ಬಸ್ ಪ್ರಯಾಣಿಕರೇ ಗಮನಿಸಿ: ವಿಶೇಷ ಬಸ್‌ಗಳ ಓಡಾಟದ ಮಾಹಿತಿ ಇಲ್ಲಿದೆ!
ಬಸವ ಜಯಂತಿ ಹಿನ್ನೆಲೆ & ರಜೆ, ಮದುವೆ, ಮತ್ತಿತರ ಶುಭ ಕಾರ್ಯಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಮೇ 10 ರಿಂದ 12 ರವರೆಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಬಸ್ ವ್ಯವಸ್ಥೆ ಕುರಿತು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ. ಹಾಗಾದರೆ ಯಾವ ಯಾವ ಜಿಲ್ಲೆಗಳಿಗೆ ಈ ಸ್ಪೆಷಲ್ ಬಸ್ ಓಡಾಡಲಿವೆ ಗೊತ್ತಾ? ಮುಂದೆ ಓದಿ.
ಮೇ 10 ರಂದು ಶುಕ್ರವಾರ ಬಸವ ಜಯಂತಿ & ಅಕ್ಷಯ ತೃತೀಯ, 11 ರಂದು ಎರಡನೇ ಶನಿವಾರ ಹಾಗೂ 12 ರಂದು ರವಿವಾರ ಸಾರ್ವಜನಿಕ ರಜೆ ಇರುತ್ತದೆ.ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ಸೇರಿ ಗೃಹ ಪ್ರವೇಶ ಮತ್ತಿತರ ಶುಭಕಾರ್ಯಗಳು ನಡೆಯಲಿವೆ. ಈ ಕಾರಣಕ್ಕಾಗಿ, ಇದೇ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ ನಿರೀಕ್ಷಿಸಲಾಗಿದೆ. ಹೀಗೆ ಪ್ರಯಾಣಿಕರ ಅನುಕೂಲಕ್ಕೆ ಮೇ10ರಿಂದ 12ರವರೆಗೆ ಜಿಲ್ಲೆಯೊಳಗೆ ವಿವಿಧ ಸ್ಥಳಗಳು & ಅಕ್ಕಪಕ್ಕದ ಜಿಲ್ಲೆಗಳ ನಡುವೆಯೂ ಪ್ರಯಾಣಿಕರ ಹೆಚ್ಚಳಕ್ಕೆ ತಕ್ಕಂತೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಹೊರ ರಾಜ್ಯಗಳಿಗೂ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರು, ಪುಣೆ, ಗೋವಾ...
ಅದೇ ರೀತಿ ರಜೆ ಮುಗಿಸಿಕೊಂಡು ತಮ್ಮ ಕಾರ್ಯ ಕ್ಷೇತ್ರಗಳಿಗೆ ಹಿಂದಿರುಗುವವರ ಅನುಕೂಲಕ್ಕಾಗಿ, ಮೇ 12 ರಂದು ಭಾನುವಾರ ಹುಬ್ಬಳ್ಳಿಯಿಂದ ಬೆಂಗಳೂರು, ಪುಣೆ, ಗೋವಾ, ಮಂಗಳೂರು, ವಿಜಯಪುರ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ವಿಶೇಷ ಬಸ್ಸುಗಳನ್ನು ಓಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ ಅಧಿಕಾರಿಗಳು. ಹಾಗೇ ಇದರ ಜೊತೆಗೆ ಮುಂಗಡ ಬುಕಿಂಗ್ ಮಾಡಲು ರಿಯಾಯಿತಿ ಘೋಷಣೆ ಮಾಡಲಾಗಿದೆ.
ಸಾರಿಗೆ ವೆಬ್‌ಸೈಟ್ ವಿಳಾಸ
https://www.ksrtc.in ಅಥವಾ KSRTC Mobile App & ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದೇ ಟಿಕೆಟ್ ಅಡಿಯಲ್ಲಿ 4 ಅಥವಾ ಹೆಚ್ಚಿನ ಸೀಟು ಕಾಯ್ದಿರಿಸಿದ್ರೆ ಪ್ರಯಾಣ ದರದಲ್ಲಿ ಶೇಕಡಾ 5 ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು. ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.












Click it and Unblock the Notifications