Vande Bharat Express: ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ- ಯಾವಾಗ ತಿಳಿಯಿರಿ

ಬೆಂಗಳೂರು, ಏಪ್ರಿಲ್‌ 29: ಕರ್ನಾಟಕದ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾದ ಧಾರವಾಡ- ಬೆಂಗಳೂರು ರೈಲು ಮಾರ್ಗದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವರ್ಷದ ಜೂನ್ ವೇಳೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು- ಧಾರವಾಡ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆ ಇದೆ. ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ಮೊದಲು ಮೇ ಮೊದಲ ವಾರದಲ್ಲಿ ಧಾರವಾಡ ಮತ್ತು ಬೆಂಗಳೂರು ನಡುವೆ ಪ್ರಾಯೋಗಿಕ ಸಂಚಾರ ನಡೆಸಲು ರೈಲ್ವೆ ಅಧಿಕಾರಿಗಳು ಸಜ್ಜಾಗಿದ್ದಾರೆ.

Vande Bharat Express: Dharwad-Bangalore Train Operation- Know When

ನೈಋತ್ಯ ರೈಲ್ವೆಯು ಪ್ರಸ್ತುತ ಧಾರವಾಡ ಮತ್ತು ಹುಬ್ಬಳ್ಳಿ ನಡುವಿನ ವಿದ್ಯುದ್ದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುತ್ತಿದ್ದು, ಪೂರ್ಣಗೊಂಡ ನಂತರ ಎರಡು ನಗರಗಳ ನಡುವೆ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೇ ಇಲಾಖೆ ಪ್ರಕಾರ, ಏಪ್ರಿಲ್‌ನಲ್ಲಿ ಪ್ರಾಯೋಗಿಕ ಚಾಲನೆ ಪ್ರಾರಂಭವಾಗಬೇಕಿತ್ತು ಆದರೆ ವಿದ್ಯುದ್ದೀಕರಣ ಕಾಮಗಾರಿ ವಿಳಂಬವಾದ ಕಾರಣ ಈಗ ಅದನ್ನು ಮೇಗೆ ಮುಂದೂಡಲಾಗಿದೆ.

ಈ ವರ್ಷದ ಆರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಏಪ್ರಿಲ್‌ನಲ್ಲಿ ಬೆಂಗಳೂರು ಮತ್ತು ಧಾರವಾಡಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಪರ್ಕ ಕಲ್ಪಿಸಬಹುದು ಆದರೆ ಎರಡು ತಿಂಗಳು ವಿಳಂಬವಾಗಿದೆ ಎಂದು ಹೇಳಿದ್ದರು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕಾರಣಿಗಳು ಹೊಸ ಯೋಜನೆಗಳನ್ನು ಉದ್ಘಾಟನೆ ಮಾಡುವಂತಿಲ್ಲ ಮತ್ತು ಈ ಕಾರಣದಿಂದಾಗಿ ಜೂನ್‌ನಲ್ಲಿ ವಾಣಿಜ್ಯ ಕಾರ್ಯಾಚರಣೆ ಪ್ರಾರಂಭವಾಗಬಹುದು.

Vande Bharat Express: Dharwad-Bangalore Train Operation- Know When

ರೈಲು ಸಮಯ, ಟಿಕೆಟ್ ದರ ಮತ್ತು ವೇಗದ ವಿವರಗಳನ್ನು ಇನ್ನೂ ಅಂತಿಮಗೊಳಿಸಬೇಕಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು.

ಈಗ ಕಾರ್ಯಚರಣೆಯಲ್ಲಿರುವ ವಂದೇ ಭಾರತ್‌ ರೈಲುಗಳು

ಗಾಂಧಿನಗರ- ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್: ರೈಲು ಭಾನುವಾರ ಹೊರತುಪಡಿಸಿ ಆರು ದಿನಗಳಲ್ಲಿ ಚಲಿಸುತ್ತದೆ. ರೈಲು ಮುಂಬೈ ಸೆಂಟ್ರಲ್ ನಿಂದ ಬೆಳಗ್ಗೆ 6:00 ಗಂಟೆಗೆ ಹೊರಡುತ್ತದೆ ಮತ್ತು 522 ಕಿಮೀ ದೂರವನ್ನು ಕ್ರಮಿಸುವ ಮೂಲಕ ಗಾಂಧಿನಗರ ರಾಜಧಾನಿ ನಿಲ್ದಾಣವನ್ನು ಮಧ್ಯಾಹ್ನ 12:25 ಕ್ಕೆ ತಲುಪುತ್ತದೆ.

