ವೈರಲ್ ವಿಡಿಯೋ: ಪ್ರಕಾಶ್ ರೈ ವಿರುದ್ಧ ಕಾಳಿ ಸ್ವಾಮಿ ರೌದ್ರಾವತಾರ

Recommended Video

      ಪ್ರಕಾಶ್ ರೈ ( ರಾಜ್ ) ಮೋದಿ ವಿರುದ್ಧ ಮಾತಾಡಿದ್ದಕ್ಕೆ ಕಾಳಿ ಸ್ವಾಮಿ ರೌದ್ರಾವತಾರ | ವೈರಲ್ ವಿಡಿಯೋ

      "ಕರ್ನಾಟಕದ ಯುವಕರೇ, ನಿಮಗೆ ಹೀರೋ ಆಗ್ಬೇಕು ಅಂತಿದ್ರೆ ಬಹುಭಾಷಾ ನಟ ಪ್ರಕಾಶ್ ರೈ ಎಲ್ಲೇ ಕಂಡರೂ ಚಪ್ಪಲೀಲಿ ಹೊಡೀರಿ. ಚಪ್ಪಲೀಲಿ ಹೊಡೆಸಿಕೊಳ್ಳಬಾರದು ಅಂತಿದ್ರೆ ಇನ್ನೊಂದು ವಾರದಲ್ಲಿ ಅವರು ಜೈಲಿಗೆ ಹೋಗಿ ಸೇರಿಕೊಳ್ಳಲಿ" ಎಂದು ಪ್ರಚೋದನಾಕಾರಿಯಾಗಿ ಮಾತನಾಡಿರುವ ಕಾಳಿ ಸ್ವಾಮಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೀಗ ವೈರಲ್ ಆಗಿದೆ.

      ಕಾಳಿ ಮಠದ ಕಾಳಿ ಸ್ವಾಮಿ ಅಲಿಯಾಸ್ ಋಷಿಕುಮಾರ ಸ್ವಾಮೀಜಿಯ 12 ನಿಮಿಷದ ಈ ವಿಡಿಯೋವನ್ನು ಮಂಗಳೂರು ಹಿಂದುಸ್ ಫೇಸ್ ಬುಕ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು. ಇದನ್ನು ಸುಮಾರು 774 ಜನ ಶೇರ್ ಮಾಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

      ಪತ್ರಕರ್ತೆ ಗೌರಿ ಹತ್ಯೆಯ ನಂತರ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಪ್ರಕಾಶ್ ರೈ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೊದಿ ಮತ್ತು ಬಿಜೆಪಿ ಮುಖಂಡರ ಮೇಲೆ ಕತ್ತಿ ಮಸೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಎಲ್ಲ ವಿಷಯಗಳನ್ನೂ ಇಟ್ಟುಕೊಂಡು ಪ್ರಕಾಶ್ ರೈ ಅವರನ್ನು ಹಿಗ್ಗಾಮುಗ್ಗಾ ಥಳಿಸಿರುವ ಕಾಳಿ ಸ್ವಾಮಿ, ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.

      ಕಾಳಿ ಸ್ವಾಮಿ ಪ್ರಕಾಶ್ ರೈ ವಿರುದ್ಧ ರೌದ್ರಾವತಾರ ತಾಳಿರುವ ಈ ವೈರಲ್ ವಿಡಿಯೋದಲ್ಲೇನಿದೆ? ಅವರದೇ ಮಾತುಗಳಲ್ಲಿ ಕೇಳಿ.

      ಕರ್ನಾಟಕವನ್ನು ಇಬ್ಭಾಗ ಮಾಡುತ್ತಿದ್ದೀರಿ

      "ಕೆಲವರಿಗೆ ಹುಚ್ಚು ಹಿಡೀದಿದೆಯೋ ಅಂತ ಅನುಮಾನ ಬರುತ್ತೆ. ಪ್ರಕಾಶ್ ರಾಜ್, ಪ್ರಕಾಶ್ ರಾವ್, ಪ್ರಕಾಶ್ ರೈ ಎಂಬ ಹಲವು ನಾಮಗಳಿಂದ ಕರೆಸಿಕೊಳ್ಳುವ ವ್ಯಕ್ತಿಯ ಮಾತುಗಳನ್ನು ಕೇಳಿದರೆ ಅಸಹ್ಯವಾಗುತ್ತೆ. ಕರ್ನಾಟಕವನ್ನು ಇಬ್ಭಾಗ ಮಾಡುವ ಅವರ ಹೇಳಿಕೆಗಳು ಅವರಿಗೇ ಅರ್ಥವಾಗುವುದಿಲ್ಲ. ಒಂದು ಸಾರಿ ನಾನು ಹಿಂದು ಅಲ್ಲ ಅಂತೀರಿ, ಒಂದ್ಸಾರಿ ನಾನ್ ಹಿಂದು, ನರೇಂದ್ರ ಮೋದಿ ಹಿಂದು ಅಲ್ಲ, ಅಮಿತ್ ಶಾ ಹಿಂದು ಅಲ್ಲ, ಹೆಗಡೆ ಹಿಂದು ಅಲ್ಲ ಅಂತೀರಿ. ಏನು ಹಾಗಂದ್ರೆ? ನಿಮ್ಮ ಹಿಂದುತ್ವದ ಗುರುತು ಯಾವುದು?"

      ಗೋಮುಖ ವ್ಯಾಘ್ರ ಅಂದ್ರೆ...

      ಗೋಮುಖ ವ್ಯಾಘ್ರ ಅಂದ್ರೆ...

      "ರಾಷ್ಟ್ರಪಕ್ಷಿ ಕಾಗೆಯಾಗಬೇಕು ಅಂತೀರಿ. ನವಿಲಿಗೂ ಕಾಗೆಗೂ ಏನು ವ್ಯತ್ಯಾಸ ಅಂದ್ರೆ ನೀನು ಕಾಗೆ. ಅದಕ್ಕೇ ಕಾಗೆಯನ್ನು ರಷ್ಟ್ರಪಕ್ಷಿ ಮಾಡಿಲ್ಲ. ನವಿಲನ್ನು ಮಾಡಿದ್ದಾರೆ. ಮಕ್ಕಳು ಗೋಮುಖ್ಯ ವ್ಯಾಘ್ರ ಅಂದ್ರೆ ಏನು ಎಂದು ಕೇಳಿದರೆ ನಾವು ನಿಮ್ಮನ್ನೇ ತೋರಿಸುತ್ತೇವೆ. ನೀವು ಒಬ್ಬ ಒಳ್ಳೆಯ ನಟ ಎಂಬುದು ನಮಗೆ ಗೊತ್ತಿದೆ. ಆ ವಿಷಯಕ್ಕೆ ನಮ್ಮ ಸೆಲ್ಯೂಟ್ ಇದೆ ನಿಮಗೆ. ಆದರೆ ನೀವು ನಿಮ್ಮ ಚಿತ್ರಗಳಲ್ಲಿ ಗೋಮುಖ ವ್ಯಾಘ್ರನ ಪಾತ್ರ ಮಾಡಿದಂತೇ ನಿಜ ಜೀವನದಲ್ಲೂ ಬದುಕುತ್ತಿದ್ದೀರಿ."

