ನಮಗೆ ಎದುರಾಳಿ ಬಿಜೆಪಿ, ಜೆಡಿಎಸ್ ಆಟುಕ್ಕುಂಟು ಲೆಕ್ಕಕ್ಕಿಲ್ಲ: ಸಿದ್ದರಾಮಯ್ಯ
ವಿಜಯನಗರ, ಏಪ್ರಿಲ್ 26: ರಂಗೇರಿದ ರಾಜ್ಯ ಚುನಾವಣಾ ಅಖಾಡದಲ್ಲಿ ಆರೋಪ-ಪ್ರತ್ಯಾರೋಪ, ಟೀಕೆ-ತಿರುಗೇಟುಗಳ ಅಬ್ಬರ ಹೆಚ್ಚಾಗಿದೆ. ಎದುರಾಳಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ವಿಜಯನಗರ ಜಿಲ್ಲೆಯ ಜಿಲ್ಲೆಯ ಹೂವಿನಹಡಗಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರನಾಯ್ಕ ಅವರ ಪರ ಬುಧವಾರ ಸಿದ್ದರಾಮಯ್ಯ ಮತಯಾಚಿಸಿದರು. ಈ ವೇಳೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನಮಗೆ ಬಿಜೆಪಿ ಎದುರಾಳಿ ಪಕ್ಷವಾಗಿದೆ. ಅದನ್ನು ಮಣಿಸಬೇಕು. ಕ್ಷೇತ್ರದಲ್ಲಿ ಜೆಡಿಎಸ್ ಇದಿಯಾ?. ಜೆಡಿಎಸ್ ನಮಗೆ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.

ಜಾತ್ಯಾತೀತ ಜನತಾ ದಳ (ಜೆಡಿಎಸ್) ಪಕ್ಷ ಸ್ಥಳೀಯ ಪಕ್ಷವಾಗಿದ್ದು, ಚುನಾವಣೆಯಲ್ಲಿ ಕನಿಷ್ಠ ಸ್ಥಾನಗಳನ್ನು ಪಡೆದುಕೊಳ್ಳುತ್ತದೆ. ಅಲ್ಲದೇ ರಾಜ್ಯದ ಹಳೇ ಮೈಸೂರು ಭಾಗ, ಬೆಂಗಳೂರಿನ ಒಂದಷ್ಟು ಕ್ಷೇತ್ರಗಳು ಮತ್ತು ಹಾಸನ ಭಾಗ ಸೇರಿದಂತೆ ಬೆರಳೆಣಿಕೆಯಷ್ಟು ಸೀಟು ಗಳಿಸಿ ಜೆಡಿಎಸ್ ತೃಪ್ತಿಪಟ್ಟುಕೊಳ್ಳುತ್ತದೆ. ಈ ಭಾಗಗಳಲ್ಲಿ ಅಷ್ಟೇ ಜೆಡಿಎಸ್ ಪ್ರಬಲ ಎದುರಾಳಿ ಪಕ್ಷವಾಗಿದೆ.
ಬಿಜೆಪಿಯನ್ನು ಓಡಿಸಬೇಕು: ಸಿದ್ದು ಮನವಿ
ಉಳಿದೆಡೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿ ಹೆಚ್ಚಿರುತ್ತದೆ. ಹೀಗಾಗಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪೈಪೋಟಿ ಒಡ್ಡುವುದು ಬಿಜೆಪಿ. ಹೀಗಾಗಿ ಸಿದ್ದರಾಮಯ್ಯನವರು ಜೆಡಿಎಸ್ ಪೈಪೋಟಿ ವಿಚಾರದಲ್ಲಿ ತಮಗೆ ಬಿಜೆಪಿ ಎದುರಾಳಿ ಎಂದು ಹೇಳಿ ಜೆಡಿಎಸ್ ಪಕ್ಷವನ್ನು ಟೀಕಿಸಿದ್ದಾರೆ.
ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ ಭ್ರಷ್ಟಾಚಾರ ಸರ್ಕಾರ ನಮಗೆ ಬೇಡ. ಬಿಜೆಪಿಯನ್ನು ಇಲ್ಲಿಂದ ಓಡಿಸಬೇಕು. ನಮ್ಮ ಅಭ್ಯರ್ಥಿ ಪರಮೇಶ್ವರನಾಯ್ಕ ಅವರಿಗೆ ರಾಜಕೀಯ ಭವಿಷ್ಯ ಇದೆ. ನಮ್ಮ ಗ್ಯಾರಂಟಿಗಳನ್ನು ಅವರು ಜನರಿಗೆ ತಲುಪಿಸುತ್ತಾರೆ. ದಯಮಾಡಿ ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಅಹಿಂದ ತಂತ್ರದಡಿ ಸಿದ್ದುಗೆ ಜೆಡಿಎಸ್ ಟಕ್ಕರ್
ಜೆಡಿಎಸ್ ಸ್ಥಳಿಯ ಪಕ್ಷವಾದರೂ ಸಹಿತ ಸಿದ್ದರಾಮಯ್ಯ ಸ್ಪರ್ಧಿಸುವ ವರುಣಾ ಕ್ಷೇತ್ರದಲ್ಲಿ ಅಹಿಂದ ಸಮಾವೇಶದ ಮೂಲಕ ಮತಯಾಚನೆಗೆ ಎಚ್‌ಡಿ ಕುಮಾರಸ್ವಾಮಿ ತಂತ್ರ ರೂಪಿಸಿದ್ದಾರೆ. ಅಹಿಂದ ಪ್ರಮುಖ ನಾಯಕ ಸಿದ್ದರಾಮಯ್ಯನವರನ್ನು ಅದೇ ವಿಚಾರವಾಗಿ ಕುಮಾರಸ್ವಾಮಿಯವರು ಕೆಣಕುತ್ತಲೆ ಬಂದಿದ್ದಾರೆ. ಸಿದ್ದರಾಮಯ್ಯನವರು ವರುಣಾ ಸ್ಪರ್ಧೆ ಫಿಕ್ಸ್ ಆಗುತ್ತಿದ್ದಂತೆ ಲಿಂಗಾಯತ ನಾಯಕರಿಗೆ ಬದಲಾಗಿ ದಲಿತ ಸಮುದಾಯದ ಮಾಜಿ ಶಾಸಕ ಭಾರತಿ ಶಂಕರ್ ಅವರನ್ನು ಕಣಕ್ಕಿಳಿಸಿದ್ದಾರೆ.
ಈ ಮೂಲಕ ಸದರಿ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಹಣಿಯಲು ಜೆಡಿಎಸ್ ಪ್ಲಾನ್ ಮಾಡಿದೆ. ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಜೊತೆಯಾಗಿ ನಡೆಸಿದ್ದ ಮೈತ್ರಿ ಸರ್ಕಾರ 17 ತಿಂಗಳ ಬಳಿಕ ಮುರಿದು ಬಿತ್ತು. ಅದರ ಬೆನ್ನಲ್ಲೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಆರೋಪ ಪ್ರತ್ಯಾರೋಪ, ಟೀಕೆ ಟಿಪ್ಪಣಿಗಳು ಇಂದಿಗೂ ಮುಂದುವರಿದಿವೆ. ಈ ಚುನಾವಣೆಯಲ್ಲಿ ಅವೆಲ್ಲವುಗಳು ಮತ್ತೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications