ಡಾ. ರಾಜಕುಮಾರ್ ಅವರು ಕನ್ನಡಕ್ಕಾಗಿ ಬೀದಿಗೆ ಇಳಿಸುವ ಪರಿಸ್ಥಿತಿ ತಂದದ್ದು ಯಾವ ಸರ್ಕಾರ?
ಬೆಂಗಳೂರು, ಫೆಬ್ರವರಿ 12: ಕನ್ನಡ, ಕನ್ನಡಿಗ ಕರ್ನಾಟಕದ ಬಗ್ಗೆ ದಿಢೀರ್ ಕಾಳಜಿ ಪ್ರದರ್ಶಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ಡಾ. ರಾಜ್ ನೇತೃತ್ವದ ಐತಿಹಾಸಿಕ ಗೋಕಾಕ್ ಚಳುವಳಿಗೆ ಕಾರಣವಾದ ಸರ್ಕಾರ ಯಾವುದು? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಕಿಡಿಕಾರಿರುವ ವಿಜಯೇಂದ್ರ ಅವರು, ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಹಾಗೂ ಸಾಹಿತಿ, ಕಲಾವಿದರನ್ನು ಕನ್ನಡಕ್ಕಾಗಿ ಬೀದಿಗೆ ಇಳಿಸುವ ಪರಿಸ್ಥಿತಿ ತಂದದ್ದು ನಿಮ್ಮ ಕಾಂಗ್ರೆಸ್ ಸರ್ಕಾರ ಎನ್ನುವ ಇತಿಹಾಸ ಮರೆತಿರಾ? ಎಂದು ಪ್ರಶ್ನಿಸಿದ್ರು.

ಕನ್ನಡಕ್ಕೆ ಕಂಟಕರಾಗಿದ್ದು, ಕನ್ನಡಿಗರನ್ನು ತಾತ್ಸಾರವಾಗಿ ಕಂಡಿದ್ದು, ಕನ್ನಡ ಹೋರಾಟಗಾರರನ್ನು ಜೈಲಿಗಟ್ಟಿದ್ದು, ಮೊನ್ನೆ ಮೊನ್ನೆಯಷ್ಟೇ ಕನ್ನಡ ನಾಮಫಲಕಕ್ಕಾಗಿ ಹೋರಾಡಿದವರನ್ನು ಜೈಲಿಗಟ್ಟಿದ್ದು ನೀವಲ್ಲವೇ? ನಿಮ್ಮ ಮೊಸಳೆ ಕಣ್ಣೀರಿನ ಕನ್ನಡ ಪ್ರೇಮದಿಂದ ನಾಡು ನುಡಿ ಜನರ ಬಗೆಗಿನ ಕಾಳಜಿಯ ಪಾಠ ಕಲಿಯುವ ದರ್ದು ಬಿಜೆಪಿಗಿಲ್ಲ.
ದೇಶದ ಇತಿಹಾಸದಲ್ಲಿ ಮಾತೃಭಾಷೆಗೆ ಮಾನ್ಯತೆ ಕೊಟ್ಟಿದ್ದರೆ, ಅದು ನಮ್ಮ ನರೇಂದ್ರ ಮೋದಿ ಜೀ ಅವರ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ. "ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ" ಆದ್ಯತೆ ಇರುವುದು ಈ ನೆಲದ ಭಾಷೆಗೆ ಹೊರೆತು ಆಂಗ್ಲ ಭಾಷೆಗಲ್ಲ, ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುವ ಮೂಲಕ ನಮ್ಮ ಸಂಸ್ಕೃತಿ, ನಮ್ಮ ಭಾಷೆ ಹಾಗೂ ನಮ್ಮ ತನವನ್ನು ವಿರೋಧಿಸುತ್ತಿರುವ ನೀವು ಕನ್ನಡ ಪ್ರೇಮಿಯಾಗಲು ಹೇಗೆ ಸಾಧ್ಯ?
ಕನ್ನಡ, ಕನ್ನಡಿಗ ಕರ್ನಾಟಕದ ಬಗ್ಗೆ ದಿಢೀರ್ ಕಾಳಜಿ ಪ್ರದರ್ಶಿಸುತ್ತಿರುವ @siddaramaiah ನವರೇ,
— Vijayendra Yediyurappa (@BYVijayendra) February 11, 2024
ಡಾ. ರಾಜ್ ನೇತೃತ್ವದ ಐತಿಹಾಸಿಕ ಗೋಕಾಕ್ ಚಳುವಳಿಗೆ ಕಾರಣವಾದ ಸರ್ಕಾರ ಯಾವುದು?
ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಹಾಗೂ ಸಾಹಿತಿ, ಕಲಾವಿದರನ್ನು ಕನ್ನಡಕ್ಕಾಗಿ ಬೀದಿಗೆ ಇಳಿಸುವ ಪರಿಸ್ಥಿತಿ ತಂದದ್ದು ನಿಮ್ಮ ಕಾಂಗ್ರೆಸ್ ಸರ್ಕಾರ ಎನ್ನುವ… https://t.co/EZR4O0L2RM pic.twitter.com/cMjrF8PnUD
ಮಾನ್ಯ ಅಮಿತ್ ಶಾ ಅವರ ಬದ್ಧತೆ ಸ್ಥಳೀಯ ಭಾಷೆ, ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳು ಉಳಿಯಬೇಕೆನ್ನುವುದೇ ಹೊರತು, ನಿಮ್ಮ ರೀತಿ ಭಾಷೆ ಹೆಸರಿನಲ್ಲೂ ರಾಜಕೀಯ ಮಾಡುವ ಕುಬ್ಜತನವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?
ನಮ್ಮ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುತ್ತಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ಕನ್ನಡಿಗರೆಂದರೆ ತಾತ್ಸಾರ. ಕನ್ನಡ ಧ್ವಜಕ್ಕೆ ವಿರೋಧ, ಹಿಂದಿ ಹೇರಿಕೆಗೆ ಪ್ರಯತ್ನ, ನಂದಿನಿ ಮೇಲೆ ಅಮುಲ್ ಹೇರುವ ಹುನ್ನಾರ ಇವೆಲ್ಲವೂ ಅಮಿತ್ ಶಾ ಸಾಧನೆಗಳು.

