ರಾಯಚೂರು, ಕೊಡಗು, ವಿಜಯಪುರ, ಬೆಂಗಳೂರಿನಲ್ಲಿಂದ ವಿಜಯ ಸಂಕಲ್ಪ ಯಾತ್ರೆ

ಬೆಂಗಳೂರು

ಮಾರ್ಚ್
11:
ಮುಂದಿನ
ವಿಧಾನಸಭಾ
ಚುನಾವಣೆ
ಹಿನ್ನಲೆಯಲ್ಲಿ
ಕೇಂದ್ರ
ಮತ್ತು
ರಾಜ್ಯ
ಸರಕಾರದ
ಸಾಧನೆಗಳ
ಬಗ್ಗೆ
ಜನತೆಗೆ
ಅರಿವು
ಮೂಡಿಸಲು
'ವಿಜಯ
ಸಂಕಲ್ಪ
ಯಾತ್ರೆ-ಪ್ರಗತಿ
ಯಾತ್ರೆ'
ರಾಜ್ಯದ
ವಿವಿದೆಡೆ
ಸಾಗಿದೆ.
ದಿನ
ವಿಜಯ
ಸಂಕಲ್ಪ
ಯಾತ್ರೆಯನ್ನು
ರಾಯಚೂರು,
ಕೊಡಗು,
ವಿಜಯಪುರ
ಹಾಗೂ
ಬೆಂಗಳೂರಿನ
ನಾನಾ
ಕಡೆ
ಆಯೋಜಿಸಲಾಗಿದೆ.
ಯಾತ್ರೆಯಲ್ಲಿ
ರೋಡ್‌
ಶೋ
ಹಾಗೂ
ಸಾರ್ವಜನಿಕ
ಸಭೆ
ಮೂಲಕ
ಬಿಜೆಪಿ
ಮತದಾರರನ್ನು
ಸೆಳೆಯಲಿದೆ.

id="toptextpromo">
id='are-slot-1'
class='oiad
oi-axt
oiadv'>

href="https://kannada.oneindia.com/topic/karnataka-assembly-elections-2023">ಕರ್ನಾಟಕ

ವಿಧಾನಸಭಾ
ಚುನಾವಣೆ
ಗೆ

ದಿನಗಣನೆ
ಶುರುವಾಗಿದೆ.
href="https://kannada.oneindia.com/topic/bjp">ಬಿಜೆಪಿ,
href="https://kannada.oneindia.com/topic/congress">ಕಾಂಗ್ರೆಸ್‌
ಮತ್ತು
href="https://kannada.oneindia.com/topic/jds">ಜೆಡಿಎಸ್‌
ಪಕ್ಷಗಳು
ಚುನಾವಣೆಗೆ
ಭರ್ಜರಿ
ಸಿದ್ಧತೆ
ನಡೆಸಿವೆ.
ಎಎಪಿ,
ಕೆಆರ್‌ಪಿಪಿ
ಕೂಡ
ಕಮಾಲ್‌
ಮಾಡಲು
ತಯಾರಿ
ನಡೆಸಿದ್ದು,
ಏಪ್ರಿಲ್‌
ಅಥವಾ
ಮೇನಲ್ಲಿ
ಚುನಾವಣೆ
ನಡೆಯುವ
ಸಾಧ್ಯತೆ
ಇದೆ.

id='are-slot-2'
class='oiad
oi-axt
oiadv'>

ಸಿಂಧನೂರಿನಲ್ಲಿ ರೋಡ್‌ ಶೋ

ಸಿಂಧನೂರಿನಲ್ಲಿ ರೋಡ್‌ ಶೋ

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಇಂದು (ಮಾರ್ಚ್ 11) ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಸಿಂಧನೂರಿನಲ್ಲಿ ರೋಡ್‌ ಶೋ ಮಾಡಲು ಬಿಜೆಪಿ ಕಾರ್ಯಕರ್ತರು ಸಜ್ಜಾಗಿದ್ದಾರೆ. ರಾಯಚೂರಿನ ಮಸ್ಕಿಯಲ್ಲಿ ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ. ಇದಾದ ನಂತರ ಲಿಂಗಸೂರಿನಲ್ಲಿ ಮಧ್ಯಾಹ್ನ 2.30ಕ್ಕೆ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ.

