ವೀರಶೈವ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಅರ್ಜಿ ಆಹ್ವಾನ

ಬೆಂಗಳೂರು, ಜೂ.23: ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಯುವ ವೇದಿಕೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ. ರಾಜ್ಯದ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಅನೇಕ ಶರಣರ ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. 2015 - 2016 ನೇ ಸಾಲಿನ ವಿದ್ಯಾರ್ಥಿವೇತನ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಶರಣ ಬಿ.ಎಸ್ ಯಡಿಯೂರಪ್ಪ, ಶರಣ ವಿಜಯ ಸಂಕೇಶ್ವರ್, ಶರಣ ಜಿ ಎಂ ಸಿದ್ದೇಶ್ವರ್, ಶರಣ ಅಶೋಕ್ ಖೇಣಿ, ಶರಣ ಮುರುಗೇಶ್ ನಿರಾಣಿ, ಶರಣ ಜಗದೀಶ್ ಶೆಟ್ಟರ್, ಶರಣ ಪ್ರಭಾಕರ್ ಕೋರೆ ಸಮಾಜದ ಗಣ್ಯರುಗಳಾಗಿರುವ ಇವರ ಸಾಧನೆ ಅತ್ಯಮೂಲ್ಯವಾದ ಕಾರಣ ಸಮಾಜ ಸೇವಕರಾಗಿರುವ ಇವರ ಹೆಸರಿನಲ್ಲಿ ವಿದ್ಯಾರ್ಥಿವೇತನವನ್ನು ಕಳೆದ ಕೆಲ ವರುಷಗಳಿಂದ ನೀಡಿಕೊಂಡು ಬಂದಿದೆ. [ರಾಜ್ಯದಲ್ಲೇ ಪ್ರಥಮ, ಮಠಾಧೀಶರಿಗಾಗಿ ವಿಶ್ರಾಂತಿ ಗೃಹ]

Veerashaiva Lingayat Yuva Vedike Scholarship

ವೀರಶೈವ ಲಿಂಗಾಯತ ಯುವ ವೇದಿಕೆಯೂ ಈ ವರ್ಷವು ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಿದ್ದು ಇದೇ ಜೂನ್ 18 ರಿಂದ ವಿದ್ಯಾರ್ಥಿವೇತನದ ಅವಶ್ಯಕತೆಯಿರುವಂತಹ ವಿದ್ಯಾರ್ಥಿಗಳು www.vlyvedike.org ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಭರ್ತಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 080-6455 5554 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ವೀರಶೈವ ಲಿಂಗಾಯತ ಯುವ ವೇದಿಕೆ ಸತತ ಒಂದೂವರೆ ವರ್ಷಗಳಿಂದ ವಿನೂತನ, ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆ ಮನ ತಲುಪುವುದರ ಜೊತೆಯಲ್ಲಿ ಅರಿವು - ಸಂಘಟನೆ - ಕ್ರಾಂತಿ ಮೂಡಿಸುವಲ್ಲಿ ಮುನ್ನಡೆಯುತ್ತಿದೆ. ಈಗ ಬಡ ವಿದ್ಯಾರ್ಥಿಗಳಿಗೆ ನೆರವಾಗಲು ವಿದ್ಯಾರ್ಥಿ ವೇತನ ಯೋಜನೆ ಹಮ್ಮಿಕೊಂಡಿದೆ. [ವೇದಿಕೆ ಫೇಸ್ ಬುಕ್]

ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ ತಲಾ 10,000/- ರೂಪಾಯಿಗಳಿಂದ ದಿಂದ 60,000/- ರೂಪಾಯಿಗಳವರೆಗೂ ವಿದ್ಯಾರ್ಥಿವೇತನವನ್ನು ನೀಡಲಿದೆ ಎಂದು ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಪ್ರದಾನ ಕಾರ್ಯದರ್ಶಿ ಕವನ ಬಸವಕುಮಾರ್ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+