ನವದೆಹಲಿ - ಅಂಬ್ ಅಂದೌರಾ ವಂದೇ ಭಾರತ್ ಎಕ್ಸ್‌ಪ್ರೆಸ್: ಶುಕ್ರವಾರ ಹೊರತುಪಡಿಸಿ ಆರು ದಿನಗಳಲ್ಲಿ ರೈಲು ಚಲಿಸುತ್ತದೆ. ರೈಲು ನವದೆಹಲಿ ರೈಲು ನಿಲ್ದಾಣದಿಂದ ಬೆಳಿಗ್ಗೆ 05:50 ಕ್ಕೆ ಹೊರಡುತ್ತದೆ ಮತ್ತು 11:05 ಕ್ಕೆ ಅಂಬ್ ಅನದೌರಾ ತಲುಪುತ್ತದೆ.

Vande Bharat Express: Dharwad-Bangalore Train Operation- Know When

ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್: ರೈಲು ಬುಧವಾರ ಹೊರತುಪಡಿಸಿ ಆರು ದಿನಗಳಲ್ಲಿ ಚಲಿಸುತ್ತದೆ. ರೈಲು ಚೆನ್ನೈನಿಂದ ಬೆಳಗ್ಗೆ 05:50 ಕ್ಕೆ ಹೊರಡುತ್ತದೆ ಮತ್ತು 401 ಕಿಮೀ ದೂರವನ್ನು ಕ್ರಮಿಸುವ ಮೂಲಕ 12:20 ಕ್ಕೆ ಮೈಸೂರು ಜಂಕ್ಷನ್‌ಗೆ ತಲುಪುತ್ತದೆ.

ನಾಗ್ಪುರ-ಬಿಲಾಸ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್: ಈ ರೈಲು ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್ಗಢದ ಬಿಲಾಸ್ಪುರ್ ನಡುವೆ ಸೇವೆ ಸಲ್ಲಿಸುತ್ತದೆ. ಶನಿವಾರ ಹೊರತುಪಡಿಸಿ ಆರು ದಿನ ರೈಲು ಓಡುತ್ತದೆ. ರೈಲು ನಾಗ್ಪುರ ರೈಲು ನಿಲ್ದಾಣದಿಂದ ಮಧ್ಯಾಹ್ನ 02:05 ಕ್ಕೆ ಹೊರಡುತ್ತದೆ ಮತ್ತು 07:35 ಕ್ಕೆ ಬಿಲಾಸ್ಪುರ್ ತಲುಪುತ್ತದೆ.

ಹೌರಾ - ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್: ರೈಲು ಬುಧವಾರ ಹೊರತುಪಡಿಸಿ ಆರು ದಿನಗಳಲ್ಲಿ ಚಲಿಸುತ್ತದೆ. ರೈಲು ಹೌರಾ ಜಂಕ್ಷನ್‌ನಿಂದ ಬೆಳಿಗ್ಗೆ 05:55 ಕ್ಕೆ ಹೊರಡುತ್ತದೆ ಮತ್ತು 1:25 ಕ್ಕೆ ನ್ಯೂ ಜಲ್ಪೈಗುರಿ ತಲುಪುತ್ತದೆ 454 ಕಿಮೀ ದೂರವನ್ನು ಏಳು ಗಂಟೆ ಮೂವತ್ತು ನಿಮಿಷಗಳಲ್ಲಿ ಕ್ರಮಿಸುತ್ತದೆ.

ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್: ಈ ರೈಲು ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ಬಂದರು ನಗರವಾದ ವಿಶಾಖಪಟ್ಟಣಂ ನಡುವೆ ಕಾರ್ಯನಿರ್ವಹಿಸುತ್ತದೆ. ಭಾನುವಾರ ಹೊರತುಪಡಿಸಿ ಆರು ದಿನಗಳಲ್ಲಿ ರೈಲು ಚಲಿಸುತ್ತದೆ. ರೈಲು ಸಿಕಂದರಾಬಾದ್ ಜಂಕ್ಷನ್‌ನಿಂದ ಮಧ್ಯಾಹ್ನ 3:00 ಗಂಟೆಗೆ ಹೊರಡುತ್ತದೆ ಮತ್ತು ರಾತ್ರಿ 11:30 ಕ್ಕೆ ವಿಶಾಖಪಟ್ಟಣ ರೈಲು ನಿಲ್ದಾಣವನ್ನು ತಲುಪುತ್ತದೆ.

ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್: ಮುಂಬೈ ಮತ್ತು ಸೋಲಾಪುರ ನಡುವಿನ ಈ ರೈಲು ಬುಧವಾರ ಹೊರತುಪಡಿಸಿ ಆರು ದಿನಗಳಲ್ಲಿ ಚಲಿಸುತ್ತದೆ. ರೈಲು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ (CST) ಸಂಜೆ 4:05 ಕ್ಕೆ ಹೊರಡುತ್ತದೆ ಮತ್ತು 6 ಗಂಟೆ 35 ನಿಮಿಷಗಳ ದೀರ್ಘ ಪ್ರಯಾಣವನ್ನು ಒಳಗೊಂಡು ರಾತ್ರಿ 10:40 ಕ್ಕೆ ಸೊಲ್ಲಾಪುರವನ್ನು ತಲುಪುತ್ತದೆ.

ಮುಂಬೈ-ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್: ಈ ವಂದೇ ಭಾರತ್ ರೈಲು ಮುಂಬೈ ಸಿಎಸ್‌ಟಿ ನಿಲ್ದಾಣ ಮತ್ತು ಸಾಯಿನಗರ ಶಿರಡಿ ನಡುವೆ ಚಲಿಸುತ್ತದೆ, ದೂರವನ್ನು ಐದು ಗಂಟೆ 20 ನಿಮಿಷಗಳಲ್ಲಿ ಕ್ರಮಿಸುತ್ತದೆ. ರೈಲು ಮುಂಬೈನಿಂದ ಬೆಳಗ್ಗೆ 6.20ಕ್ಕೆ ಹೊರಟು 11.40ಕ್ಕೆ ಶಿರಡಿ ತಲುಪುತ್ತದೆ. ಮಂಗಳವಾರ ಹೊರತುಪಡಿಸಿ ಆರು ದಿನ ರೈಲು ಸಂಚರಿಸುತ್ತದೆ.

ಹಜರತ್ ನಿಜಾಮುದ್ದೀನ್- ರಾಣಿ ಕಮಲಾಪತಿ ನಿಲ್ದಾಣ ವಂದೇ ಭಾರತ್ ಎಕ್ಸ್‌ಪ್ರೆಸ್: ರೈಲು ಹೊಸ ದೆಹಲಿ ರೈಲು ನಿಲ್ದಾಣದ ಬದಲಿಗೆ ಭೋಪಾಲ್‌ನಿಂದ ಹಜರತ್ ನಿಜಾಮುದ್ದೀನ್ ನಿಲ್ದಾಣಕ್ಕೆ ಕಾರ್ಯನಿರ್ವಹಿಸುತ್ತದೆ - ಅರ್ಧ ಘಂಟೆಯ ಸಮಯವನ್ನು ಉಳಿಸಲು. ಈ ರೈಲು 700 ಕಿ.ಮೀ ದೂರವನ್ನು ಏಳು ಗಂಟೆ 45 ನಿಮಿಷಗಳಲ್ಲಿ ಕ್ರಮಿಸುತ್ತದೆ. ಇದು ಶನಿವಾರ ಹೊರತುಪಡಿಸಿ ಆರು ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಭೋಪಾಲ್‌ನಿಂದ ಬೆಳಗ್ಗೆ 5:55ಕ್ಕೆ ಹೊರಟು ಮಧ್ಯಾಹ್ನ 1:45ಕ್ಕೆ ದೆಹಲಿ ತಲುಪುತ್ತದೆ.

ಸಿಕಂದರಾಬಾದ್- ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್: ರೈಲು ಎರಡು ನಗರಗಳ ನಡುವೆ 660 ಕಿಮೀ ದೂರವನ್ನು ಎಂಟು ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ರೈಲು ಬೆಳಗ್ಗೆ 6 ಗಂಟೆಗೆ ಸಿಕಂದರಾಬಾದ್‌ನಿಂದ ಮತ್ತು ತಿರುಪತಿಗೆ ಮಧ್ಯಾಹ್ನ 2:30 ಕ್ಕೆ ತಲುಪಲಿದೆ. ಮಂಗಳವಾರ ಹೊರತುಪಡಿಸಿ ಆರು ದಿನ ಇದು ಕಾರ್ಯನಿರ್ವಹಿಸಲಿದೆ.

ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಈ ವಂದೇ ಭಾರತ್ ರೈಲು ಚೆನ್ನೈ ಮತ್ತು ಕೊಯಮತ್ತೂರು ನಡುವೆ ಆರು ಗಂಟೆ 10 ನಿಮಿಷಗಳಲ್ಲಿ 495 ಕಿಮೀ ದೂರವನ್ನು ಕ್ರಮಿಸುತ್ತದೆ. ಇದು ಬುಧವಾರ ಹೊರತುಪಡಿಸಿ ಆರು ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ರೈಲು ಕೊಯಮತ್ತೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 12.10ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ.

ಅಜ್ಮೀರ್-ದೆಹಲಿ ಕ್ಯಾಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್: ಇತ್ತೀಚಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಜ್ಮೀರ್ ಮತ್ತು ದೆಹಲಿ ಕ್ಯಾಂಟ್ ನಡುವೆ ಕಾರ್ಯನಿರ್ವಹಿಸಲಿದ್ದು, ಜೈಪುರ್, ಅಲ್ವಾರ್ ಮತ್ತು ಗುರ್ಗಾಂವ್‌ನಲ್ಲಿ ನಿಲುಗಡೆಯಾಗಲಿದೆ. ಗಮನಾರ್ಹವಾಗಿ, ಅಜ್ಮೀರ್-ದೆಹಲಿ ಕ್ಯಾಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು. ಇದು ದೆಹಲಿ ಕಂಟೋನ್ಮೆಂಟ್ ಮತ್ತು ಅಜ್ಮೀರ್ ನಡುವಿನ ಅಂತರವನ್ನು ಐದು ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+