ಪುತ್ತೂರಿನಲ್ಲಿ ಸಾರ್ವಜನಿಕ ಸಭೆ

ಪುತ್ತೂರಿನಲ್ಲಿ ಸಾರ್ವಜನಿಕ ಸಭೆ

ಇನ್ನೂ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿಂದು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಆಯೋಜಿಸಲಾಗಿದೆ. ಮಡಿಕೇರಿಯಲ್ಲಿ ಬೆಳಿಗ್ಗೆ 9ಕ್ಕೆ ರೋಡ್ ಶೋ ನಡೆಯಲಿದೆ. ಸುಳ್ಯದಲ್ಲಿ ಮಧ್ಯಾಹ್ನ 1ಕ್ಕೆ ರೋಡ್ ಶೋ ಆಯೋಜಿಸಲಾಗಿದ್ದರೆ, ಪುತ್ತೂರಿನಲ್ಲಿ ಸಂಜೆ 5ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ.

ಸಿಂಧಗಿ ಸೇರೆ ಹಲವೆಡೆ ರೋಡ್ ಶೋ

ಸಿಂಧಗಿ ಸೇರೆ ಹಲವೆಡೆ ರೋಡ್ ಶೋ

ಜೊತೆಗೆ ಐತಿಹಾಸಿಕ ನಗರಿ, ವಿಶ್ವಗುರು ಬಸವಣ್ಣನವರ ಜನ್ಮಭೂಮಿ, ಭಾಸ್ಕರಾಚಾರ್ಯರು, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಯ ನೆಲ ವಿಜಯಪುರದಲ್ಲಿ ಈ ದಿನ ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಸಿಂಧಗಿಯಲ್ಲಿ ಬೆಳಿಗ್ಗೆ 11ಕ್ಕೆ ರೋಡ್ ಶೋ ಇದ್ದರೆ, ದೇವರಹಿಪ್ಪರಗಿಯಲ್ಲಿ ಮಧ್ಯಾಹ್ನ 3ಕ್ಕೆ ರೋಡ್ ಶೋ ಆಯೋಜಿಸಲಾಗಿದೆ. ಮುದ್ದೇಬಿಹಾಳದಲ್ಲಿ ಸಂಜೆ 6 ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದೆ.

ಮಾತ್ರವಲ್ಲದೆ ಇಂದು ಬೆಂಗಳೂರಿನಲ್ಲೂ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬೆಳಿಗ್ಗೆ 9.30ಕ್ಕೆ ರೋಡ್ ಶೋ ನಡೆಯಲಿದೆ. ಮಲ್ಲೇಶ್ವರಂನಲ್ಲಿ ಮಧ್ಯಾಹ್ನ 1.30, ಮಧ್ಯಾಹ್ನ 3ಗಂಟೆಗೆ ಹೆಬ್ಬಾಳದಲ್ಲಿ ಹಾಗೂ ಸಂಜೆ 6 ಗಂಟೆಗೆ ಪುಲಿಕೇಶಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ರೋಡ್ ಶೋ ಮಾಡಲಿದ್ದಾರೆ.

ಮಾ.11ರಿಂದ 25ರ ವರೆಗೆ ದ.ಕ.ಜಿಲ್ಲೆಯಲ್ಲಿ ಯಾತ್ರೆ

ಮಾ.11ರಿಂದ 25ರ ವರೆಗೆ ದ.ಕ.ಜಿಲ್ಲೆಯಲ್ಲಿ ಯಾತ್ರೆ

'ವಿಜಯ ಸಂಕಲ್ಪ ಯಾತ್ರೆ-ಪ್ರಗತಿ ಯಾತ್ರೆ' ಮಾ.11ರಿಂದ 25ರ ವರೆಗೆ ದ.ಕ.ಜಿಲ್ಲೆಯಲ್ಲಿ ಸಂಚರಿಸಲಿದೆ.ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ವಿಜಯ ಸಂಕಲ್ಪ ಯಾತ್ರೆ ಹಾಗೂ ಪ್ರಗತಿ ಯಾತ್ರೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ನಾಯಕರಾದ ಈಶ್ವರಪ್ಪ, ಅಶೋಕ್‌, ಪ್ರಹ್ಲಾದ್‌ ಜೋಶಿ, ಜಗದೀಶ್‌ ಶೆಟ್ಟರ್‌, ಡಾ.ಅಶ್ವತ್ಥನಾರಾಯಣ್‌ ನೇತೃತ್ವದಲ್ಲಿ ನಾಲ್ಕು ವಿಭಾಗದಲ್ಲಿ ಸಂಚರಿಸಲಿರುವ ಈ ಯಾತ್ರೆಯುದ್ಧಕ್ಕೂ ರೋಡ್‌ಶೋ ಹಾಗೂ ಸಾರ್ವಜನಿಕ ಸಮಾವೇಶ, ಧಾರ್ಮಿಕ ಸ್ಥಳಗಳ ಭೇಟಿ ನೀಡಲಿದ್ದಾರೆ.