      ಹೊಟ್ಟೆಪಾಡಿಗೆ ವೇಷ ಬದಲಿಸುವವರು

      ಹೊಟ್ಟೆಪಾಡಿಗೆ ವೇಷ ಬದಲಿಸುವವರು

      "ನೀವು ಒಮ್ಮೆ ಹೇಳಿದ್ದೀರಿ. ಮೋದಿ ಗುಜರಾತಿಗೆ ಹೋದರೆ 'ನಾನು ಗುಜರಾತಿ' ಎನ್ನುತ್ತಾರೆ. ಕರ್ನಾಟಕಕ್ಕೆ ಬಂದರೆ ನಾನು ಕನ್ನಡಿಗ ಎನ್ನುತ್ತಾರೆ. ನಿಜ ಸ್ವಾಮಿ. ಅವ್ರು ಈ ದೇಶದ ಪ್ರಧಾನಿ. ಅವರು ಈ ದೇಶದ ಎಲ್ಲ ರಾಜ್ಯವೂ ನನ್ನದೇ, ಎಲ್ಲರೂ ನನ್ನವರೇ ಎಂದರೆ ಅದು ತಪ್ಪಲ್ಲ. ಆದರೆ ನೀವು ಮಾಡೋದೇನು? ತಮಿಳು ನಾಡಿಗೆ ಹೋದ್ರೆ, 'ನಾನು ತಮಿಳಿಗ' ಅಂತೀರಾ. ಆಂಧ್ರಪ್ರದೇಶಕ್ಕೆ ಹೋದರೆ, 'ನಾನು ತೆಲುಗುವಾಡು' ಅಂತೀರಾ. ಬಾಂಬೆ ಗೆ ಹೋದ್ರೆ, 'ನಾನು ಬಾಂಬೆ ವಾಲಾ' ಅಂತೀರಾ. 'ಕರ್ನಾಟಕಕ್ಕೆ ಬಂದ್ರೆ ನಾನು ಕನ್ನಡಿಗ' ಅಂತೀರಾ. ಅಂದ್ರೆ ನಿಮ್ಮ ಹೊಟ್ಟೆಪಾಡಿಗಾಗಿ ಒಂದೊಂದು ಭಾಷೆಗೆ ಒಂದೊಂದು ಕಡೆ ಜೈ ಅಂದ್ಕೊಂಡು ತಿರುಗಾಡ್ತೀರಾ"

      ಮೋದಿಯಲ್ಲ ನಿರುದ್ಯೋಗಿ, ನೀವು!

      ಮೋದಿಯಲ್ಲ ನಿರುದ್ಯೋಗಿ, ನೀವು!

      "ನೀವು ಮೋದಿಗೆ ನಿರುದ್ಯೋಗಿ ಅಂತೀರಾ. ನಿಜ ಹೇಳಬೇಕಂದ್ರೆ ಈಗ ನೀವು ನಿರುದ್ಯೋಗಿ. ಅದಿಕ್ಕೇ ಕೆಲಸ ಇಲ್ದೆ ಭಾಷಣ ಮಾಡ್ಕೊಂಡು ತಿರುಗಾಡ್ತಾ ಇದೀರಾ. ಮೋದೀಜಿ ಕೆಲಸ ಮಾಡುವ ವ್ಯಕ್ತಿ. ಅವರು 2019 ಕ್ಕೆ ನಿರುದ್ಯೋಗಿ ಆಗ್ತಾರೆ. ಆಗ ಕನ್ನಡ ಕಲೀರಿ ಅಂತೀರಲ್ಲ. ಅವರಿಗೆ ಅಧಿಕಾರ ಇರಲಿ ಬಿಡಲಿ, ಅವರು ಕೆಲಸ ಮಾಡುತ್ತಲೇ ಇರ್ತಾರೆ. ಅವರು ನಿರುದ್ಯೋಗಿ ಅಂತ ಭವಿಷ್ಯ ನುಡೀತೀರಿ. ನೀವು ಈಗಾಗಲೇ ನಿರುದ್ಯೋಗಿ. ನಿಮ್ಮ ಕೆಲಸ ಏನು ಅಂದ್ರೆ ಬೆಂಕಿ ಹಚ್ಚೊದು! ಕಾಂಗ್ರೆಸ್ ನವರು ಕೊಡೋ ಸೀಟಿಗೋ, ಸೈಟಿಗೋ ಈ ರೀತಿ ಮಾಡ್ತಾ ಇದ್ದೀರಾ? 'ಸಿದ್ರಾಮುಲ್ಲಾ ಖಾನ್' ನಿಮಗೆ ಸೈಟು ಕೊಡುತ್ತಾರಾ?"

      ನಿಮಗೆ ಈ ಅಧಿಕಾರ ಕೊಟ್ಟವರ್ಯಾರು?

      ನಿಮಗೆ ಈ ಅಧಿಕಾರ ಕೊಟ್ಟವರ್ಯಾರು?

      "ಭಾರತವನ್ನ ಹಿಂದು ರಾಷ್ಟ್ರ ಮಾಡೋಕೆ ಸಾಧ್ಯವೇ ಇಲ್ಲ ಎನ್ನುತ್ತೀರಿ. ಅದಕ್ಕೆ ಪತ್ರಕರ್ತರೊಬ್ಬರು, 'ಯಾಕೆ ಸಾಧ್ಯವಿಲ್ಲ? ಇಲ್ಲಿ ಬಹು ಸಂಖ್ಯಾತರು ಹಿಂದುಗಳೇ ಇಲ್ಲವೇ?' ಎಂದು ಕೇಳಿದರೆ ನೀವು ಹೇಳಿದ ಮಾತೇನು? ಭಾರತದಲ್ಲಿ ನವಿಲಿಗಿಂತ ಕಾಗೆಗಳೇ ಬಹುಸಂಖ್ಯೆಯಲ್ಲಿವೆ. ಅದನ್ನು ಯಾಕೆ ರಾಷ್ಟ್ರಪಕ್ಷಿಯನ್ನಾಗಿ ಮಾಡಬಾರದು ಅಂತ. ನಂತರ ಹೇಳುತ್ತೀರಿ, ಭಾರತವನ್ನು ಹಿಂದುರಾಷ್ಟ್ರ ಮಾಡಿದರೆ, ಸಿಕ್ಖರು ಎಲ್ಲಿ ಹೋಗಬೇಕು? ಜೈನರು, ಬೌದ್ಧರು, ಕ್ರಿಶ್ಚಿಯನ್ನರು, ಮುಸ್ಲಿಮರು ಎಲ್ಲಿ ಹೋಗಬೇಕು? ನೀವು ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ಲಿಂಗಾಯತರು ಎಲ್ಲಿಗೆ ಹೋಗಬೇಕು ಎಂದೂ ಕೇಳುತ್ತೀರಿ. ಏನು ಹಾಗಂದ್ರೆ? ಅವರನ್ನೂ ಈ ಎಲ್ಲ ಅಲ್ಪಸಂಖ್ಯಾತರ ಪಟ್ಟಿಗೆ ನೀವೇ ಸೇರಿಸಿಕೊಂಡು ಬಿಟ್ಟಿರಾ? ಲಿಂಗಾಯತರು ಎಲ್ಲಿಗೆ ಹೋಗಬೇಕು ಎಂದು ಕೇಳುವ ಅಧಿಕಾರ ನಿಮಗೆ ಕೊಟ್ಟವರ್ಯಾರು? ಅವರನ್ನೂ ಆ ಪಟ್ಟಿಗೆ ಸೇರಿಸೋಕೆ ನೀವ್ಯಾರು? ಲಿಂಗಾಯತರು ವೀರಶೈಯವರನ್ನು ಒಡೆಯಬೇಕೆಂಬ ತಂಡದಲ್ಲಿ ನೀವೂ ಇದ್ದೀರಿ ಎಬುದನ್ನು ಈ ಮೂಲಕ ಸಾಬೀತುಪಡಿಸಿದ್ದೀರಿ."

      ಭಾಷೆಯನ್ನು ಬಳಸುವಾಗ ಎಚ್ಚರಿಕೆಯಿರಲಿ!

      ಭಾಷೆಯನ್ನು ಬಳಸುವಾಗ ಎಚ್ಚರಿಕೆಯಿರಲಿ!

      "ಮೋದೀಜಿ ಕರ್ನಾಟಕಕ್ಕೆ ಬರುವುದು ತೀಟೆ ತೀರಿಸಿಕೊಳ್ಳೋಕೆ ಎಂದಿದ್ದೀಯಾ. ಹಾಗಾದರೆ ಕರ್ನಾಟಕ ಅಂದ್ರೆ ಏನು? ಭಾಷೆ ಮೇಲೆ ಹಿಡಿತ ಇರಲಿ ಮೊದಲು. ಮೋದಿ, ಯೋಗಿ ಅನಂತ ಕುಮಾರ್ ಹೆಗಡೆ ಮೇಲೆ ನೀವು ಕತ್ತಿ ಮಸೀತಿರೋದ್ಯಾಕೆ? ಮೋದಿ ಕಾಲಿಗೆ ಯಡಿಯೂರಪ್ಪ ಬಿದ್ರು ಅಂತ ಹೇಳ್ತೀಯಾ. ರಾಜನ ಕಾಲಿಗೆ ಉಳಿದವರೆಲ್ಲ ಬೀಳೋದ್ರಲ್ಲಿ ತಪ್ಪಿಲ್ಲ. ಮೋದಿ ಈ ದೇಶದ ಚಕ್ರವರ್ತಿ. ಅವರ ಕಾಲಿಗೆ ಯಾರು ಬೇಕಾದರೂ ಬೀಳಬಹುದು. ಆದರೆ ಅವರು ಬೀಳಿಸಿಕೊಳ್ಳೋದಿಲ್ಲ ಅಷ್ಟೇ. ಯಡಿಯೂರಪ್ಪ ಮೋದಿಯವರಿಗೆ ತಲೆ ಭಾಗಿ ನಮಸ್ಕರಿಸಿದ್ದರೆ ಅದು ಅವರ ಸಂಸ್ಕಾರ. ತಲೆಬಾಗಿ ನಮಸ್ಕರಿಸೋದು ನಮ್ಮ ಹಿಂದು ಧರ್ಮದ ಸಂಸ್ಕಾರ. ಅದರಿಂದ ಏನೋ ತಲೆಹೋಗುವ ಕೆಲಸ ಮಾಡಿಲ್ಲ ಯಡಿಯೂರಪ್ಪ."

      ತಮಿಳರಿಗೆ ಸೆಡ್ಡು ಹೊಡೀರಿ ನೋಡೋಣ!

      ತಮಿಳರಿಗೆ ಸೆಡ್ಡು ಹೊಡೀರಿ ನೋಡೋಣ!

      "ಕಾವೇರಿ ಪುಟ್ಟ ನದಿ ಅಂದೋರ್ಯಾರು? ಎಷ್ಟೋ ಲಕ್ಷ ಎಕರೆ ಭೂಮಿಗೆ ನೀರು ಕೊಡುತ್ತೆ ಕಾವೇರಿ ಅದು ಗೊತ್ತಾ ನಿಮಗೆ? ಮರಳು ಮಾಫಿಯಾ ನಡೀತಿದೆ ಅಂತೀರಾ. ಐದು ವರ್ಷ ನಿಮ್ಮ 'ಸಿದ್ರಾಮುಲ್ಲಾ ಖಾನ್' ಆಡಳಿತ ನಡಸ್ತಾ ಇರೋದು. ಅವರಿಗೆ ಈ ಮಾಫಿಯಾ ನಿಯಂತ್ರಿಸೋಕಾಗಿಲ್ವಾ? ತಮಿಳು ನಾಡಿಗೆ ಹೋಗಿ ಕಾವೇರಿ ತಮಿಳು ನಾಡಿಂದು ಅಂತೀರಿ. ಇಲ್ಲಿಬಂದು ಕಾವೇರಿ ಪುಟ್ಟ ನದಿ ಅಂತೀರಿ. ತಮಿಳರ ಹೋಗಿ ಕಾವೇರಿ ಚಿಕ್ಕ ನದಿ. ಅದನ್ನು ಕರ್ನಾಟಕಕ್ಕೆ ಬಿಟ್ಬಿಡಿ, ನಿಮಗೆ ದೊಡ್ಡ ಸಮುದ್ರ ಇದೆ ಅಂತ ಹೇಳಿ ನೋಡೋಣ!"

      ಚಪ್ಪಲಿಯಲ್ಲಿ ಹೊಡೆಯಲು ಯುವಕರಿಗೆ ಸಲಹೆ

      ಚಪ್ಪಲಿಯಲ್ಲಿ ಹೊಡೆಯಲು ಯುವಕರಿಗೆ ಸಲಹೆ

      "ಕರ್ನಾಟಕದ ಯುವಕರಿಗೆ ಒಂದು ಮಾತು. ನಿಮಗೆ ಯಾರಿಗಾದರೂ ಹೀರೋ ಆಗ್ಬೇಕಾ? ಹಾಗಾದ್ರೆ ಒಂದು ಸಲಹೆ ಕೊಡ್ತೀನಿ ಕೇಳಿ. ಈ ಪ್ರಕಾಶ್ ರೈ ಎಂಬುವವನು ಐದು ಭಾಷೆಗಳಲ್ಲೂ ಖಳನಾಯಕನ ಪಾತ್ರ ಮಾಡುವವನು. ಈ ವಿಲನ್ ಗೆ ಚಪ್ಪಲಿಯಲ್ಲಿ ಹೊಡೆದವರು ಹೀರೋ ಆಗಬಹುದು. ಆತನಿಗೆ ಚಪ್ಪಲಿಯಲ್ಲಿ ಹೊಡೆದರೆ ನೀವು ಐದು ಭಾಷೆಯ ಚಾನೆಲ್ ಗಳಲ್ಲಿ ನಿರಂತರವಾಗಿ ಸುದ್ದಿಯಾಗ್ತೀರಾ! ನನ್ನ ಈ ಭವಿಷ್ಯ ಸುಳ್ಳಾಗ್ಬೇಕು ಅಂದ್ರೆ ಒಂದು ವಾರದೊಳಗೆ ಹೋಗಿ ಜೈಲು ಸೇರ್ಕೊಳ್ಳಿ ಪ್ರಕಾಶ್ ರೈ. ಆಚೆ ಕಡೆ ಇದ್ರೆ ಜನ ಹೊಡೀತಾರೆ."

      ಕರ್ನಾಟಕಕ್ಕೆ ಬೆಂಕಿ ಹಚ್ತಿರೋದು ನಿಮ್ಮಂಥವರು!

      ಕರ್ನಾಟಕಕ್ಕೆ ಬೆಂಕಿ ಹಚ್ತಿರೋದು ನಿಮ್ಮಂಥವರು!

      "ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡುವ ಮೋದಿಯವರು ಚಟಕ್ಕೆ ಕರ್ನಾಟಕಕ್ಕೆ ಬರುತ್ತಾರೆ ಅಂತೀರಲ್ಲ, ಏನ್ ಮಾತಾಡ್ತೀರಾ? ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ಕುಟುಂಬ 70 ವರ್ಷಗಳಲ್ಲಿ ಮಾಡದೆ ಇದ್ದಿದ್ದನ್ನ ಮೂರೇ ವರ್ಷಗಳಲ್ಲಿ ಮೋದಿ ಮಾಡ್ಬಿಡ್ಬೇಕಾ? ದಯವಿಟ್ಟು ಕರ್ನಾಟಕದ ಯುವಕರು ಆತ ಎಲ್ಲಿ ಸಿಗುತ್ತಾನೋ ಅಲ್ಲಿ ಹೊಡೀರಿ. ಇಲ್ಲಾಂದ್ರೆ ಚುನಾವಣೆ ಆಯೋಗದವರೇ ಇವನನ್ನ ಜೈಲಿಗೆ ಅಟ್ಟುತ್ತಾರೆ. ಅಮಿತ್ ಶಾ ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತಾರೆ ಅಂತೀರಲ್ಲ. ಅವರ್ಯಾರೋ ನಿಮ್ಮ ಸ್ನೇಹಿತ ಮೇವಾನಿ ಅನ್ನೋನು, ಮೋದಿ ಕರ್ನಾಟಕಕ್ಕೆ ಬಂದ್ರೆ ಚೇರ್ ಎಸೀರಿ, ಗಲಭೆ ಎಬ್ಬಿಸಿ ಅಂತಿದ್ನಲ್ಲ ಅದು ಬೆಂಕಿ ಹಚ್ಚಿದ ಹಾಗಲ್ವಾ? ಬೆಂಕಿ ಹಚ್ಚುತ್ತಾ ಇರೋದು ಮೋದಿ, ಶಾ ಅಲ್ಲ, ನಿಮ್ಮ ಮೆವಾನಿ, ಕನ್ನಯ್ಯ, ಗೌರಿ ಅಂಥವರು."

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+