Vande Bharat Express: ಬೆಂಗಳೂರು-ಶಿವಮೊಗ್ಗ ಮಧ್ಯ ಹೊಸ ವಂದೇ ಭಾರತ್ ರೈಲು ಸೇವೆ, ಅಪ್ಡೇಟ್ಸ್

ಬೆಂಗಳೂರು, ಜುಲೈ 12: ಮಲೆನಾಡಿನ ಜನರಿಗೆ ಇತ್ತೀಚೆಗೆ ರೈಲ್ವೆ ಸಚಿವ ವಿ.ಸೋಮಣ್ಣ ಅವರು ಖುಷಿ ಸುದ್ದಿ ನೀಡಿದ್ದರು. ಚಿಕ್ಕಮಗಳೂರು-ತಿರುಪತಿಗೆ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದರ ಬೆನ್ನಲ್ಲೆ ಬೆಂಗಳೂರಿನಿಂದ 300 ಕಿಲೋ ಮೀಟರ್ ದೂರದ ಶಿವಮೊಗ್ಗಕ್ಕೆ ಐಶಾರಾಮಿ ಪ್ರಯಾಣ ಸೇವೆ ನೀಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭವಾಗಲಿದೆ. ಈ ಕುರಿತು ಸಂಸದ ಪಿಸಿ ಮೋಹನ್ ಅವರು ಖದ್ದು ಮಾಹಿತಿ ನೀಡಿದ್ದಾರೆ.

ದಕ್ಷಣ ಕರ್ನಾಟಕದ ಬೆಂಗಳೂರು ಹಾಗೂ ಪಶ್ಚಿಮ ಘಟ್ಟಗಳ ಸಾಲಿಗೆ ಬರುವ ಮಧ್ಯ ಕರ್ನಾಟಕ ವ್ಯಾಪ್ತಿಯ ಶಿವಮೊಗ್ಗ ಜಿಲ್ಲೆಗೆ ರೈಲು ಸಂಪರ್ಕ ಸಾಧ್ಯವಾಗುತ್ತಿದೆ. ಬೆಂಗಳೂರು-ಶಿವಮೊಗ್ಗ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಗೆ ಪ್ಲಾನ್ ಮಾಡಲಾಗಿದೆ. ಇದು ಎರಡು ಭಾಗದ ಉದ್ಯೋಗಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲರಿಗೂ ಸಹಾಯವಾಗಲಿದೆ. ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ಒದಗಿಸುತ್ತದೆ.

Vande Bharat Express Train inbetween Bengaluru and Shivamogga Updates

ಬೆಂಗಳೂರು-ಶಿವಮೊಗ್ಗ ಕರ್ನಾಟಕಸ 12ನೇ ವಂದೇ ಭಾರತ್ ರೈಲು ಆಗಲಿದೆ. ಶೀಘ್ರವೇ 'ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ರೈಲು ಸೇವೆ' ನೀಡಲಿದೆ ಎಂದು ಪಿಸಿ ಮೋಹನ್ ಅವರು ತಿಳಿಸಿದ್ದಾರೆ. ಯಾವಾಗ ಆರಂಭ, ಸೇವೆಗೆ ಗ್ರೀನ್ ಸಿಗ್ನಲ್, ವೇಳಾಪಟ್ಟಿ, ನಿಲುಗಡೆ ನಿಲ್ದಾಣ ಬಗ್ಗೆ ಇನ್ನೂ ಮಾಹಿತಿ ಹೊರ ಬಿದ್ದಿಲ್ಲ. ಬಹುನಿರೀಕ್ಷೆಯ ಸೇವೆ ಶೀಘ್ರವೇ ಆರಂಭವಾಗುವುದು ಖಚಿತವಾಗಿದೆ.

ಮಲೆನಾಡಿನ ಜನರ ಬೇಡಿಕೆ ಈಡೇರಿಕೆ

ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು 2023 ರಲ್ಲಿ ಉದ್ಘಾಟಿಸಿದ್ದರು. ಅದಾದ ಬಳಿಕ ಇಲ್ಲಿಗೆ ಸಂಪರ್ಕಿಸುವ ಸಾರಿಗೆ ಸೌಕರ್ಯ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದಿದ್ದವು. ಆಗಲೇ ಶಿವಮೊಗ್ಗದ ಜನರು ಬೆಂಗಳೂರಿಗೆ ಇಲ್ಲಿಂದ ವಂದೇ ಭಾರತ್ ಸಂಪರ್ಕಕ್ಕೆ ಅವಕಾಶ ಕಲ್ಪಿಸುವಂತೆ ಬೇಡಿ ಇಟ್ಟಿದ್ದರು. ಇದು ಸಾಧ್ಯವಾಗುವ ಕಾಲ ಹತ್ತಿರ ಬಂದಿದೆ. ಉತ್ತಮ, ವೇಗದ ಸಾರಿಗೆ ಸೇವೆ ಈ ಎರಡು ಜಿಲ್ಲೆಗಳ ಮಧ್ಯೆ ಆಗಲಿದೆ.

ಬೆಂಗಳೂರು-ಬೆಳಗಾವಿ ವಂದೇ ಭಾರತ್

ಕರ್ನಾಟಕದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಜಾಲ ವಿಸ್ತರಣೆ ಆಗುತ್ತಿದೆ. ಈಗಾಗಲೇ ಬೆಂಗಳೂರು-ಧಾರವಾಡ, ಬೆಂಗಳೂರು ಕಲಬುರಗಿ ರೈಲು ಸೇವೆ ಇದೆ. ಇದರೊಂದಿಗೆ ಚೆನ್ನೈ-ಬೆಂಗಳೂರು-ಮೈಸೂರು, ಪುಣೆ-ಹುಬ್ಬಳ್ಳಿ, ಕೊಯಮತ್ತೂರು, ಎರ್ನಾಕುಲಂ ಸೇರಿದಂತೆ ವಿವಿಧ ರೈಲುಗಳು ಕರ್ನಾಟಕದಲ್ಲಿ ಹಾದು ಹೋಗಲಿವೆ. ಇತ್ತೀಚೆಗೆ ಬೆಂಗಳೂರು-ಬೆಳಗಾವಿ ವರೆಗೆ ಮತ್ತೊಂದು ರೈಲು ಘೋಷಣೆ ಆಗಿತ್ತು. ಆದರೆ ಅದರ ವೇಳಾಪಟ್ಟಿ, ಸಮಯ, ಉದ್ಘಾಟನೆ ದಿನಾಂಕ ನಿಗದಿ ಆಗಿಲ್ಲ. ಇದು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಕ್ಕೆ ಮತ್ತಷ್ಟು ಉತ್ತಮ ಸಾರಿಗೆ ಸಂಪರ್ಕ ಕೊಂಡಿಯಾಗಿ ಸೇವೆ ನೀಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+