RGUHS: ನಿಯಮ ಉಲ್ಲಂಘಿಸುವ ಮೌಲ್ಯಮಾಪಕರನ್ನು ಕಪ್ಪು ಪಟ್ಟಿಗೆ ಸೇರಿಸಲು ಹೈಕೋರ್ಟ್ ಆದೇಶ
ಬೆಂಗಳೂರು, ಮಾ.26: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ (ಆರ್‌ಜಿಯುಎಚ್‌ಎಸ್) ನೇಮಕಗೊಂಡ ಪರೀಕ್ಷಕರು ಪದೇ ಪದೇ ನಿಯಮಗಳನ್ನು ಉಲ್ಲಂಘಿಸುತ್ತಿರುವುದರ ವಿರುದ್ಧ ಗರಂ ಆಗಿರುವ ಹೈಕೋರ್ಟ್ ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆದೇಶ ನೀಡಿದೆ.
"ವಿವಿ ನೇಮಿಸಿರುವ ಪರೀಕ್ಷಕರು ವೈದ್ಯಕೀಯ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ಹೊರಡಿಸಿದ ಮಾರ್ಗಸೂಚಿಗಳನ್ನು ವಾಡಿಕೆಯಂತೆ ಉಲ್ಲಂಘಿಸುತ್ತಿದ್ದಾರೆ. ಇದನ್ನು ಸಹಿಸಲಾಗದು, ವಿಶ್ವವಿದ್ಯಾನಿಲಯವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಇಂತಹ ಉಲ್ಲಂಘನೆಗಳು ಮತ್ತೆ ಆಗದಂತೆ ಖಾತ್ರಿಪಡಿಸಿಕೊಳ್ಳಬೇಕು'' ಎಂದು ಆದೇಶಿಸಿದೆ.
4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ದಾಸರಿ ಚಕ್ರಧರ್ ಮತ್ತು ಶಶಿಕುಮಾರ್ ಅವರು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾ.ಪಿ.ಕೃಷ್ಣಭಟ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ನ್ಯಾಯಾಲಯ ಏನು ಹೇಳಿದೆ?
ಅಲ್ಲದೆ ನ್ಯಾಯಪೀಠ, ಇಂತಹ ಉಲ್ಲಂಘನೆಗಳಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮತ್ತೆ ಮತ್ತೆ ಪರೀಕ್ಷೆಗೆ ಹಾಜರಾಗುವಂತೆ ಮಾಡುವುದು ಸರಿಯಲ್ಲ, ಅದಕ್ಕೆ ಅಸ್ಪದ ನೀಡಬಾರದು''ಎಂದು ಆದೇಶಿಸಿದೆ.
"ವಿಶ್ವವಿದ್ಯಾನಿಲಯವು ವಾಸ್ತವಕ್ಕೆ ಎಚ್ಚೆತ್ತುಕೊಂಡು ಅಪರಾಧಿ ಪರೀಕ್ಷಾರ್ಥಿಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಮೂಲಕ ಅಥವಾ ಈ ರೀತಿಯ ಅವ್ಯವಹಾರಗಳು ಮರುಕಳಿಸದಂತೆ ಇಲಾಖಾ ಪ್ರಕ್ರಿಯೆಗಳನ್ನು ನಡೆಸುವ ಮೂಲಕ ಅವರ ವಿರುದ್ಧ ಕ್ರಮ ಕೈಗೊಳ್ಳುಲು ಇದು ಸಕಾಲ. ಈ ಆದೇಶದಲ್ಲಿನ ನಿರ್ದೇಶನಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯವಿಧಾನದ ಸುರಕ್ಷತೆಗಳನ್ನು ರೂಪಿಸಲು ವಿಶ್ವವಿದ್ಯಾಲಯಕ್ಕೆ ಮುಕ್ತವಾಗಿದೆ'' ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಡಪಡಿಸಿದೆ.
"ಎಂಬಿಬಿಎಸ್ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕ್ಲಿನಿಕಲ್ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತವೆ ಎಂದು ದೂರುವುದಿಲ್ಲ. ಆದರೆ ಇಲ್ಲಿ ಕ್ಲಿನಿಕಲ್ ಉಸ್ತುವಾರಿ ಹೊತ್ತಿರುವ ಪ್ರೊಫೇಸರ್ ಗಳು ಕೆಲವು ಅಭ್ಯರ್ಥಿಗಳ ಪರವಾಗಿ ಮಾತ್ರ ನಿಲ್ಲುತ್ತಾರೆ, ಉಳಿದವರ ವಿಚಾರದಲ್ಲಿ ವಿವಿ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುತ್ತಲೇ ಇದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ''ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣವೇನು?
4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ದಾಸರಿ ಚಕ್ರಧರ್ ಮತ್ತು ಶಶಿಕುಮಾರ್ ಪರ ವಕೀಲರು, 2020ರ ಡಿಸೆಂಬರ್‌ನಲ್ಲಿ ಮತ್ತೆ ಪ್ರಾಯೋಗಿಕ ಪರೀಕ್ಷೆಗಳನ್ನು ಮಾಡುವಂತೆ ನ್ಯಾಯಾಲಯ ನೀಡಿದ್ದ ಆದೇಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಅಲ್ಲದೆ, ಆಗ ಉಲ್ಲಂಘನೆಗಳಿಂದಾಗಿ ಅಸಮರ್ಪಕ ಕಾರ್ಯಗಳಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದರು.
ವಿಶ್ವವಿದ್ಯಾನಿಲಯವು ನೇಮಿಸಿದ ಪರೀಕ್ಷಕರು ಕ್ಲಿನಿಕಲ್ ಪರೀಕ್ಷೆಯನ್ನು ನಡೆಸುವಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ಆರ್ ಜಿಯುಎಚ್ ಎಸ್ ನ ರಿಜಿಸ್ಟ್ರಾರ್ ವಿರುದ್ಧ ಅರ್ಜಿಗಳನ್ನು ಸಲ್ಲಿಸಿದರು. ಮೂರು ವಾರಗಳಲ್ಲಿ ಅರ್ಜಿದಾರರಿಗೆ ಕ್ರಮವಾಗಿ ಶಸ್ತ್ರಚಿಕಿತ್ಸೆ ಮತ್ತು ಪೀಡಿಯಾಟ್ರಿಕ್ಸ್‌ನ ಅನುತ್ತೀರ್ಣ ವಿಷಯಗಳಿಗೆ ಹೊಸದಾಗಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಂತೆ ನ್ಯಾಯಾಲಯವು ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ.












Click it and Unblock the Notifications