ಬಸ್ ಪ್ರಯಾಣಿಕರೇ ಗಮನಿಸಿ: ‘ವೇಗದೂತ’ ಪ್ರಯಾಣಿಕರಿಗೆ ಸಂತಸದ ಸುದ್ದಿ!
ಹುಬ್ಬಳ್ಳಿ: ನೆರೆಯ ಜಿಲ್ಲೆಗಳೂ ಸೇರಿದಂತೆ, ಕಡಿಮೆ ದೂರದ ಸ್ಥಳಕ್ಕೆ ಪ್ರಯಾಣ ಮಾಡುವಂತಹ ಸಾರ್ವಜನಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಪ್ರಯಾಣಿಕರು ಮತ್ತಷ್ಟು ಆರಾಮದಾಯಕವಾದ ಪ್ರಯಾಣ ಸೌಲಭ್ಯ ಪಡೆಯಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಹತ್ವದ ಯೋಜನೆ ರೂಪಿಸಿದೆ. ಹಾಗಾದರೆ ಏನದು ಸೌಲಭ್ಯ? ಬನ್ನಿ ತಿಳಿಯೋಣ.
ಹೌದು, ಕಡಿಮೆ ದೂರದ ವೇಗದೂತ ಸಾರಿಗೆ ಬಸ್ಸುಗಳಿಗೆ ಪ್ರಾಯೋಗಿಕ ಮುಂಗಡ ಬುಕ್ಕಿಂಗ್‌ನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಪ್ರತಿಷ್ಠಿತ ಸಾರಿಗೆಗಳು ಸೇರಿ ದೂರ ಮಾರ್ಗದ ವೇಗದೂತ ಸಾರಿಗೆ ಬಸ್ಸುಗಳಿಗೆ ಮುಂಗಡ ಬುಕಿಂಗ್ ವ್ಯವಸ್ಥೆ ಇರುತ್ತದೆ. ಅದೇ ರೀತಿ ಅಕ್ಕ ಪಕ್ಕದ ಜಿಲ್ಲೆಗಳು ಸೇರಿದಂತೆ, ಕಡಿಮೆ ದೂರದ ವೇಗದೂತ ಸಾರಿಗೆ ಬಸ್ಸುಗಳಿಗು ಈ ರೀತಿ ಮುಂಗಡ ಬುಕಿಂಗ್ ವ್ಯವಸ್ಥೆ ಕಲ್ಪಿಸಿದಲ್ಲಿ ಮುಂಚಿತ ಯೋಜನೆ ಹಾಕಿಕೊಂಡು ಆರಾಮವಾಗಿ ಪ್ರಯಾಣ ಮಾಡಲು ಸಾಧ್ಯ ಎನ್ನಲಾಗಿದೆ.

ಪ್ರಯಾಣಿಕರಿಂದ ಡಿಮ್ಯಾಂಡಪ್ಪೋ ಡಿಮ್ಯಾಂಡ್!
ಹೀಗೆ ಸಾರ್ವಜನಿಕರಿಂದ ಬೇಡಿಕೆ ಬರುತ್ತಿವೆ. ಈ ಹಿನ್ನೆಲೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಡಿಮೆ ದೂರದ ವೇಗದೂತ ಸಾರಿಗೆ ಬಸ್ಸುಗಳಿಗೆ ಕೂಡ ಮುಂಗಡ ಬುಕಿಂಗ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗಿದೆ. ಹೀಗಾಗಿ, ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಹುಬ್ಬಳ್ಳಿ & ವಿಜಯಪುರ ನಡುವೆ ಸಂಚರಿಸುವ ವೇಗದೂತ ಸಾರಿಗೆಯ ಬಸ್ಸುಗಳಿಗೆ ಮುಂಗಡ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹುಬ್ಬಳಿ TO ವಿಜಯಪುರ
ಹುಬ್ಬಳಿಯಿಂದ ವಿಜಯಪುರಕ್ಕೆ ಹೋಗುವ ಬಸ್ಸುಗಳು ಹೊಸೂರು ಪ್ರಾದೇಶಿಕ ನಿಲ್ದಾಣದಿಂದ ಹೊರಡುತ್ತವೆ. ಬೆಳಗ್ಗೆ 7:20, 7:40, 8:01, 8:30, 9:00, 10:00, ಸಂಜೆ 6:16, 6:30 ಹಾಗೂ ರಾತ್ರಿ 8:30ಕ್ಕೆ ಸಂಚಾರ ಮಾಡಲಿವೆ.
ವಿಜಯಪುರ TO ಹುಬ್ಬಳಿ
ವಿಜಯಪುರದಿಂದ ಹುಬ್ಬಳ್ಳಿಗೆ ಬರುವ ಬಸ್ಸುಗಳ ಸಮಯ, ಬೆಳಗ್ಗೆ 2:35, 5:45, ಮಧ್ಯಾಹ್ನ 12:50, 13:30, 13:40, ಸಂಜೆ 14:10, 14:30, 15:40, 16:15