ಕೇಂದ್ರ ಸರ್ಕಾರ ಬರಪರಿಹಾರ ನೀಡಬೇಕೆಂದರೆ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಸಭೆ ನಡೆಸಿ ತೀರ್ಮಾನಿಸಬೇಕು. ಕನ್ನಡಿಗರ ವಿರೋಧಿಯಾಗಿರುವ ಅಮಿತ್ ಶಾ ಅವರು ಆ ಸಭೆಯನ್ನೇ ಕರೆಯುತ್ತಿಲ್ಲ. ಇಂತಹವರು ರಾಜ್ಯಕ್ಕೆ ಬಂದು ನಮಗೆ ಪಾಠ ಮಾಡುತ್ತಿದ್ದಾರೆ.
ಬಡವರ ಕಷ್ಟ ಕಡಿಮೆ ಮಾಡುವ, ಕಣ್ಣೀರು ಒರೆಸುವ ಕೆಲಸವೇ ನಿಜವಾದ ದೈವ ಭಕ್ತಿ ಎಂದು ತಿಳಿದುಕೊಂಡವನು ನಾನು. ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿ ಎಷ್ಟು ಬಾರಿ ರಾಮನಾಮ ಹೇಳಿದರೂ ಅದು ವ್ಯರ್ಥ. ಬಡವರಿಗೆ ಅನ್ನವನ್ನೂ ನೀಡದೆ ದೇವರಿಗೆ ನೈವೇಧ್ಯ ನೀಡಿ ಏನು ಫಲ?
ಮುಖ್ಯಮಂತ್ರಿ ಸ್ಥಾನದ ಮೊದಲ ಅವಧಿಯಲ್ಲಿ ನಾನು ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಬಡವರ ಕಲ್ಯಾಣದ ಕಾರ್ಯಕ್ರಮಗಳ ಬಗ್ಗೆಯೂ @BJP4India ನಾಯಕರು ಇದೇ ರೀತಿ ತಮ್ಮ ಅಸಹನೆ ಮತ್ತು ಮತ್ಸರವನ್ನು ಕಾರಿಕೊಂಡಿದ್ದರು.
— CM of Karnataka (@CMofKarnataka) February 11, 2024
ಬಡವರಿಗೆ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಕೊಡಲು ನಿರಾಕರಿಸಿದ್ದ…
ಬಡವರಿಗೆ ಮನೆ ಕಟ್ಟಿಕೊಡದೆ ದೇವರಿಗೆ ಗುಡಿ ಕಟ್ಟಿ ಏನು ಫಲ? ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರಿಗೆ ಯಾವ ರಾಮನ ದಯೆಯೂ ಇರಲಾರದು, ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೂ ಇರಲಾರದು ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನದ ಮೊದಲ ಅವಧಿಯಲ್ಲಿ ನಾನು ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಬಡವರ ಕಲ್ಯಾಣದ ಕಾರ್ಯಕ್ರಮಗಳ ಬಗ್ಗೆಯೂ ಬಿಜೆಪಿ ನಾಯಕರು ಇದೇ ರೀತಿ ತಮ್ಮ ಅಸಹನೆ ಮತ್ತು ಮತ್ಸರವನ್ನು ಕಾರಿಕೊಂಡಿದ್ದರು.
ಬಡವರಿಗೆ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಕೊಡಲು ನಿರಾಕರಿಸಿದ್ದ ಕೇಂದ್ರ ಸರ್ಕಾರ ಈಗ ಭಾರತ್ ಬ್ರಾಂಡ್‌ನಲ್ಲಿ ಅದೇ ಅಕ್ಕಿಯನ್ನು ಮಾರಾಟ ಮಾಡುತ್ತಿದೆ. ನಾವು ಕೆ.ಜಿ ಗೆ ರೂ.33 ರಂತೆ ಅಕ್ಕಿ ಕೇಳಿದಾಗ ನಿರಾಕರಿಸಿದ್ದ ಕೇಂದ್ರ ಸರ್ಕಾರ ಈಗ ಕೆ.ಜಿ ಗೆ ರೂ.29ರಂತೆ ಮಾರಾಟ ಮಾಡುತ್ತಿದೆ. ಒಟ್ಟಿನಲ್ಲಿ ಬಿಜೆಪಿಗೆ ಕರ್ನಾಟಕದ ಬಡವರು, ರೈತರು, ಮಹಿಳೆಯರು, ಕಾರ್ಮಿಕರೆಂದರೆ ಅಸಹನೆ ಎಂದು ಹೇಳಿದ್ದಾರೆ.












Click it and Unblock the Notifications