ಕಾರ್ಕಳದಲ್ಲಿ ಸಾರ್ವಜನಿಕ ಸಭೆ

ಕಾರ್ಕಳದಲ್ಲಿ ಸಾರ್ವಜನಿಕ ಸಭೆ

ದ.ಕ.ದಲ್ಲಿ ಮುಖಂಡರಾದ ಆರ್‌.ಅಶೋಕ್‌ ಮತ್ತು ಈಶ್ವರಪ್ಪ ನೇತೃತ್ವದಲ್ಲಿ ರಥಯಾತ್ರೆ ನಡೆಯಲಿದ್ದು, ಮಾ.11ರಂದು ಸುಳ್ಯದಲ್ಲಿ ಬೆಳಗ್ಗೆ 10.30ಕ್ಕೆ ರೋಡ್‌ಶೋ ಇರಲಿದೆ. ಸಂಜೆ 5 ಗಂಟೆಗೆ ಪುತ್ತೂರಿಗೆ ಯಾತ್ರೆ ಆಗಮಿಸಲಿದ್ದು, ಸಾರ್ವಜನಿಕ ಸಭೆ ನಡೆಯಲಿದೆ. ಮಾ.12 ರಂದು ಬೆಳಗ್ಗೆ 10.30ಕ್ಕೆ ಬೆಳ್ತಂಗಡಿಯಲ್ಲಿ ರೋಡ್‌ಶೋ, ಸಂಜೆ 3 ಗಂಟೆಗೆ ಬಂಟ್ವಾಳದಲ್ಲಿ ರೋಡ್‌ಶೋ, ಸಂಜೆ 5 ಗಂಟೆಗೆ ಮಂಗಳೂರು ಉತ್ತರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಾ.13ರಂದು ಬೆಳಗ್ಗೆ 10.30ಕ್ಕೆ ಮಂಗಳೂರು(ಉಳ್ಳಾಲ)ದಲ್ಲಿ ರೋಡ್‌ಶೋ, ಸಂಜೆ 3 ಗಂಟೆಗೆ ಮೂಡುಬಿದಿರೆಯಲ್ಲಿ ರೋಡ್‌ಶೋ ಬಳಿಕ ಸಂಜೆ 5 ಗಂಟೆಗೆ ಕಾರ್ಕಳದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಮಾ.17ರಂದು ಮಂಗಳೂರು ಉತ್ತರದಲ್ಲಿಎಸ್‌ಸಿ ಮೋರ್ಚಾ ಹಾಗೂ ಮಹಿಳಾ ಸಮಾವೇಶ, 18ರಂದು ಬಂಟ್ವಾಳದಲ್ಲಿ ರೈತ ಸಮಾವೇಶ, 19 ರಂದು ಸುಳ್ಯದಲ್ಲಿ ಮಹಿಳಾ ಸಮಾವೇಶ, ಮೂಡುಬಿದಿರೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ, 20ರಂದು ಮಂಗಳೂರು (ಉಳ್ಳಾಲ)ದಲ್ಲಿ ಯುವ ಸಮಾವೇಶ, ಬೆಳ್ತಂಗಡಿಯಲ್ಲಿಎಸ್‌ಸಿ ಸಮಾವೇಶ ಏರ್ಪಡಿಸಲಾಗಿದೆ. ಮಾ.23ರಂದು ಹಿಂದುಳಿದ ವರ್ಗ, ಎಸ್‌ಸಿ ಮೋರ್ಚಾ ಸಮಾವೇಶ ನಡೆಯಲಿದೆ. ಮಾ.16ರಂದು ಮಂಗಳೂರಿನಲ್ಲಿ ಬೆಳಗ್ಗೆ ನಾನಾ ಯೋಜನೆಗಳ ಫಲಾನುಭವಿಗಳ ಸಮಾವೇಶ ಏರ್ಪಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+