ಶಾಸಕ ಯತ್ನಾಳ್ ಕೊಲೆಗೆ ಸಂಚು: ಆಡಿಯೋ ವೈರಲ್ ಬೆನ್ನಲ್ಲೇ ವಿಡಿಯೋ ವೈರಲ್
ವಿಜಯಪುರ, ಏಪ್ರಿಲ್ 12: ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಹಾಗೂ ಸ್ವಪಕ್ಷದವರ ವಿರುದ್ಧ ತೀವ್ರ ವಾಗ್ದಾಳೀ ನಡೆಸಿದ್ದ ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನ ಬಿಜೆಪಿ ಹೈಡಮಾಂಡ್ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಉಚ್ಚಾಟನೆ ಬಳಿಕ ಸೈಲೆಂಟ್ ಆಗದ ಯತ್ಬಾಳ್ ಅವರ ವಿರುದ್ಧ ಕೊಲೆ ಸಂಚು ರೂಪಿಸಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಆಡಿಯೋ ವೈರಲ್ ಆದ ಬಳಿಕ ಇದೀಗ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿದ ಹಿನ್ನೆಲೆ, ಶಾಸಕನ ಹತ್ಯೆಗೆ ಸಂಚು ನಡೆದಿತ್ತು ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಯುವಕನ ಆಡಿಯೋದಲ್ಲಿ ನಡೆದ ಸಂಭಾಷಣೆ ಪುಷ್ಟಿ ನೀಡಿದೆ. ಇದೀಗ ಯತ್ನಾಳ್ ಅವರ ಹತ್ಯೆಗೆ ಸಂಚು ರೂಪಿಸಿರುವ ಕುರಿತು ವಿಡಿಯೋ ಒಂದು ವೈರಲ್ ಆಗುತ್ತದೆ.

ವಿಜಯಪುರ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ಹತ್ಯೆ ಸ್ಕೆಚ್ ಆಡಿಯೋ ವೈರಲ್ ಆದ ಬೆನ್ನಲ್ಲೆ ಮತ್ತೊಂದು ಸ್ಫೋಟಕ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್‌ಸ್ಟಾಗ್ರಾಮ್ ನಲ್ಲೆ ಯತ್ನಾಳ್ ವಿರುದ್ಧ ಗಲಭೆಯ ಷಡ್ಯಂತ್ರ ರೂಪಿಸಲಾಗಿದೆ ಎಂದು ಕೇಳಿ ಬಂದಿದ್ದು, ದೊಡ್ಡ ಮಟ್ಟದ ಗಲಭೆಗೆ ಪ್ಲಾನ್ ನಡೆದಿತ್ತು ಅನ್ನೋದಕ್ಕೆ ಮತ್ತೊಂದು ವಿಡಿಯೋ ಬಯಲಾಗಿದೆ. ನಿನ್ನೆಯಷ್ಟೆ ಡಿಜೆ-ಕೆಜಿ ಹಳ್ಳಿ ಮಾದರಿಯಲ್ಲಿ ಗಲಭೆ, ಯತ್ನಾಳ್ ಹತ್ಯೆಗೆ ಸಂಚಿನ ಆಡಿಯೋ ವೈರಲ್ ಆಗಿ ಸಂಚಲನ ಮೂಡಿಸಿತ್ತು. ಸದ್ಯ ವಿಡಿಯೋ ಮೂಲಕವೇ ಹೋರಾಟದ ದಿಕ್ಕು ತಪ್ಪಿಸೋಕೆ ನಡೆದಿದ್ದ ಪ್ಲಾನ್ ಬಹಿರಂಗವಾಗಿದೆ.
ವಿಜಯಪುರದ ಮತ್ತೊಬ್ಬ ಯುವಕನಿಂದ ವಿಡಿಯೋ ಮಾಡಲಾಗಿದೆ. ಶಾಸಕ ಬಸವನಗೌಡ ಪಾಟೀಲ್ಯತ್ನಾಳ್ ವಿರುದ್ಧ ಹೋರಾಟಕ್ಕೆ ಸೇರಿ, ಗುಸ್ತಾಕಿ ನಬಿ ಕಾ ಏಕ್ ಹೀ ಸಜಾ ಸರ್ ತನ್ ಸೆ ಜುದಾ ಎಂದು ವಿಡಿಯೋ ಮಾಡಿದ್ದಾನೆ. ವಿಜಯಪುರ ನಗರದ ಸೊಹೇಲ್ ಜರ್ತಾರ್ ಎಂಬಾತನಿಂದ ವಿಡಿಯೋ ಮಾಡಲಾಗಿದ್ದು, ಬಿಜಾಪುರ ಪೌಂಡೇಶನ್ ಹೆಸರಿನ ಇನ್‌ಸ್ಟಾಗ್ರಾಮ್ ನಲ್ಲಿ ಖಾತೆಯಲ್ಲಿ ಅದನ್ನು ಅಪ್ಲೋಡ್ ಮಾಡಿದ್ದಾನೆ.
ನಮ್ಮ ಪ್ರವಾದಿಯನ್ನ ಟೀಕಿಸಿದನ್ನ ನಾವು ಸಹಿಸಿಕೊಳ್ಳಬಾರದು. ಎಲ್ಲ ಮುಸ್ಲಿಂರು ಒಗ್ಗಟ್ಟಾಗಬೇಕು. ಧರ್ಮಕ್ಕಾಗಿ ಎಲ್ಲರೂ ಒಂದಾಗಬೇಕು. ನಮ್ಮ ಹೋರಾಟ ಯತ್ನಾಳ್ ಎನ್ನುವ ಹುಳದ ವಿರುದ್ಧ ಎಂದು ಕಿಡಿಕಾರಿದ್ದಾನೆ.
ಪ್ರವಾದಿಗಾಗಿ ನಮ್ಮ ಪ್ರಾಣ ಬಲಿಗಾಗಿ ಸಿದ್ಧವಿದ್ದೇವೆ. ವಿಡಿಯೋ ಕೊನೆಗೆ ಪ್ರವಾದಿ ವಿರುದ್ಧ ಮಾತನಾಡುವವನಿಗೆ ಒಂದೇ ಶಿಕ್ಷೆ ತಲೆ ಕತ್ತರಿಸೋದು ಎಂದು ಹೇಳಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಸದ್ಯ ಯತ್ನಾಳ್ ಹತ್ಯೆಯ ಸಂಚಿನ ಕುರಿತು ಆಡಿಯೋ ಮತ್ತು ವಿಡಿಯೋನಿಂದಾಗಿ ವಿಜಯಪುರ ಜನತೆ ಆತಂಕಕ್ಕೀಡಾಗಿದ್ದಾರೆ.
ಆಡಿಯೋ ಸಂಭಾಷಣೆಯಲ್ಲಿ ಏನಿದೆ?
ಗೆಳೆಯರೇ.. ನಮಸ್ಕಾರ ಎಲ್ಲ ಸಹೋದರ, ಸಹೋದರಿಯರಿಗೆ ನಮಸ್ಕಾರ. ವಿಜಯಪುರದಲ್ಲಿಂದ ದೊಡ್ಡ ಮೀಟಿಂಗ್ ಕರೆಯಲಾಗಿತ್ತು. ನಗರದ ಆಲಂಗೀರ್ ಹಾಲ್‌ನಲ್ಲಿ ಎಂಎಂಸಿ ಮೀಟಿಂಗ್‌ನಲ್ಲಿ ವಿಜಯಪುರದ ಎಲ್ಲ ದಿಗ್ಗಜ ಸದಸ್ಯರು, ಉಲ್ಮಾಗಳು ಅಲ್ಲಿ ಇದ್ರೂ. ಅಲ್ಲಿ ಇದೇ ತಿಂಗಳ ಏ.15 ರಂದು ವಿಜಯಪುರ ಬಂದ್ ಮಾಡಲು ನಿರ್ಧಾರ ಆಗಿದೆ. ಇನ್ನು ಯತ್ನಾಳ್‌ಗೆ ಅದು ಫೈನಲ್ ದಿನ. ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಯತ್ನಾಳ್. ಇದನ್ನ ವಿರೋಧಿಸಿ 1 ಲಕ್ಷ ಜನರು ರ‍್ಯಾಲಿಯಲ್ಲಿ ಸೇರುತ್ತಿದ್ದಾರೆ. ಈ ಬಾರಿ ಎಲ್ಲರು ನಿರ್ಧರಿಸಿದ್ದಾರೆ ಅವನದ್ದು ಕೊನೆಯ ದಿನ ಅಂತಾ. ಅವನು ಅರೆಸ್ಟ್ ಆಗಬೇಕು ಇಲ್ಲ, ರ‍್ಯಾಲಿ ಅವನ ಮನೆಗೆ ತೆರಳಬೇಕು, ರ‍್ಯಾಲಿ ಅಲ್ಲಿಂದ ಅವನ ಮನೆಗೆ ನೇರವಾಗಿ ಹೋಗುತ್ತೆ. ಆದ್ದರಿಂದ ಎಲ್ಲ ಸಹೋದರ, ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಏ.15ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕು, ನಿಮ್ಮ ಅಕ್ಕ-ಪಕ್ಕದ ಊರುಗಳಲ್ಲಿರುವ ಎಲ್ಲ ಸ್ನೇಹಿತರು, ಅಣ್ಣ-ತಮ್ಮಂದಿರಿಗೆ ವಿಷಯ ಹೇಳಿ.
ಈ ಬಾರಿ ಅವನದ್ದು ಫೈನಲ್ ದಿನ ಇದೆ. ಇಲ್ಲಿವರೆಗೂ ಅವನ ವಿರುದ್ಧ ದೂರು ಕೊಡುತ್ತಿದ್ದೆವು. ಆದ್ರೆ ಏನಾಗುತ್ತಿತ್ತು ಅವನು ಬೇಲ್ ಮೇಲೆ ಹೊರಗಡೆ ಬರ್ತಾ ಇದ್ದ. ಈ ಬಾರಿ ಆ ರೀತಿ ಆಗಲ್ಲ. ಈ ಬಾರಿ ಅವನು ಅರೆಸ್ಟ್ ಆಗಬೇಕು, ಇಲ್ಲ ಅವನ ರುಂಡ ದೇಹದಿಂದ ಇಬ್ಭಾಗ ಆಗಬೇಕು. ಮುಸ್ಲಿಂ ಸದಸ್ಯರು ಎಲ್ಲರೂ ಸಿದ್ಧರಾಗಿ ಕುಳಿತಿದ್ದಾರೆ. ಏ.15ರಂದು ಯಾವುದೇ ಕೆಲಸ ಇದ್ದರೂ ರಜೆ ಮಾಡಿ, ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆ ಆಗಿ. ಇನ್ ಷಾ ಅಲ್ಲಾ.. ಎಲ್ಲರು ಅಲ್ಲೇ ಸಿಗೋಣ ಎಂದು ಆಡಿಯೋನಲ್ಲಿ ಹೇಳಿದ್ದಾನೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications