ಮಂಡ್ಯ: ಗ್ರಾಮ ಸಹಾಯಕನ ಹತ್ಯೆ, ಪೊದೆಯಲ್ಲಿ ಸಿಕ್ಕ ಶವ
ಮಂಡ್ಯ, ಡಿಸೆಂಬರ್, 16: ಗ್ರಾಮ ಪಂಚಾಯತಿಯಲ್ಲಿ ಗ್ರಾಮಸಹಾಯಕ ಹಾಗೂ ಆಟೋ ಚಾಲಕನಾಗಿ ಕಾರ್ಯನಿವರ್ಹಿಸುತ್ತಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಮಂಗಳವಾರ ಪ್ರಕರಣ ಬೆಳಕಿಗೆ ಬಂದಿದೆ.
ಮಂಡ್ಯದ ನಾಗಮಂಗಲ ತಾಲೂಕಿನ ಚುಟ್ಟನಹಳ್ಳಿಯ ಚಿಣ್ಯ ಗ್ರಾಮದ ರವೀಂದ್ರ (35) ಎಂಬಾತನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಈತ ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಹಾಯಕನಾಗಿ ಹಾಗೂ ಬಿಡುವಿನ ವೇಳೆಯಲ್ಲಿ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದನು.[ಮಂಡ್ಯ: ಆಪ್ತ ಗೆಳತಿಯನ್ನು ಕೊಂದಿದ್ದ ಅನುಷಾ ಆತ್ಮಹತ್ಯೆಗೆ ಶರಣು]

ರವೀಂದ್ರನನ್ನು ಸೋಮವಾರ ರಾತ್ರಿ 8 ಗಂಟೆ ಸಮಯದಲ್ಲಿ ಹೊರಪ್ರದೇಶಕ್ಕೆ ಕರೆದೊಯ್ದ ದುಷ್ಕರ್ಮಿಗಳು ನಿರ್ಜನ ಪ್ರದೇಶದಲ್ಲಿ ಹತ್ಯೆಗೈದಿದ್ದಾರೆ. ಬಳಿಕ ಅದೇ ಆಟೋದಲ್ಲೇ ಶವವನ್ನು ತಂದು ಶ್ರೀರಂಗಪಟ್ಟಣ ಬೀದರ್ ರಾಜ್ಯ ಹೆದ್ದಾರಿಯ ಚುಟ್ಟನಹಳ್ಳಿಯ ಗೇಟ್ ಸಮೀಪದಲ್ಲಿರುವ ಪೊದೆಗೆ ಎಸೆದು, ಆಟೋವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.[ಪ್ರೇಮ ನಿವೇದನೆ ನಿರಾಕರಿಸಿದ ಹುಬ್ಬಳ್ಳಿ ಹುಡುಗಿಯ ಹತ್ಯೆ]
ಆಟೋ ಬಳಿ ಶವ ಕಂಡು ಹೆದರಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗ್ರಾಮಾಂತರ ಠಾಣೆ ಪಿಎಸ್ಐ ನಿರಂಜನ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆಟೋವನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications