ಕರ್ನಾಟಕಕ್ಕೆ ನೂತನ ರಾಜ್ಯಪಾಲರ ನೇಮಕ

ಬೆಂಗಳೂರು, ಆ.26 : ಹಲವು ದಿನಗಳಿಂದ ಖಾಲಿ ಇದ್ದ ಕರ್ನಾಟಕದ ರಾಜ್ಯಪಾಲ ಹುದ್ದೆ ಭರ್ತಿಯಾಗಿದೆ. ವಜುಭಾಯ್ ರುಡಾಭಾಯ್ ವಾಲಾ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಕಗೊಳಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಮಂಗಳವಾರ ಕೇಂದ್ರ ಸರ್ಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಗುಜರಾತ್ ಸ್ಪೀಕರ್ ಆಗಿದ್ದ ರುಡಾಭಯ್ ಅವರನ್ನು ಕರ್ನಾಟಕದ ರಾಜ್ಯಪಾಲರಾಗಿ ನೇಮಿಸಲಾಗಿದೆ.

Vajubhai Rudabhai Vala

ಸದ್ಯ, ಗುಜರಾತ್ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಜುಭಾಯ್ ರುಡಾಭಾಯ್ ವಾಲಾ (76) ಅವರು ರಾಜ್‌ಕೋಟ್‌ ವಿಧಾನಸಭಾ ಕ್ಷೇತ್ರದ ಶಾಸಕರು. ಗುಜರಾತ್ ಸರ್ಕಾರದಲ್ಲಿ ಎರಡು ಬಾರಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ವಜುಭಾಯ್ ಅವರು ಹೊಂದಿದ್ದಾರೆ. [ವಜುಭಾಯಿ ಅವರ ಪರಿಚಯ ಇಲ್ಲಿದೆ]

ಈ ಹಿಂದೆ ಕರ್ನಾಟಕದ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ತಮ್ಮ ಅವಧಿ ಮುಗಿದ ಹಿನ್ನಲೆಯಲ್ಲಿ ಜೂ.28 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ, ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರಿಗೆ ರಾಜ್ಯದ ಹೆಚ್ಚುವರಿ ಹೊಣೆಯನ್ನು ನೀಡಲಾಗಿತ್ತು.

ನೂತನವಾಗಿ ಆಯ್ಕೆಯಾದ ರಾಜ್ಯಪಾಲರು

ಮಹಾರಾಷ್ಟ್ರ -ವಿದ್ಯಾಸಾಗರ್ ರಾವ್
ರಾಜಸ್ಥಾನ -ಕಲ್ಯಾಣ್ ಸಿಂಗ್
ಗೋವಾ - ಮೃದುಲಾ ಸಿನ್ಹಾ
ಕರ್ನಾಟಕ - ವಜುಭಾಯ್ ರುಡಾಭಾಯ್ ವಾಲಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+