ಭಾಗಮಂಡಲದ ಭುವನೇಂದ್ರ ವೃಕ್ಷ ವಾಟಿಕೆಗೊಮ್ಮೆ ಭೇಟಿ ಕೊಡಿ

By: ಮಂಜು ನಿರೇಶ್ವಾಲ್ಯ
Subscribe to Oneindia Kannada

ಮಂಗಳೂರು, ಜೂ 20: ಕಾಶೀಮಠ ಸಂಸ್ಥಾನದ ಆರಾಧ್ಯ ದೇವರುಗಳಾದ ವ್ಯಾಸ ರಘುಪತಿ ನರಸಿಂಹ ದೇವರ ಸಿಂಹಾಸನಾರೋಹಣ ಕಾರ್ಯಕ್ರಮ ನಡೆದು ಐದು ವರ್ಷ ಸಂದ ಸಂದರ್ಭದಲ್ಲಿ ಕಾಶೀಮಠ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾಶೀ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಭಾಗಮಂಡಲದಲ್ಲಿರುವ ಭುವನೇಂದ್ರ ವೃಕ್ಷ ವಾಟಿಕೆಯಲ್ಲಿ ಸುಮಾರು 400ಕ್ಕೂ ಅಧಿಕ ವಿವಿಧ ಅಳಿವಿನಂಚಿರುವ ಔಷಧಿಯ ಗಿಡ ಮರಗಳನ್ನು ನೆಡುವ ಮೂಲಕ ಕಾಶೀಮಠ ಗಿಡಮರಗಳ ಮಹತ್ವ ಸಾರುವ ಕೆಲಸವನ್ನು ಮಾಡಿದೆ.

baga


ಸುಧೀಂದ್ರ ತೀರ್ಥ ಸ್ವಾಮೀಜಿಯವರ ಬಹು ಕಾಲದ ಕನಸಾಗಿದ್ದ ಈ ಯೋಜನೆಯನ್ನು, ಕೊಡಗಿನ ಪ್ರಕೃತಿ ರಮಣೀಯ ತಾಣ, ಕರ್ನಾಟಕದ ಜೀವನದಿ ಕಾವೇರಿ ಉಗಮಿಸುವ ಭಾಗಮಂಡಲದಲ್ಲಿ ಆಯೋಜಿಸಲಾಗಿತ್ತು.
ಹಾಲೀ ಮಠದ ಪೀಠಾಧಿಪತಿಗಳಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಗುರುಗಳು, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸ್ವರೂಪೂದ್ದಾರಕರಾದ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಬಹು ಕಾಲದ ಕನಸು 'ಶ್ರೀ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕ' ಯೋಜನೆ ಸಾಕಾರ ಮಾಡುವತ್ತ ಸುಂದರ ಹಾಗೂ ಕ್ರಮಬದ್ಧವಾದ ಯೋಜನೆಯನ್ನು ಈ ಮೂಲಕ ಕಾರ್ಯಗತಗೊಳಿಸಿದ್ದಾರೆ.
ಈ ಯೋಜನೆಯ ಸಂಪೂರ್ಣ ಉಸ್ತುವಾರಿಯನ್ನು ಹಾಲೀ ಮಠಾಧೀಶರು ವಹಿಸಿಕೊಂಡಿದ್ದಾರೆ. ಈ ವೃಕ್ಷ ವಾಟಿಕದಲ್ಲಿ 400ಕ್ಕೂ ಅಧಿಕ ವಿವಿಧ ಅಳಿವಿನಂಚಿರುವ ಔಷಧಿಯ ಗಿಡ ಮರ ಹಾಗೂ ಆಯುರ್ವೇದದಲ್ಲಿ ಉಲ್ಲೇಖಗೊಂಡಿರುವ ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಸಸ್ಯಗಳನ್ನು ನೆಟ್ಟು ಶ್ರೀ ಸಂಸ್ಥಾನದ ವತಿಯಿಂದ ಸಂರಕ್ಷಣೆಯನ್ನು ಮಾಡಲಾಗುತ್ತಿದೆ.
ಭವಿಷ್ಯದಲ್ಲಿ ಈ ಸುಂದರ ಆಯುರ್ವೇದ ವೃಕ್ಷ ವಾಟಿಕೆಯು ಭಾರತದ ಅತೀ ದೊಡ್ಡ ಧಾರ್ಮಿಕ, ಅಮೂಲ್ಯ ಹಾಗೂ ಅತೀ ಸುಂದರವಾದ ಆಯುರ್ವೇದ ಸಸ್ಯಕಾಶಿಯಾಗಿ ನಿರ್ಮಾಣಗೊಂಡು ಈ ಸಸ್ಯ ಸೇವೆಯಿಂದ ಪ್ರಸನ್ನಗೊಂಡು ಆಯುರ್ವೇದದ ಅಭಿಮಾನಿ ರೂಪ ಶ್ರೀ ವೇದವ್ಯಾಸ ಅಭಿನ್ನ ಶ್ರೀ ಧನ್ವಂತರಿ ದೇವರು ಪೂರ್ಣ ಪ್ರಮಾಣದಲ್ಲಿ ನೆಲಸುವ ಬಗ್ಗೆ ಯಾವುದೇ ಸಂಶಯವಿಲ್ಲ ಎನ್ನುವುದು ಮಠದ ವಿಶ್ವಾಸದ ಮಾತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Visit Bhuvanendra Vruksha Vatika at Bhagamandala in Kodagu district (Karnataka) for differrent Ayurvedic plants. Kashi Mutt planted nearly 400+ plants in Vruksha Vatika.
Please Wait while comments are loading...