ಈ ಬಸ್ಸುಗಳಿಗೆ www.ksrtc.in & KSRTC Mobile App ಮೂಲಕ ಅಥವಾ ಬಸ್ ನಿಲ್ದಾಣಗಳ ಬುಕ್ಕಿಂಗ್ ಕೌಂಟರ್ & ಫ್ರಾಂಚೈಸಿ ಕೌಂಟರ್‌ನಲ್ಲಿ ಮುಂಗಡ ಟಿಕೆಟ್‌ಗಳನ್ನು ಪಡೆಯಬಹುದು. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಇನ್ನುಳಿದ ಮಾರ್ಗಕ್ಕೆ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುತ್ತೆ, ಎಂದು ಮಾಹಿತಿ ನೀಡಲಾಗಿದೆ.
ಜಾತ್ರಾ ವಿಶೇಷ ಬಸ್ ವ್ಯವಸ್ಥೆ
ಕೋಟ್ಯಂತರ ಭಕ್ತರ ಶಕ್ತಿ ಕ್ಷೇತ್ರ ಸೌದತ್ತಿ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ವಿಶೇಷವಾಗಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೆಯೆ ಬದಾಮಿ ಬನಶಂಕರಿ ದೇವಿ ಜಾತ್ರೆಯೂ ಹತ್ತಿರದಲ್ಲಿ ಇದೆ. ಇದೇ ಸಮಯದಲ್ಲಿ ಗುಡ್ ನ್ಯೂಸ್ ಸಿಕ್ಕಿದೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಜನವರಿ 23 ರಿಂದ 30ರವರೆಗೂ ಹುಬ್ಬಳ್ಳಿ & ನವಲಗುಂದದಿಂದ ಜಾತ್ರಾ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
100ಕ್ಕೂ ಹೆಚ್ಚು ಚಾಲಕರ ನಿಯೋಜನೆ
ಇದಕ್ಕೆ ಹುಬ್ಬಳ್ಳಿಯಿಂದ 25 & ನವಲಗುಂದದಿಂದ 10 ಬಸ್ಸುಗಳು 100ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು, ಮೇಲ್ವಿಚಾರಣೆಗೆ 10 ಅಧಿಕಾರಿಗಳು, 20 ಮೇಲ್ವಿಚಾರಕ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರ ಒತ್ತಡಕ್ಕೆ ತಕ್ಕಂತೆ ಬಸ್ಸುಗಳ ಹೆಚ್ಚಿಸಲಾಗುತ್ತದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಮಾಹಿತಿ ನೀಡಿದ್ದಾರೆ. ಹೀಗೆ ಹುಬ್ಬಳ್ಳಿಯಿಂದ ಜಾತ್ರಾ ವಿಶೇಷ ಬಸ್ಸುಗಳು ಹೊಸೂರು ನಿಲ್ದಾಣದಿಂದ ಹೊರಡುತ್ತವೆ.
ಹುಬ್ಬಳ್ಳಿ TO ಯಲ್ಲಮ್ಮನ ಗುಡ್ಡ
ಈ ಬಸ್ಸುಗಳು ಧಾರವಾಡ, ಸೌದತ್ತಿ ಮಾರ್ಗವಾಗಿ ಯಲ್ಲಮ್ಮನ ಗುಡ್ಡಕ್ಕೆ ಸಂಚಾರ ಮಾಡಲಿವೆ.
ಹುಬ್ಬಳ್ಳಿ TO ಬನಶಂಕರಿ
ಈ ಮಾರ್ಗದ ಬಸ್ಸುಗಳು ನವಲಗುಂದ, ನರಗುಂದ, ಕೊಣ್ಣೂರು & ಕುಳಗೇರಿ ಸೇರಿ ಬಾದಾಮಿ ಮಾರ್ಗವಾಗಿ ಸಂಚರಿಸುತ್ತವೆ ಅಂತಾ ತಿಳಿಸಲಾಗಿದೆ.
ನವಲಗುಂದ TO ಯಲ್ಲಮ್ಮನ ಗುಡ್ಡ
ಈ ಬಸ್ಸುಗಳು ನವಲಗುಂದ ಬಸ್ ನಿಲ್ದಾಣ ಮಾರ್ಗವಾಗಿ ಹೊರಡುತ್ತವೆ. ಹೀಗೆ ಗೊಬ್ಬರ ಗುಂಪಿ ಕ್ರಾಸ್, ಅಳಗವಾಡಿ ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ ಅಂತಾ ಮಾಹಿತಿ ನೀಡಲಾಗಿದೆ.












Click it and Unblock the Notifications