿ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications