ಮಹಿಳೆ ಜೊತೆ ಎಚ್ ವಿಶ್ವನಾಥ್ ಧ್ವನಿಯಂತಿರುವ ಅಸಭ್ಯ ಆಡಿಯೋ ವೈರಲ್ : ಸ್ಪಷ್ಟನೆ
Recommended Video
ಮುಂಬೈ, ಜುಲೈ 9: ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ, ಎಚ್ ವಿಶ್ವನಾಥ್ ಅವರ ಧ್ವನಿಯಂತೇ ಇರುವ ಆಡಿಯೋ ಒಂದು ಬಹಿರಂಗಗೊಂಡಿದೆ. ಮಹಿಳೆ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿರುವ ಅಸಭ್ಯ ಆಡಿಯೋ ಇದಾಗಿದೆ.
ಈ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ಇದು ನನ್ನ ಗಮನಕ್ಕೂ ಬಂದಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಈ ರೀತಿ ಕಟ್ಟಿಹಾಕಲು ನೋಡುವುದು ಮಾಮೂಲಿ ಎಂದು ಹೇಳಿದ್ದಾರೆ.
ನನ್ನ ಧ್ವನಿಯನ್ನು ಮಿಮಿಕ್ರಿ ಮಾಡಿ ಆಡಿಯೋದಲ್ಲಿ ಬಳಸಲಾಗಿದೆ. ಲವ್ ಸ್ಟೋರಿಯ ಬಗ್ಗೆ ಪುಸ್ತಕವನ್ನೇ ಬರೆದವನು ನಾನು ಎಂದು ಹೇಳಿರುವ ವಿಶ್ವನಾಥ್, ಇದೊಂದು ಫೇಕ್ ಆಡಿಯೋ ಎಂದು ಸ್ಪಷ್ಟ ಪಡಿಸಿದ್ದಾರೆ.

ನಾನು ಪ್ರತಿನಿಧಿಸುವ ಹುಣಸೂರು ಕ್ಷೇತ್ರದಲ್ಲಿ ನನ್ನ ಪ್ರತಿಕೃತಿ ದಹಿಸಿ, ಶವಸಂಸ್ಕಾರವನ್ನೇ ಮಾಡಿದ್ದಾರೆ. ರಾಜಕೀಯದಲ್ಲಿ ಇದೆಲ್ಲಾ ಮಾಮೂಲಿ, ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.
ಸೆಕ್ಸ್ ವಿಚಾರ ಜನರನ್ನು ಆಕರ್ಷಿಸುವುದು ಬೇಗ, ಹಾಗಾಗಿ ವಿರೋಧಿಗಳು ಈ ರೀತಿಯ ದಾರಿಯನ್ನು ಹಿಡಿದಿದ್ದಾರೆ. ಇದನ್ನೆಲ್ಲಾ ನಂಬುವ ಮನಸ್ಥಿತಿ ನಮ್ಮ ರಾಜ್ಯದವರದ್ದಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.
ನಾನು ಮತ್ತು ಇಲ್ಲಿರುವ ಯಾವುದೇ ಶಾಸಕರು ಸಚಿವ ಸ್ಥಾನ ಬೇಕೆಂದು ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿ ಕೂತಿರುವುದಲ್ಲ. ಅತೃಪ್ತ ಶಾಸಕರಿಗೆ ಸಚಿವ ಸ್ಥಾನದ ಆಫರ್ ನೀಡಿದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯನವರಿಗೆ ನನ್ನದೊಂದು ಥ್ಯಾಂಕ್ಸ್ ಎಂದು ವಿಶ್ವನಾಥ್, ಸದ್ಯದ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.












Click it and Unblock the Notifications